ಬೆಂಗಳೂರು(ನ.01): ಬಿಎಂಟಿಸಿ ಬಸ್‌ಗಳ ಸುಗುಮ ಸಂಚಾರಕ್ಕೆ ಅನುವು ಮಾಡುವ ಉದ್ದೇಶದಿಂದ ಪ್ರಾಯೋಗಿಕವಾಗಿ ಕೆ.ಆರ್‌.ಪುರಂನ ಟಿನ್‌ ಫ್ಯಾಕ್ಟರಿ- ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಮಾರ್ಗದಲ್ಲಿ ನಿರ್ಮಿಸಲಾಗುತ್ತಿರುವ ‘ಪ್ರತ್ಯೇಕ ಪಥ’ ಕಾಮಗಾರಿ ವಿಳಂಬವಾಗಿರುವುದರಿಂದ ಪ್ರಾಯೋಗಿಕ ಕಾರ್ಯಾಚರಣೆ ನವೆಂಬರ್‌ ಒಂದರ ಬದಲು ನ.15ರಿಂದ ಆರಂಭಿಸಲು ನಿರ್ಧರಿಸಲಾಗಿದೆ.

ಕೆ.ಆರ್‌.ಪುರ ಟಿನ್‌ ಫ್ಯಾಕ್ಟರಿಯಿಂದ ಸಿಲ್‌್ಕಬೋರ್ಡ್‌ ಜಂಕ್ಷನ್‌ವರೆಗಿನ 18 ಕಿ.ಮೀ.ಗಳ ಪೈಕಿ ನ.1ರ ವೇಳೆಗೆ 10 ಕಿ.ಮೀ. ಪ್ರತ್ಯೇಕ ಪಥ ನಿರ್ಮಿಸಿ ಬಸ್‌ ಕಾರ್ಯಾಚರಣೆ ಮಾಡುವುದಾಗಿ ಬಿಎಂಟಿಸಿ ಹೇಳಿತ್ತು. ಬಿಬಿಎಂಪಿ ಪ್ರತ್ಯೇಕ ಪಥ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, ಬುಲ್ಲಾರ್ಡ್‌ ಅಳವಡಿಕೆ ವಿಳಂಬವಾಗುತ್ತಿದೆ.

ಆ್ಯಂಬುಲೆನ್ಸ್‌, ಅಗ್ನಿಶಾಮಕದಳ, ಪೊಲೀಸ್‌ಗೆ ಒಂದೇ ಸಂಖ್ಯೆ 112.

ಹಾಗಾಗಿ ನಿಗದಿತ ಅವಧಿಯಲ್ಲಿ 10 ಕಿ.ಮೀ. ಪ್ರತ್ಯೇಕ ಪಥ ನಿರ್ಮಾಣ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ನ.15ರ ಹೊತ್ತಿಗೆ 10 ಕಿ.ಮೀ. ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.

ಪ್ರಸ್ತುತ 6 ಕಿ.ಮೀ. ಉದ್ದದ ಪ್ರತ್ಯೇಕ ಪಥ ನಿರ್ಮಿಸಲಾಗಿದೆ. ಬಸ್‌ಗಳ ಜತೆಗೆ ಖಾಸಗಿ ವಾಹನಗಳು ಸಂಚರಿಸುತ್ತಿವೆ. ಜತೆಗೆ ಮಳೆಯಿದ್ದ ಕಾರಣ ಮಾರ್ಕಿಂಗ್‌ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಸ್‌ ಪಥಕ್ಕಾಗಿ ಅಳವಡಿಸಬೇಕಿದ್ದ ಬುಲ್ಲಾರ್ಡ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬಸ್‌ ಪಥ ಯೋಜನೆ ನಿಗದಿತ ಅವಧಿಯಲ್ಲಿ ಆರಂಭಿಸಲು ಹಿನ್ನಡೆಯಾಗಿದೆ ಎಂದಿದ್ದಾರೆ.

ಇಂದಿನಿಂದ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಇರಲೇ ಬೇಕು..!