ಬೆಂಗಳೂರು (ಡಿ.18): ಪಿಎಫ್‌ಐ ಸಂಘಟನೆ ಮೇಲೆ ಖಾಕಿ ಹದ್ದಿನ ಕಣ್ಣು ಇರಿಸಿದೆ.  ಪಿಎಫ್‌ಐ ಕಾರ್ಯಕರ್ತರ ಚಟುವಟಿಕೆ ಮೇಲೆ ಸೂಪರ್ ಕಾಪ್ ನಿಗಾ ವಹಿಸಿದೆ. 

ಬೆಂಗಳೂರು,ಮೈಸೂರು,ಹುಬ್ಬಳ್ಳಿ-ಧಾರವಾಡ,ಮಂಗಳೂರು ಬೆಳಗಾವಿ,ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯ ಗುಪ್ತವಾರ್ತೆಯಿಂದ ಪೊಲೀಸ್ ಕಮಿಷನರ್ ಗಳಿಗೆ ಸೂಚನೆ ನೀಡಲಾಗಿದೆ. 

ಇಂದಿನಿಂದ ಪಿಎಫ್ಐ ನಿಂದ ದೇಶಾದ್ಯಂತ ಅಭಿಯಾನ ಆರಂಭವಾಗಿದ್ದು, ಪಿಎಫ್ಐ ಕಚೇರಿ ಹಾಗೂ ಮುಖಂಡರ ಮನೆ ಮೇಲೆ ದಾಳಿ ಖಂಡಿಸಿ ಅಭಿಯಾನ ನಡೆಸಲಾಗುತ್ತದೆ.

 ಸಿಎಎ ಗದ್ದಲಕ್ಕೆ ಹಣ ಪೂರೈಕೆ: ಪಿಎಫ್‌ಐಗೆ ಇ.ಡಿ ದಾಳಿ ಬಿಸಿ ..

ಇಡಿ,ಎನ್ಐಎ,ಬಿಜೆಪಿ ಸರ್ಕಾರದ ಕೈಗೊಂಬೆಯಾಗಿದೆ. ಬಿಜೆಪಿಯಿಂದ ಈ ಸರ್ಕಾರಿ ಸಂಸ್ಥೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ.  ಪಿಎಫ್ಐ,ಸಿಎಫ್ಐ ಸಂಘಟನೆಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಈ ಬಗ್ಗೆ  ತಿಳಿ ಹೇಳುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಭಿತ್ತಿ ಪತ್ರ ಅಂಟಿಸುವುದು, ಕರ ಪತ್ರ ಹಂಚುವುದು.  ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟಿಸುವ ಸಾಧ್ಯತೆ ಹಿನ್ನೆಲೆ ಪಿಎಫ್‌ಐ ಕಾರ್ಯಕರ್ತರ ಮೇಲೆ ನಿಗಾ ಇಡಲಾಗುತ್ತಿದೆ. ಮುಂಜಾಗ್ರತ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಲಾಗಿದೆ.