Asianet Suvarna News Asianet Suvarna News

Police Department: ರಜೆಗಳನ್ನು ತ್ಯಾಗ ಮಾಡುವ ಪೊಲೀಸರಿಗೆ ಶುಭ ಸುದ್ದಿ: ಗಳಿಕೆ ರಜೆ ನಗದೀಕರಣಕ್ಕೆ ಒಪ್ಪಿಗೆ

ರಜೆಯನ್ನು ತ್ಯಾಗ ಮಾಡುವ ಪೊಲೀಸ್‌ ಅಧಿಕಾರಿಗಳಿಗೆ 2023ನೇ ಸಾಲಿನ ತಮ್ಮ 15 ದಿನ ಗಳಿಕೆ ರಜೆಯನ್ನು ನಗದೀಕರಣಕ್ಕೆ ಸರ್ಕಾರ ಅನುಮತಿಯನ್ನು ನೀಡಿದೆ.

Police Department Good news for duty sacrificing cops Earned leave encashment agreed sat
Author
First Published Jan 14, 2023, 12:04 PM IST

ಬೆಂಗಳೂರು (ಜ.14): ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ರಜೆಗಳನ್ನು ಪಡೆಯುವುಯದಕ್ಕೆ ಭಾರೀ ಸಮಸ್ಯೆಯಿದೆ. ರಜೆಯನ್ನು ತ್ಯಾಗ ಮಾಡುವ ಪೊಲೀಸ್‌ ಅಧಿಕಾರಿಗಳಿಗೆ 2023ನೇ ಸಾಲಿನ ತಮ್ಮ 15 ದಿನ ಗಳಿಕೆ ರಜೆಯನ್ನು ನಗದೀಕರಣಕ್ಕೆ ಸರ್ಕಾರ ಅನುಮತಿಯನ್ನು ನೀಡಿದೆ. ಈ ಮೂಲಕ ರಜೆ ತ್ಯಾಗ ಮಾಡುವ ಪೊಲೀಸರಿಗೆ ಸಿಹಿ ಸುದ್ದಿಯೊಂದನ್ನು ಸರ್ಕಾರ ಕರುಣಿಸಿದೆ.

ಸರ್ಕಾರಿ ನೌಕರರಲ್ಲಿ ರಜೆಗಳು ಸಿಗದೇ ಪರದಾಡುವ ಇಲಾಖೆಯಿದ್ದರೆ ಅದು ಪೊಲೀಸ್‌ ಮತ್ತು ಅರೋಗ್ಯ ಇಲಾಖೆಯಾಗಿದೆ. ಅದರಲ್ಲಿಯೂ ಪೊಲೀಸ್‌ ಇಲಾಖೆಯಲ್ಲಿ ರಜೆಗಳು ಸಿಗದೇ ಅದೆಷ್ಟೋ ಕುಟುಂಬಗಳಲ್ಲಿ ವೈಮನಸ್ಸು ಕೂಡ ಬಂದಿವೆ. ಆದರೆ, ಇತ್ತೀಚೆಗೆ ಹೊಸದಾಗಿ ಮದುವೆಯಾಗಿದ್ದ ಪೊಲೀಸ್‌ ಪೇದೆಯೊಬ್ಬರು ತನ್ನ ಹೆಂಡತಿಯ ಜೊತೆ ಸಮಯ ಕಳೆಯುವುದಕ್ಕಾಗಿ ರಜೆಯನ್ನು ಕೊಡುವಂತೆ ವಿಚಿತ್ರವಾಗಿ ಮನವಿ ಮಾಡಿದ್ದ ರಜೆಯ ಪತ್ರ ವೈರಲ್‌ ಆಗಿತ್ತು.

 

ಪೊಲೀಸ್‌ ಐಟಿ ಕಾರ್ಯನಿರ್ವಹಣೆಯಲ್ಲಿ ಬೆಳಗಾವಿ ಜಿಲ್ಲೆಯೇ ಫಸ್ಟ್‌..!

ಯಾವಾಗಲೂ ಕುಟುಂಬದ ಕಾರ್ಯಕ್ರಮಗಳು, ಹಬ್ಬ- ಹರಿದಿನಗಳು ಹಾಗೂ ಇತರೆ ಘಟನೆಗಳಲ್ಲಿ ಭಾಗವಹಿಸಲು ಸಾಧ್ಯವಾಗದೇ ನೋವು ಅನುಭವಿಸುತ್ತಿರುತ್ತಾರೆ. ಹೀಗೆ, ಕಳೆದ 2022ನೇ ಸಾಲಿನಲ್ಲಿ ತಮ್ಮ 15ದಿನದ ಗಳಿಕೆ ರಜೆಯನ್ನು ಬ್ಲಾಕ್ ಮಾಡಿ ನಗದೀಕರಣ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಈಗ 2023ನೇ ಸಾಲಿನ ಅವಧಿಯಲ್ಲಿಯೂ ಕೂಡ ಜ.1 ರಿಂದ ಡಿ.31ರ ಒಳಗಾಗಿ ಪೊಲೀಸ್‌ ಅಧಿಕಾರಿಗಳು ತಮಗೆ ಲಭ್ಯವಿರುವ 15 ದಿನದ ಗಳಿಕೆ ರಜೆಯನ್ನು ಯಾವುದೇ ತಿಂಗಳಿನಲ್ಲಿ ಬ್ಲಾಕ್‌ ಮಾಡಿಸಿ ನಗದೀಕರಣ ಮಾಡಿಸಿಕೊಳ್ಳಲು ಅನುಮತಿಯನ್ನು ನೀಡಿದೆ.

ಸರ್ಕಾರಿ ಆದೇಶದಲ್ಲಿ ಏನಿದೆ?
ಸರ್ಕಾರಿ ಆದೇಶ ಸಂಖ್ಯೆ: ಆಇ 17)ಸೇನಿಸೇ 2022 ಬೆಂಗಳೂರು, ದಿನಾಂಕ:17-12-2022 ಸರ್ಕಾರವು 2023 ನೇ ಸಾಲಿನ ಬ್ಲಾಕ್‌ ಅವಧಿಯಲ್ಲಿ ರಾಜ್ಯ ಸರ್ಕಾರಿ ನೌಕರರು ಗರಿಷ್ಟ 15 ದಿನಗಳಿಗೆ ಮೀರದ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯ ಪಡೆಯುವ ಯೋಜನೆಯನ್ನು ಜಾರಿಗೊಳಿಸಿ ಆದೇಶಿಸಿದೆ. ಎಲ್ಲಾ ವೃಂದದ ಅರ್ಹ ಅಧಿಕಾರಿ/ನೌಕರರು ಒಂದು ತಿಂಗಳ ಮುಂಚಿತ ನೋಟಿಸ್‌ ನೀಡಿ 01/01/2023 ರಿಂದ 31/12/2023 ರವರೆಗಿನ ಅವಧಿಯಲ್ಲಿ ಅವರ ಇಚ್ಛೆಯಂತೆ ಯಾವುದೇ ತಿಂಗಳಿನಲ್ಲಿ ಗಳಿಕೆ ರಜೆ ನಗದೀಕರಣದ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ದರೋಡೆಕೋರರು ಅರೆಸ್ಟ್‌

ಎಚ್ಆರ್‌ಎಂಎಸ್‌ನಲ್ಲಿ ರಜೆ ಲಭ್ಯತೆ ಪರಿಗಣಿಸಿ ನಗದೀಕರಣ:  
ಗೆಜೆಟೆಡ್ ಅಧಿಕಾರಿಗಳ ಸಂಬಂಧದಲ್ಲಿ 2023 ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ ಮಂಜೂರಾತಿ ಉದ್ದೇಶಕ್ಕಾಗಿ ಮಾತ್ರ ಹೆಚ್.ಆರ್.ಎಂ.ಎಸ್ ನಲ್ಲಿ ಲಭ್ಯವಿರುವ ಅಧಿಕಾರಿಗಳ ಗಳಿಕೆ ರಜೆ ಲೆಕ್ಕಾಚಾರದ ಆಧಾರದ ಮೇಲೆ ನಗದೀಕರಣವನ್ನು ಮಂಜೂರು ಮಾಡಲು ಸಕ್ಷಮ ರಜೆ ಮಂಜೂರಾತಿ ಪ್ರಾಧಿಕಾರಿಗಳು ಕ್ರಮವಹಿಸತಕ್ಕದ್ದು, ಮತ್ತು ಮಹಾಲೇಖಪಾಲರು ಲೆಕ್ಕಾಚಾರದ ಬಗ್ಗೆ ಯಾವುದೇ ವ್ಯತ್ಯಾಸವನ್ನು ತಿಳಿಸಿದಲ್ಲಿ ಅದನ್ನು ಸರಿಪಡಿಸುವ ಮತ್ತು ಅದರನ್ವಯದ ಆರ್ಥಿಕ ಸೌಲಭ್ಯಗಳಿಗೆ ಮಾತ್ರ ಅರ್ಹವಾಗುವ ಷರತ್ತಿಗೊಳಪಡಿಸಿ ಮಂಜೂರು ಮಾಡತಕ್ಕದ್ದು. 2023ನೇ ಸಾಲಿನ ಬ್ಲಾಕ್ ಅವಧಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಗರಿಷ್ಟ 15 ದಿನಗಳಿಗೆ ಮೀರದ ಗಳಿಕೆ ರಜೆಯನ್ನು ಆಧ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣಕ್ಕೆ ಅನುಮತಿಸಿ ಆದೇಶಿಸಲಾಗಿದೆ.

Follow Us:
Download App:
  • android
  • ios