Asianet Suvarna News Asianet Suvarna News

ಬೆಂಗಳೂರಿಗೆ ನಾಳೆ ಮೋದಿ ಆಗಮನ: ಸಂಚಾರದಲ್ಲಿ ವ್ಯತ್ಯಯ, ಮನೆಯಿಂದ ಹೊರಡುವಾಗ ಹುಷಾರು!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನ. 11ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರ ಹಾಗೂ ಪ್ರಧಾನಿ ಅವರ ಭದ್ರತಾ ದೃಷ್ಟಿಯಿಂದ ಈ ಕೆಳಕಂಡ ಮಾರ್ಗಗಳಲ್ಲಿ ಬೆಳ್ಳಿಗೆ 08:00 ಗಂಟೆಯಿಂದ ಮಧ್ಯಾಹ್ನ 02:00 ಗಂಟೆಯವರೆಗೆ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ. 

pm narendra modi visits bengaluru these roads closed traffic police informed alternative roads gvd
Author
First Published Nov 10, 2022, 1:11 PM IST

ಬೆಂಗಳೂರು (ನ.10): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನ. 11ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರ ಹಾಗೂ ಪ್ರಧಾನಿ ಅವರ ಭದ್ರತಾ ದೃಷ್ಟಿಯಿಂದ ಈ ಕೆಳಕಂಡ ಮಾರ್ಗಗಳಲ್ಲಿ ಬೆಳ್ಳಿಗೆ 08:00 ಗಂಟೆಯಿಂದ ಮಧ್ಯಾಹ್ನ 02:00 ಗಂಟೆಯವರೆಗೆ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ. 

ಎಲ್ಲೆಲ್ಲಿ ನಿರ್ಬಂಧ: ಸಿಟಿಓ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ಸರ್ಕಲ್, ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ, ಏರ್‌ಪೋರ್ಟ್ ಎಲಿವೇಟೆಡ್ ಕಾರಿಡಾರ್ ರಸ್ತೆ, ಶೇಷಾದ್ರಿ ರಸ್ತೆಯಲ್ಲಿ ಮಹಾರಾಣಿ ಬ್ರಿಡ್ಜ್‌ನಿಂದ ರೈಲ್ವೆ ಸ್ಟೇಷನ್ ಪ್ರವೇಶ ದ್ವಾರದವರೆಗೆ, ಕೆ.ಜಿ ರಸ್ತೆಯಲ್ಲಿ ಶಾಂತಲಾ ಜಂಕ್ಷನ್‌ನಿಂದ ಮೈಸೂರು ಬ್ಯಾಂಕ್‌ ಸರ್ಕಲ್‌ವರೆಗೆ, ವಾಟಾಳ್ ನಾಗರಾಜ್ ರಸ್ತೆಯಲ್ಲಿ ಖೋಡೆ ಅಂಡರ್‌ಪಾಸ್‌ನಿಂದ ಪಿ.ಎಫ್‌ವರೆಗೆ, ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನ ಸುತ್ತ ಮತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ನ.11ರಂದು ಬೆಂಗಳೂರಲ್ಲಿ ಪ್ರಧಾನಿ ಮೋದಿ ಮಿಂಚಿನ ಸಂಚಾರ

ಪರ್ಯಾಯ ಮಾರ್ಗಗಳು: ಮೈಸೂರು ಬ್ಯಾಂಕ್‌ ವೃತ್ತದಿಂದ ಪ್ಯಾಲೇಸ್ ರಸ್ತೆಗೆ ಬರುವ ವಾಹನ ಸವಾರರು ಕೆ.ಜಿ. ರಸ್ತೆಯ ಮೂಲಕ, ಎಲ್‌ಆರ್‌ಡಿಇ ವೃತ್ತದಿಂದ ಬಸವೇಶ್ವರ ವೃತ್ತದ ಕಡೆಗೆ ಸಂಚರಿಸುವವರು ರಾಜಭವನ ರಸ್ತೆ ಮೂಲಕ ಮುಂದೆ, ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್ ಮೂಲಕ ಬರುವವರು ರೇಸ್‌ ವ್ಯೂವ್ ಸರ್ಕಲ್‌ನಲ್ಲಿ ಹಾಗೂ ಶಿವಾನಂದ ಸರ್ಕಲ್‌ನಲ್ಲಿ ಎಡತಿರುವು ತೆಗೆದುಕೊಂಡು ನೆಹರು ಸರ್ಕಲ್ ಮೂಲಕ, ಕೆಕೆ ರಸ್ತೆ ಮೂಲಕ ವಿಂಡ್ಸ್‌ ಮ್ಯಾನರ್ ವೃತ್ತಕ್ಕೆ ತೆರಳುವ ವಾಹನ ಸವಾರರು ಶಿವಾನಂದ ಸರ್ಕಲ್‌ನಿಂದ ನೆಹರು ಸರ್ಕಲ್‌ ಮೂಲಕ, ಬಿಹೆಚ್‌ ಇಎಲ್ ಸರ್ಕಲ್‌ನಿಂದ ಮೇಕ್ರಿ ಸರ್ಕಲ್ ಕಡೆಗೆ ಬರುವ ವಾಹನ ಸವಾರರು ಸದಾಶಿವನಗರ ಪೊಲೀಸ್ ಠಾಣೆ- ಮಾರಮ್ಮ ಸರ್ಕಲ್- ಮಾರ್ಗೋಸ ರಸ್ತೆ ಮೂಲಕ‌ ಹೋಗಲು ಅವಕಾಶ ಕಲ್ಪಿಸಲಾಗಿದೆ.

ಭಾಷ್ಯಂ ಸರ್ಕಲ್‌ನಿಂದ ಕಾವೇರಿ ಜಂಕ್ಷನ್ ಕಡೆಗೆ ಬರುವ ವಾಹನ ಸವಾರರು ಮಲ್ಲೇಶ್ವರಂ 18ನೇ ಕ್ರಾಸ್- ಮಾರ್ಗೋಸ ರಸ್ತೆಯ ಮೂಲಕ, ಕ್ವೀನ್ಸ್ ವೃತ್ತದಿಂದ ಸಿ.ಟಿ.ಓ ಕಡೆಗೆ ಬರುವ ವಾಹನ ಸವಾರರು ಸಿದ್ದಲಿಂಗಯ್ಯ ವೃತ್ತ- ಆರ್.ಆರ್.ಎಂ.ಆರ್. ರಸ್ತೆಯ ಮೂಲಕ, ಬಾಳೇಕುಂದ್ರಿ ಜಂಕ್ಷನ್‌ನಿಂದ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ವಾಹನಗಳು ಕನ್ನಿಂಗ್ ಹ್ಯಾಂ ರಸ್ತೆ ಮೂಲಕ ಸಂಚರಿಸಲು‌ ಅವಕಾಶ ಮಾಡಿಕೊಡಲಾಗಿದೆ.

ಶುಕ್ರವಾರ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ, ಕಾರ್ಯಕ್ರಮವೇನು?: 5 ಸರಣಿ ಕಾರ್ಯಕ್ರಮಗಳಲ್ಲಿ ಸಿಎಂ ಮೋದಿ ಭಾಗಿಯಾಗಲಿದ್ದು, ನ.11 ಬೆಳಗ್ಗೆ 10ಕ್ಕೆ ಎಚ್​ಎಎಲ್​ ಏರ್​ಪೋರ್ಟ್​ಗೆ ಮೋದಿ ಆಗಮಿಸಲಿದ್ದಾರೆ.

ಬೆಳಗ್ಗೆ 10.30ಕ್ಕೆ ರಸ್ತೆ ಮಾರ್ಗವಾಗಿ ವಿಧಾನಸೌಧಕ್ಕೆ ಮೋದಿ ಭೇಟಿ
ಬೆಳಗ್ಗೆ 10.32ಕ್ಕೆ ಕನಕದಾಸ ಪ್ರತಿಮೆಗೆ ಮೋದಿ ಮಾಲಾರ್ಪಣೆ
ಬೆಳಗ್ಗೆ 10.36ಕ್ಕೆ ವಾಲ್ಮೀಕಿ ಪ್ರತಿಮೆಗೆ ಮೋದಿ ಮಾಲಾರ್ಪಣೆ

ಬೆಳಗ್ಗೆ 10.40ಕ್ಕೆ ವಿಧಾನಸೌಧದಿಂದ ರೈಲ್ವೆ ನಿಲ್ದಾಣಕ್ಕೆ ಮೋದಿ ಭೇಟಿ
ಬೆಳಗ್ಗೆ 10.50ಕ್ಕೆ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಮೋದಿ ಚಾಲನೆ
ಬೆಳಗ್ಗೆ 11ಕ್ಕೆ ಕಾಶಿ ವಿಶೇಷ ರೈಲಿಗೆ ಮೋದಿ ಚಾಲನೆ

218 ಟನ್‌ ತೂಕದ ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಅಂತಿಮ ಹಂತದ ಸಿದ್ಧತೆ

ಬೆಳಗ್ಗೆ 11.10ಕ್ಕೆ ಹೆಬ್ಬಾಳ ಏರ್​ಫೋರ್ಸ್​ಗೆ ಮೋದಿ ಭೇಟಿ
ಬೆಳಗ್ಗೆ 11.20ಕ್ಕೆ ಹೆಲಿಕಾಪ್ಟರ್​ ಮೂಲಕ ಕೆಂಪೇಗೌಡ ಏರ್​ಪೋರ್ಟ್​ಗೆ ಭೇಟಿ
ಬೆಳಗ್ಗೆ 11.50ಕ್ಕೆ ಏರ್​ಪೋರ್ಟ್​ ಟರ್ಮಿನಲ್ -2 ಉದ್ಘಾಟನೆ

ಮಧ್ಯಾಹ್ನ 12.10ಕ್ಕೆ ಕೆಂಪೇಗೌಡ ಪ್ರತಿಮೆ ಅನಾವರಣ
ಮಧ್ಯಾಹ್ನ 12.50ಕ್ಕೆ ಕೆಂಪೇಗೌಡ ಪ್ರತಿಮೆ ಉದ್ಘಾಟನಾ ಸಮಾರಂಭ
ಮಧ್ಯಾಹ್ನ 12.58ಕ್ಕೆ ಕೆಂಪೇಗೌಡ, ಒನಕೆ ಓಬವ್ವ, ಕನಕದಾಸ ಭಾವಚಿತ್ರಕ್ಕೆ ಪುಷ್ಪಾರ್ಚನೆ
ಮಧ್ಯಾಹ್ನ 1.35ಕ್ಕೆ  ಕೆಂಪೇಗೌಡ ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಮೋದಿ ಭಾಷಣ
 

Follow Us:
Download App:
  • android
  • ios