ಕಳೆದ ಮೂರು ದಿನಗಳಿಂದ ವಿದೇಶ ಪ್ರವಾಸ, ಅದರ ನಡುವೆ ಚಂದ್ರಯಾನದ ಯಶಸ್ಸಿನ ಸಂಭ್ರಮ ಈ ಎಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗಳನ್ನು ಖುದ್ದು ಭೇಟಿಯಾಗಿ ಅಭಿನಂದನೆ ಸಲ್ಲಿಸಲಿದ್ದಾರೆ.

ಬೆಂಗಳೂರು (ಆ.26): ಬ್ರಿಕ್ಸ್‌ ಶೃಂಗಸಭೆಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ, ಆ ಬಳಿಕ ಗ್ರೀಸ್‌ ಪ್ರಧಾನಿಯ ಆಹ್ವಾನದ ಮೇರೆಗೆ ಅಥೇನ್ಸ್‌ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದಲೇ ತಡರಾತ್ರಿಯೇ ಪ್ರಯಾಣ ಆರಂಭಿಸಿದ ಮುಂಜಾನೆ ಬೆಂಗಳೂರಿಗೆ ಬಂದಿದ್ದರು. ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ 24 ಕಿಲೋಮೀಟರ್‌ ದೂರವನ್ನು ರಸ್ತೆ ಮಾರ್ಗವಾಗಿ ತೆರಳಿದ ಪ್ರಧಾನಿ ಮೋದಿಗೆ ಬೆಂಗಳೂರಿನ ಜನತೆ ತ್ರಿವರ್ಣ ಧ್ವಜ ಹಿಡಿದು ಸ್ವಾಗತಿಸಿದರು. ಬಿಗು ಭದ್ರತೆಯ ನಡುವೆ ಪ್ರಯಾಣ ಮಡಿದ ಪ್ರಧಾನಿ ಮೋದಿ, ಜಾಲಹಳ್ಳಿ ಕ್ರಾಸ್‌ನಲ್ಲಿ ತಮ್ಮ ಬೆಂಗಾವಲು ಪಡೆ ಬಂದಾಗ ಕಾರ್‌ನಿಂದ ಹೊರಬಂದು ಜನಸಾಗರದತ್ತ ಕೈಬೀಸಿ ಮುನ್ನಡೆದರು. ಅಲ್ಲಿಂದ ಅವರು ಕಾರ್‌ನ ಫುಟ್‌ಬೋರ್ಡ್‌ ಮೇಲೆ ನಿಂತು, ನೆರೆದಿದ್ದ ಜನರತ್ತ ಕೈಬೀಸಿದರು. ಬಹಳ ದೊಡ್ಡ ಸಂಖ್ಯೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಜನ ಸೇರಿದ್ದರು. ಮೋದಿ ಸ್ವಾಗತಕ್ಕಾಗಿ ಸಾವಿರಾರು ಜನರು ಭಾರತದ ಬಾವುಟ ಹಿಡಿದುಕೊಂಡಿದ್ದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಹೂ ಮಳೆ ಸುರಿಸಿ ಸ್ವಾಗತ ನೀಡಿದ್ದರು. ಇದು ಚಂದ್ರಯಾನ-3 ಯಶಸ್ಸು, ಅದಕ್ಕಾಗಿ ಇಸ್ರೋ ವಿಜ್ಞಾನಿಗಳ ಭೇಟಿಯಾಗಿದ್ದ ಕಾರಣಕ್ಕಾಗಿ ಎಲ್ಲಿಯೂ ಬಿಜೆಪಿ ಪಕ್ಷದ ಧ್ವಜ ಕಾಣಿಸಲಿಲ್ಲ. ಕಂಡಲೆಲ್ಲಾ ತ್ರಿವರ್ಣ ಧ್ವಜ ಮಾತ್ರವೇ ಕಾಣುತ್ತಿತ್ತು.

ಅಂದಾಜು 24 ಕಿಲೋಮೀಟರ್ ದೂರದ ಪ್ರಯಾಣದಲ್ಲಿ ಜಾಲಹಳ್ಳಿ ಕ್ರಾಸ್‌ ಬಳಿ ಅವರು ಕಾರು ಬಂದಾಗ ಅಲ್ಲಿಯೇ ಕೆಲ ಹೊತ್ತು ನಿಂತುಕೊಂಡರು. ಅಲ್ಲಿಂದ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ರೀತಿಯಲ್ಲಿ ಇಸ್ರೋ ಕಚೇರಿಗೆ ತೆರಳಿದರು. ಈ ವೇಳೆ ರಸ್ತೆಯ ಅಕ್ಕ-ಪಕ್ಕದಲ್ಲಿದ್ದ ಜನರು ಮೋದಿ, ಮೋದಿ ಎಂದು ಜೈಕಾರ ಕೂಗಿದರು. ಈ ವೇಳೆ ಮತ್ತೊಮ್ಮೆ ಮೋದಿ ಎನ್ನುವ ಜೈಕಾರ ಕೂಡ ಕೇಳಿ ಬಂದವು.

PM Modi Isro Visit: ಸ್ವಾಗತ ಶಿಷ್ಟಾಚಾರ ಬೇಡ, ವಿಜ್ಞಾನಿಗಳ ಭೇಟಿಗೆ ಬಂದಿದ್ದೇನೆ: ಪ್ರಧಾನಿ ಮೋದಿ

ಹೆಚ್ಚೂಕಡಿಮೆ 10 ನಿಮಿಷಗಳ ಕಾಲ ರೋಡ್‌ಶೋನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಬಳಿಕ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ಗೆ ತೆರಳಿದರು. ಅಲ್ಲಿ ಚಂದ್ರಯಾನ-3ನಲ್ಲಿ ಭಾಗಿಯಾದ ವಿಜ್ಞಾನಿಗಳ ಜೊತೆ ಒಂದು ಗಂಟೆ ಸಂವಾದ, ಸಮಾಲೋಚನೆ ನಡೆಸಲಿದ್ದಾರೆ. ಅದರೊಂದಿಗೆ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿಯನ್ನು ಮೋದಿ ಪಡೆದುಕೊಳ್ಳಲಿದ್ದಾರೆ.

PM Modi Isro Visit: ಚಂದ್ರಯಾನ 3 ಲ್ಯಾಂಡಿಂಗ್‌ ಸೈಟ್‌ನ ಹೆಸರು ಘೋಷಿಸಲಿದ್ದಾರೆಯೇ ಪ್ರಧಾನಿ ಮೋದಿ?

Scroll to load tweet…