Prime Minister Narendra Modi Mangaluru visit: ಪ್ರಧಾನಿ ನರೇಂದ್ರ ಮೋದಿ ಕೇರಳದ ಕೊಚ್ಚಿಯಲ್ಲಿ ಐಎನ್‌ಎಸ್ ವಿಕ್ರಾಂತ್ ಅನಾವರಣ ಮಾಡಿದ ನಂತರ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಇಲ್ಲಿ ಹಲವಾರು ಯೋಜನೆಗಳಿಗೆ ಅವರು ಚಾಲನೆ ನೀಡಿದ್ದಾರೆ.
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡಿದ್ದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ರೂ. 3,800 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಚಾಲನೆ ನೀಡಿದ ನಂತರ ಜನರನ್ನುದ್ದೇಶಿಸಿ ಮಾತನಾಡಿದರು. ಇದಕ್ಕೂ ಮುನ್ನ ಕೇರಳದಲ್ಲಿ ಐಎನ್‌ಎಸ್ ವಿಕ್ರಾಂತ್ ನೌಕೆಯನ್ನು ಅನಾವರಣಗೊಳಿಸಿದ ನಂತರ ರಾಷ್ಟ್ರ ನೌಕಾದಳಕ್ಕೆ ಸೇರ್ಪಡೆಯಾಯಿತು. ಈ ವಿಚಾರವಾಗಿ ಮಂಗಳೂರಿನಲ್ಲಿ ಮಾತನಾಡಿದ ನರೇಂದರ ಮೋದಿ, ರಾಷ್ಟ್ರ ಸೈನ್ಯದ ಸುರಕ್ಷಿತವಾಗಿದ್ದರೆ ಆರ್ಥಿಕವಾಗಿ ಭಾರತ ಸುರಕ್ಷಿತವಾಗಿರತ್ತದೆ ಎಂದರು. ಮಂಗಳೂರಲ್ಲಿ 3800 ಕೋಟಿ ಮೊತ್ತದ ಯೋಜನೆಗಳ ಲೋಕಾರ್ಪಣೆ, ಶಂಕುಸ್ಥಾಪನೆ, ಭೂಮಿ ಪೂಜೆ ಆಗಿದೆ. ಕರ್ನಾಟಕದಲ್ಲಿ ಈ ಯೋಜನೆಗಳ ಮೂಲಕ ಹುದ್ದೆಗಳು ಸೃಷ್ಟಿಯಾಗಲಿದೆ ಎಂದು ಮೋದಿ ಹೇಳಿದರು. ಈ ಯೋಜನೆಗಳಿಂದ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ, ಈ ಮೂಲಕ ಮೀನುಗಾರರು ತಮ್ಮ ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಇದನ್ನೂ ಓದಿ: Modi In Kerala: 700 ಕೋಟಿ ವೆಚ್ಚದ ಕೊಚ್ಚಿ ಮೆಟ್ರೋ ರೈಲು ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ
ಮುಂದುವರೆದ ಅವರು, ಮೇಕ್ ಇನ್ ಇಂಡಿಯಾ ವಿಸ್ತರಿಸುವುದು ಬಹಳ ಪ್ರಮುಖವಾದದ್ದು. ಕರಾವಳಿ ಪ್ರದೇಶಗಳಲ್ಲಿ ಸಾಗರಮಾಲಾ ಯೋಜನೆ ಅಡಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತದೆ. ಕಳೆದ ಎಂಟು ವರ್ಷದಲ್ಲಿ ಬಂದರು ವಹಿವಾಟು ಹೆಚ್ಚಾಗಿದೆ. ಮುಂದಿನ ವರ್ಷಗಳಲ್ಲಿ ಬಂದರುಗಳ ಸಾಮರ್ಥ್ಯ ಹೆಚ್ಚಳ ಮಾಡಲಾಗುತ್ತದೆ ಎಂದು ಮೋದಿ ತಿಳಿಸಿದರು.
"ಕರ್ನಾಟಕ ಸಾಗರಮಾಲ ಯೋಜನೆಯ ದೊಡ್ಡ ಫಲಾನುಭವಿ ಆಗಲಿದೆ. ಬೆಂಗಳೂರು - ಚೆನ್ನೈ ಎಕ್ಸ್ ಪ್ರೆಸ್, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್, ಹೀಗೆ ಹಲವು ಯೋಜನೆಗಳನ್ನ ರಸ್ತೆ ಮಾರ್ಗಕ್ಕಾಗಿ ಮಾಡಲಾಗ್ತಿದೆ. ದೇಶ ಹೊಸ ಅಭಿವೃದ್ಧಿಯತ್ತ ಸಾಗುತ್ತಿದೆ," ಎಂದು ಮೋದಿ ಪುನರುಚ್ಚರಿಸಿದರು.
ಇದನ್ನೂ ಓದಿ: INS Vikrant: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಕಾರ್ಯಾರಂಭ, ಏನಿದರ ವಿಶೇಷತೆ?
"ಕರ್ನಾಟಕದಲ್ಲಿ 8 ಲಕ್ಷ ಮನೆಗಳನ್ನ ನಿರ್ಮಾಣ ಮಾಡಲಾಗ್ತಿದೆ. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಮನೆ ಮನೆಗೆ ನೀರು ಕಲ್ಪಿಸುವ ಯೋಜನೆ ಮಾಡಲಾಗಿದೆ. 30 ಲಕ್ಷ ಮನೆಗಳಿಗೆ ಜಲಜೀವನ್ ಯೋಜನೆ ಅಡಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ," ಎಂದು ಮೋದಿ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಡಬಲ್ ಇಂಜಿನ್ ಸರ್ಕಾರದ ಮೇಲೆ ಖುಷಿಯಿದೆ:
ಡಬಲ್ ಇಂಜಿನ್ ಸರ್ಕಾರದ ಕುರಿತು ನನಗೆ ಖುಷಿ ಇದೆ ಎಂದ ಪ್ರಧಾನಿ ನರೇಂದ್ರ ಮೋದಿ, ತೀವ್ರಗತಿಯಲ್ಲಿ ಅಭಿವೃದ್ಧಿಯ ಕಾರ್ಯಕ್ರಮ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾಷಣದ ವೇಳೆ ರಾಜ್ಯದ ರಾಣಿ ಅಬ್ಬಕ್ಕ, ರಾಣಿ ಚೆನ್ನ ಭೈರಾದೇವಿ ಅವರನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು. ಬ್ರಿಟೀಷರಿಂದ ತಮ್ಮ ರಾಜ್ಯ ಉಳಿಸಿಕೊಳ್ಳಲು ಹೋರಾಡಿದ್ದು ನಮಗೆ ಎಂದೆಂದಿಗೂ ಸ್ಪೂರ್ತಿ. ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಇವರ ಹೋರಾಟ ನೆನೆಯುತ್ತೇನೆ ಎಂದು ಮೋದಿಯವರು ಹೇಳಿದ್ದಾರೆ.
ಕಳೆದ ಎಂಟು ವರ್ಷಗಳಲ್ಲಿ ಇಡೀ ದೇಶಾದ್ಯಂತ ಕರಾವಳಿ ಉತ್ಪನ್ನಗಳು ಮತ್ತು ವಹಿವಾಟು ವ್ಯಾಪಕವಾಗಿ ಬೆಳೆದಿದೆ ಎಂದ ಅವರು, ತಂತ್ರಜ್ಞಾನವನ್ನು ದೇಶದ ಮೂಲೆಮೂಲೆಗೂ ತಲುಪಿಸುವ ಪ್ರಯತ್ನದಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೀನುಗಾರರ ಅಭಿವೃದ್ಧಿಗೆ ಸಾಕಷ್ಟು ಕ್ರಮಗಳನ್ನು ಕೊಗೊಳ್ಳಲಾಗಿದೆ. ಈಗ ಚಾಲನೆ ನೀಡಿರುವ ಯೋಜನೆಗಳಿಂದ ವ್ಯಾಪಕ ಉದ್ಯೋಗ ಸೃಷ್ಟಿಯಾಗುವುದಲ್ಲದೇ ಆರ್ಥಿಕ ಬೆಳವಣಿಗೆಯೂ ಆಗಲಿದೆ ಎಂದರು. ದೇಶದ ಹಲವು ನಗರಗಳಲ್ಲಿ ಮೆಟ್ರೋ ನಿರ್ಮಾಣ ವೇಗದಿಂದ ಆಗುತ್ತಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸುಲಭ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಇವೆಲ್ಲವೂ ನಮ್ಮ ಸರ್ಕಾರದ ಕಳೆದ ಎಂಟು ವರ್ಷಗಳ ಸಾಧನೆ ಎಂದರು.
