ಬೆಂಗಳೂರು(ಡಿ.16): ಕರ್ನಾಟಕ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿಗೆ ಇಂದು ಹುಟ್ಟುಹಬ್ಬದ ಸಂಭ್ರಮ, ಹೀಗಿರುವಾಗ ಸಿಎಂ ಯಡಿಯೂರಪ್ಪ ಸೇರಿ ರಾಜ್ಯದ ಅನೇಕ ರಾಜಕೀಯ ಗಣ್ಯರು ಅವರಿಗೆ ಹುಟ್ಟುಹಬ್ಬದ ಶುಭಾಶಯತ ಕೋರಿದ್ದಾರೆ. ಹೀಗಿರುವಾಗಲೇ ಅತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಾ ಟ್ವೀಟ್ ಮಾಡಿ ಶುಭ ಕೋರಿರುವುದು ವಿಶೇಷವಾಗಿದೆ. 

'ಎಚ್ಡಿಕೆಗೆ ಸೆಂಟಿಮೆಂಟ್‌ ಜಾಸ್ತಿ' : ರೇವಣ್ಣ ಹೇಳಿದ ಸಹೋದರನ ಸೀಕ್ರೇಟ್

ಟ್ವೀಟ್ ಮಾಡಿ ಎಚ್. ಡಿ. ಕುಮಾರಸ್ವಾಮಿಗೆ ಶುಭ ಕೋರಿರುವ ಪಿಎಂ ಮೋವದಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ನನ್ನ ಶುಭಾಶಯಗಳು. ದೇವರು ಉತ್ತಮ ಆಯುಷ್ಯ, ಒಳ್ಳೆಯ ಆರೋಗ್ಯವನ್ನು ನೀಡಿ ನಿಮ್ಮನ್ನು ಕಾಪಾಡಲಿ ಎಂದು ಹಾರೈಸಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಈ ಟ್ವೀಟ್‌ನ್ನು ರೀಟ್ವೀಟ್ ಕೂಡಾ ಮಾಡಿದ್ದಾರೆ. 

ರಾಜಯೋಗದಲ್ಲಿ ಜನಿಸಿದ್ದ HDK : ದೇವೇಗೌಡರಿಗೆ ಕಾದಿತ್ತು ನಿರೀಕ್ಷಿಸದ ಅಚ್ಚರಿ..!

ಇತ್ತ ಮಾಜಿ ಸಿಎಂ ಕುಮಾರಸ್ವಾಮಿಗೆ ಹಾಲಿ ಸಿಎಂ ಬಿಎಸ್‌ವೈ ಕೂಡಾ ಶುಭ ಕೋರಿದ್ದಾರೆ. ಟ್ವೀಟ್ ಮಾಡಿರುವ ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿಗಳು, ಆತ್ಮೀಯರೂ ಆಗಿರುವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

"

ಕರ್ನಾಟಕದ ಸಿಎಂ ಆಗಿ ಸರ್ಕಾರ ಮುನ್ನಡೆಸಿರುವ ಹಾಗೂ ಬಿಜೆಪಿ ನಾಯಕರಾದ ಎಚ್. ಡಿ. ಕುಮಾರಸ್ವಾಮಿ ಹುಟ್ಟುಹಬ್ಬ ಪ್ರಯುಕ್ತ ಕನ್ನಡಪ್ರಭ ಅವರ ಕೊಡುಗೆ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ವಿಶೇಷ ಪುರವಣಿಯನ್ನು ಬಿಡುಗಡೆ ಮಾಡಿದೆ.