ಹಾಸನ (ಡಿ.16): ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಜನ್ಮ ದಿನವಾಗಿದ್ದು ಹಲವು ನಾಯಕರು ಶುಭ ಕೋರಿದ್ದಾರೆ. 1996ರ ಲೋಕಸಭಾ ಚುನಾವಣೆ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು ಬಳಿಕ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿಯೂ ಅಧಿಕಾರ ನಿರ್ವಹಿಸಿದರು. 

ಜೆಡಿಎಸ್ ಪಕ್ಷದಿಂದ ರಾಜ್ಯ ರಾಜಕೀಯದಲ್ಲಿ ಸಂಚಲನವನ್ನು ಉಂಟು ಮಾಡಿ ರಾಜ್ಯದಲ್ಲಿ ಕುಮಾರಣ್ಣ ಎಂದೇ ಹೆಸರಾದರು. ತಮ್ಮ ಸಹೋದರಗೆ ಮಾಜಿ ಸಚಿವ ರೇವಣ್ಣ ಅವರು ಜನ್ಮ ದಿನದ ಶುಭಾಶಯ ಕೋರಿದ್ದಾರೆ. 

ರಾಜಯೋಗದಲ್ಲಿ ಜನಿಸಿದ್ದ HDK : ದೇವೇಗೌಡರಿಗೆ ಕಾದಿತ್ತು ನಿರೀಕ್ಷಿಸದ ಅಚ್ಚರಿ..! .

ಕುಮಾರಸ್ವಾಮಿ ಅವ್ರಿಗೆ ಸೆಂಟಿಮೆಂಟ್‌ ಜಾಸ್ತಿ. ಯಾರೇ ಹೋದ್ರು ಅಯ್ಯೋ ಅಂತಾರೆ. ಕೆಲವರು ಅದನ್ನೇ ದುರುಪಯೋಗ ಮಾಡಿಕೊಳ್ತಾರೆ. ಅವರದ್ದು ಒಂಥರಾ ತಾಯಿ ಹೃದಯ ಇದ್ದಂಗೆ. ಅವರಿಂದ ಉಪಯೋಗ ಪಡೆದವರು ಎಷ್ಟುಅಂತಾ ಲೆಕ್ಕಕ್ಕೆ ಸಿಗಲ್ಲ. ಆದರೂ ಅವರ ಮೇಲೆ ಟೀಕೆ ಟಿಪ್ಪಣಿ ತಪ್ಪಿಲ್ಲ. ರೈತರ ಬಗ್ಗೆ ಅವರಿಗೆ ಇರುವಷ್ಟುಕಾಳಜಿ ಯಾರಿಗಿದೆ? ಆದರು ಅವರನ್ನು ರೈತ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದು ಸಹೋದರ ರೇವಣ್ಣ ಹೇಳಿದ್ದಾರೆ.