ನಾಳೆಯಿಂದ ಕೋರ್ಟ್‌ ಕಲಾಪ ಆರಂಭ:ಬರು​ವ​ವ​ರಿಗೆ ಕೋವಿಡ್‌ ಟೆಸ್ಟ್‌ ರ‍್ಯಾಪಿಡ್

ಕೋರ್ಟ್‌ಗೆ ಬರುವವರಿಗೆ ರ‍್ಯಾಪಿಡ್ ಆ್ಯಂಟಿಜೆನ್‌ ಟೆಸ್ಟ್‌: ಸರ್ಕಾರಕ್ಕೆ ಸೂಚನೆ| ಸೆ.28ರ ಸೋಮವಾರದಿಂದ 55 ನ್ಯಾಯಾಲಯಗಳಲ್ಲಿ ಫಿಸಿಕಲ್‌ ಕೋರ್ಟ್‌ ಕಲಾಪ ಆರಂಭ| ಇನ್ನುಳಿದ ನ್ಯಾಯಾಲಯಗಳು ಅ.5 ಮತ್ತು 12ರಿಂದ ಕಾರ್ಯಾರಂಭ| 

Physical Court Proceedings will Be Start in Sep 28th

ಬೆಂಗಳೂರು(ಸೆ.27): ರಾಜ್ಯದಲ್ಲಿ ಸೋಮವಾರದಿಂದ ಫಿಸಿಕಲ್‌ ಕೋರ್ಟ್‌ ಕಲಾಪ (ಭೌತಿಕ ವಿಚಾರಣೆ) ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಗಳಿಗೆ ಹಾಜರಾಗುವ ಸಾಕ್ಷಿದಾರರು ಹಾಗೂ ಆರೋಪಿಗಳಿಗೆ ಕೊರೋನಾ ರ‍್ಯಾಪಿಡ್ ಆ್ಯಂಟಿಜೆನ್‌ ಟೆಸ್ಟ್‌ ನಡೆಸಲು ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶಿಸಿದೆ.

ಕೊರೋನಾ ನಡುವೆಯೂ ನ್ಯಾಯಾಲಯಗಳನ್ನು ಸುರಕ್ಷಿತವಾಗಿ ಮತ್ತು ನಿರಂತರವಾಗಿ ನಡೆಸುವ ನಿಟ್ಟಿನಲ್ಲಿ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಹೈಕೋರ್ಟ್‌ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಸೆ.28ರ ಸೋಮವಾರದಿಂದ 55 ನ್ಯಾಯಾಲಯಗಳಲ್ಲಿ ಫಿಸಿಕಲ್‌ ಕೋರ್ಟ್‌ ಕಲಾಪ ಆರಂಭವಾಗಲಿದೆ. ಇನ್ನುಳಿದ ನ್ಯಾಯಾಲಯಗಳು ಅ.5 ಮತ್ತು 12ರಿಂದ ಕಾರ್ಯಾರಂಭ ಮಾಡಲಿವೆ. ಸಂಚಾರಿ ಪರೀಕ್ಷಾ ಘಟಕಗಳನ್ನು ಸ್ಥಾಪಿಸಲು ಸಾಧ್ಯವಿರುವ ಕುರಿತು ಪರಿಶೀಲಿಸುವಂತೆಯೂ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಕೋರ್ಟ್‌ ಕಾರ್ಯ ವೈಖರಿ ಬಗ್ಗೆ ಕಟು ಶಬ್ದ ಬಳಸಿ ಟೀಕೆ: ಲಾಯರ್‌ಗೆ ಜಡ್ಜ್‌ ತರಾಟೆ

ಈ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ಭೌತಿಕ ಕಲಾಪ ಆರಂಭವಾಗುತ್ತಿರುವ ಕಾರಣ ಸರ್ಕಾರ ನ್ಯಾಯಾಲಯಗಳಿಗೆ ಬರುವ ಆರೋಪಿಗಳು ಹಾಗೂ ಸಾಕ್ಷಿದಾರರಿಗೆ ರ‍್ಯಾಪಿಡ್ ಆ್ಯಂಟಿಜೆನ್‌ ಟೆಸ್ಟ್‌ ನಡೆಸಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಬೇಕು ಎಂದು ಸೂಚಿಸಿದೆ.
 

Latest Videos
Follow Us:
Download App:
  • android
  • ios