ಬೆಂಗಳೂರು(ಜ.10): ಇಡೀ ವಿಶ್ವವನ್ನೇ ಆಳಿದ ಅಯೋಧ್ಯೆ ನಗರ ವಿಶ್ವಕ್ಕೇ ಇಂದಿಗೂ ಮಾದರಿಯಾಗಬೇಕಿತ್ತು. ಆದರೆ ಈಗ ಪವಿತ್ರ ನಗರ ನಿರ್ಲಕ್ಷ್ಯಕ್ಕೊಳಗಾಗಿದೆ.

1992ರ ನಂತರ ಎರಡು ಧರ್ಮಗಳ ನಡುವೆ ಸೃಷ್ಟಿಯಾದ ಕಂದಕದ ಪರಿಣಾಮವಾಗಿ ಅದೆಷ್ಟೋ ಹೆಣಗಳು ಉರುಳಿ ಹೋದವು. ಆದರೆ ಅಯೋಧ್ಯೆ ನಗರದಲ್ಲಿ ಮಾತ್ರ ಇಂದಿಗೂ ಹಿಂದೂ-ಮುಸ್ಲಿಮರು ಸಹೋದರರಂತೆ ಬದುಕುತ್ತಿದ್ದಾರೆ.

ಆದರೆ ದೇಶ ಮಾತ್ರ ಅಯೋಧ್ಯೆ ಹೆಸರಲ್ಲಿ ಬಡಿದಾಡುವಂತಾಗಿದೆ. ಅಯೋಧ್ಯೆ ನಗರದ ಅಸಲಿ ಕಹಾನಿ ಏನು ಹಾಗಿದ್ದರೆ?. ಈ ಕುರಿತು ಪ್ರಸಿದ್ಧ ಛಾಯಾಗ್ರಾಹಕ ಸುಧೀರ್ ಶೆಟ್ಟಿ ನಾಳೆ(ಶುಕ್ರವಾರ) ಅಂದರೆ 11/01/2019ರಂದು ಚಿತ್ರಕಲಾ ಪರಿಷತ್‌ನಲ್ಲಿ ವಿಶೇಷ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದಾರೆ.

ಛಾಯಚಿತ್ರ ಪ್ರದರ್ಶನವನ್ನು ಜ.11 ಬೆಳಗ್ಗೆ 11ಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಚಾಲನೆ ನೀಡಲಿದ್ದಾರೆ.

''ಅಯೋಧ್ಯೆಯ ಹಿಂದೂ ಮುಸಲ್ಮಾನರ ಭಾವೈಕ್ಯತೆ ನೋಡಲು ಬನ್ನಿ''ಎಂಬ ಅಡಿ ಬರಹದೊಂದಿಗೆ ಸುಧೀರ್ ಶೆಟ್ಟಿ ನೈಜ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದಾರೆ. ಆಸಕ್ತರು ನಾಳೆ [ಶುಕ್ರವಾರ] ಚಿತ್ರಕಲಾ ಪರಿಷತ್‌ಗೆ ಭೇಟಿ ನೀಡಬಹುದು.