ಪೆಟ್ರೋಲ್‌ ಬಂಕ್‌ಗಳಲ್ಲಿ ಇಂದಿನಿಂದ ಕನ್ನಡದಲ್ಲೂ ದರ ಪಟ್ಟಿ: ಕೇಂದ್ರ ಸಚಿವ ಹರ್ದೀಪ್ ಸಿಂಗ್

ರಾಜ್ಯದ ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಇನ್ನು ಮುಂದೆ ತೈಲ ಬೆಲೆ ಸೂಚಿಸುವ ಫಲಕ ಇಂಗ್ಲಿಷ್ ಮತ್ತು ಹಿಂದಿ ಜತೆಗೆ ಕನ್ನಡ ಭಾಷೆಯಲ್ಲೂ ರಾರಾಜಿಸಲಿದೆ. ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಈ ವಿಷಯ ತಿಳಿಸಿದ್ದಾರೆ.

Petrol Diesel Price List To Be Displayed In Kannada At Petrol Bunks Says Hardeep Singh Puri gvd

ಬೆಂಗಳೂರು (ಜ.11): ರಾಜ್ಯದ ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಇನ್ನು ಮುಂದೆ ತೈಲ ಬೆಲೆ ಸೂಚಿಸುವ ಫಲಕ ಇಂಗ್ಲಿಷ್ ಮತ್ತು ಹಿಂದಿ ಜತೆಗೆ ಕನ್ನಡ ಭಾಷೆಯಲ್ಲೂ ರಾರಾಜಿಸಲಿದೆ. ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಈ ವಿಷಯ ತಿಳಿಸಿದ್ದಾರೆ. ಸಚಿವರು ಮಂಗಳವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಾಮಾಜಿಕ ಜಾಲತಾಣದ ಇನ್‌ಫ್ಲ್ಯೂಯೆನ್ಸರ್‌ಗಳೊಂದಿಗೆ ಅವರು ಸಂವಾದ ನಡೆಸಿದರು. ಈ ವೇಳೆ ಬಂಕ್‌ಗಳಲ್ಲಿ ತೈಲ ಬೆಲೆ ಪಟ್ಟಿಯ ಫಲಕದಲ್ಲಿ ಸ್ಥಳೀಯ ಭಾಷೆಯಾದ ಕನ್ನಡ ಇಲ್ಲ. ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಫಲಕ ಇರುತ್ತದೆ ಎಂಬುದನ್ನು ಸಂವಾದದಲ್ಲಿ ಪಾಲ್ಗೊಂಡವರ ಪೈಕಿ ಒಬ್ಬರು ಗಮನಕ್ಕೆ ತಂದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಪುರಿ, ಬಂಕ್‌ಗಳಲ್ಲಿ ತೈಲ ಬೆಲೆಯ ಫಲಕದಲ್ಲಿ ಸ್ಥಳೀಯ ಭಾಷೆಯಾದ ಕನ್ನಡದಲ್ಲಿ ಫಲಕ ಇರಬೇಕು ಎಂಬ ಮನವಿ ಇತ್ತು. ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುತ್ತದೆ. ಕನ್ನಡದಲ್ಲೂ ಇರಬೇಕು ಎಂಬ ಮನವಿಗೆ ನಾನು ಸ್ಪಂದಿಸಿದ್ದೇನೆ. ನಾಳೆಯಿಂದಲೇ ಎಲ್ಲ ಬಂಕ್‌ಗಳಲ್ಲಿ ತೈಲ ದರದ ಫಲಕಗಳಲ್ಲಿ ಕನ್ನಡವೂ ಇರಬೇಕು ಎಂಬ ಸೂಚನೆಯನ್ನು ತೈಲ ಕಂಪನಿಗಳಿಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಶ್ರೀರಾಮನ ಪೇಟೆಂಟ್ ಅನ್ನು ಬಿಜೆಪಿಗೆ ಕೊಟ್ಟಿದ್ದೆ ಕಾಂಗ್ರೆಸ್: ಸಂಸದ ಪ್ರತಾಪ್ ಸಿಂಹ

ಭಾರತ್ ನ್ಯಾಯ ಯಾತ್ರೆ, ಸಿಖ್ಖರಿಗೆ ನ್ಯಾಯ ಯಾವಾಗ?: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ನ್ಯಾಯ ಯಾತ್ರೆ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಹರ್ದೀಪ್ ಸಿಂಗ್ ಪುರಿ, 1984ರ ಸಿಖ್ ಹತ್ಯಾ ಕಾಂಡದಲ್ಲಿ ನೊಂದವರಿಗೆ ಯಾವಾಗ ನ್ಯಾಯ ಕೊಡುತ್ತಾರೆ ಹೇಳಲಿ. ಅದೇ ಮನೆತನದಿಂದಲೇ (ಇಂದಿರಾ ಗಾಂಧಿ) ಅಲ್ಲವೇ ಹತ್ಯಾಕಾಂಡ ನಡೆದಿದ್ದು? ಮೊದಲು ಸಿಖ್ಖರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿ. ದೀರ್ಘಾವಧಿ ರಜೆಯಿಂದ ಬಂದಿರುವ ರಾಹುಲ್ ಗಾಂಧಿ ಯಾತ್ರೆ ಮೂಲಕ ಭಾರತದಲ್ಲೇ ಇರುತ್ತಾರೆ. ಅಂತಹ ನ್ಯಾಯಕ್ಕಾಗಿ ನಾವು ಬೆಂಬಲ ನೀಡುತ್ತೇವೆ ಎಂದರು. ಮಾಲ್ಡೀವ್ಸ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ಬಗ್ಗೆ ಹೇಳಿಕೆ ನೀಡಿದ್ದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದರು. 

ಮೈಸೂರಿಂದ ಸಾ.ರಾ.ಮಹೇಶ್‌ಗೆ ಟಿಕೆಟ್‌ ಕೊಡಿಸಲು ಎಚ್‌ಡಿಕೆ ಪ್ರಯತ್ನ: ಎಂ.ಲಕ್ಷ್ಮಣ್‌

ಕೇಂದ್ರ ಸರ್ಕಾರದ ಉಜ್ವಲ ಯೋಜನೆಯನ್ನು 2016 ರಲ್ಲಿ ಆರಂಭ ಮಾಡಿದ್ದೆವು. ಈ ಯೋಜನೆ ಇಂದು 10 ಕೋಟಿ 50 ಲಕ್ಷ ಫಲಾನುಭವಿಗಳನ್ನು ಹೊಂದಿದೆ ಎಂದರು. ಕಾಂಗ್ರೆಸ್ ನಮ್ಮ ಸರ್ಕಾರದ ಬಗ್ಗೆ ಏನು ಎಕ್ಸ್ ಪೋಸ್ ಮಾಡುತ್ತದೆ ಎಂದು ಪ್ರಶ್ನಿಸಿದ ಕೇಂದ್ರ ಸಚಿವರು, ನಮ್ಮ ಸರ್ಕಾರ ಜನರಿಗೆ ಮಾಡಿದ ಕಾರ್ಯಗಳನ್ನು ಫಲಾನುಭವಿಗಳೇ ತಿಳಿಸುತ್ತಾರೆ. ಸರ್ಕಾರದ ಸಾಧನೆಯನ್ನು ಜನರೇ ಹೇಳುತ್ತಾರೆ. ಒಂದು ದೇಶ ಒಂದು ಚುನಾವಣೆ ಕೂಡ ಮುಂದೆ ಆಗಲಿದೆ. ಚುನಾವಣೆಗಾಗಿ ಮೋದಿ ಇದನ್ನೆಲ್ಲಾ ಮಾಡುತ್ತಿಲ್ಲ. ಭಾರತದಲ್ಲಿ ಮಾತ್ರ ಕಳೆದ ಎರಡು ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಆಗಿದೆ ಎಂದರು.

Latest Videos
Follow Us:
Download App:
  • android
  • ios