Asianet Suvarna News Asianet Suvarna News

ದ್ವೇಷ ಭಾಷಣ: ಯತ್ನಾಳ, ಶೋಭಾ ವಿರುದ್ಧದ ಅರ್ಜಿ ವಜಾ, ಇದು ರಾಜಕೀಯ ಉದ್ದೇಶ ಎಂದ ಹೈಕೋರ್ಟ್‌

ಉದ್ದೇಶದಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ರೂಪದಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಪುರಸ್ಕರಿಸಲಾಗದು ಎಂದು ಹೇಳಿದ ನ್ಯಾಯಪೀಠ

petition against basanagouda patil yatnal, Shobha Karandlaje dismissed on hate speech case grg
Author
First Published Jul 10, 2024, 11:38 AM IST

ಬೆಂಗಳೂರು(ಜು.10):  ದ್ವೇಷ ದ್ವೇಷ ಭಾಷಣ ಮಾಡಿದ ಬಿಜೆಪಿ ನಾಯಕರಾದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ತೇಜಸ್ವಿ ಸೂರ್ಯ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಸೇರಿದಂತೆ ಮತ್ತಿತ ರರ ಮೇಲೆ ಕಾನೂನು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತಂತೆ ಮಂಡ್ಯ ಜಿಲ್ಲೆಯ ನಾಗ ಮಂಗಲ ತಾಲ್ಲೂಕಿನ ಮೊಹಮ್ಮದ್ ಖಲೀ ಮುಲ್ಲಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. 

ಅನ್ನಭಾಗ್ಯ ಅಕ್ಕಿ ಹೋಟೆಲ್‌ಗೆ ಮಾರುವ ಅಯೋಗ್ಯರನ್ನು ಶಿಕ್ಷಿಸಿ: ಹೈಕೋರ್ಟ್

ಅರ್ಜಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೊಂದಿಲ್ಲ. ಅನ್ಯ ಉದ್ದೇಶವನ್ನು ಹೊಂದಿದೆ. ರಾಜಕೀಯ ಮತ್ತು ಕೋಮು ಉದ್ದೇಶದಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ರೂಪದಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಪುರಸ್ಕರಿಸಲಾಗದು ಎಂದು ಹೇಳಿತು. ಅಲ್ಲದೆ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸುವ ಮೂಲಕ ಕಾನೂನು ಪ್ರಕ್ರಿಯೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅರ್ಜಿದಾರರ ವಿರುದ್ಧ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

Latest Videos
Follow Us:
Download App:
  • android
  • ios