ಆನೇಕಲ್[ಜ.26]: ಮಗಳ ಮದುವೆಗೆ ಬಾರದೇ 2ನೇ ಪತ್ನಿಯ ಮನೆಯಲ್ಲೇ ಠಿಕಾಣಿ ಹೂಡಿದ್ದ ಗಂಡನನ್ನು ಮೊದಲನೇ ಹೆಂಡತಿ ಮತ್ತು ಮಕ್ಕಳು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸೂರ್ಯನಗರ ಠಾಣಾ ವ್ಯಾಪ್ತಿಯ ಬನಹಳ್ಳಿಯಲ್ಲಿ ನಡೆದಿದೆ.

ಕೃಷ್ಣಪ್ಪ, ಹೆಂಡತಿ ಮತ್ತು ಮಕ್ಕಳಿಂದ ಗೂಸಾ ತಿಂದವ. ಮೊದಲನೇ ಹೆಂಡತಿ ಚಂದ್ರಕಲಾ ಗಂಡನನ್ನು ತರಾಟೆಗೆ ತೆಗೆದುಕೊಂಡವರು. ಇನ್ನು ಪತಿಯನ್ನು ಬಿಡಿಸಿಕೊಳ್ಳಲು ಬಂದ ೨ನೇ ಪತ್ನಿ ಮೋಹನ ಕುಮಾರಿ ಹಾಗೂ ಆಕೆಯ ಮಕ್ಕಳಿಗೂ ಧರ್ಮದೇಟು ಬಿದ್ದಿದ್ದೆ. ಮೋಹನಕುಮಾರಿ ಹಾಗೂ ಚಂದ್ರಕಲಾ ನಡುವೆ ಬೈಗುಳದ ಜೊತೆಗೆ ಪೊರಕೆ ಪ್ರಹಾರವೂ ನಡೆದಿದೆ.