ಬೆಂಗಳೂರು(ಆ.27): ಸಂಚಾರ ನಿಯಮ ಉಲ್ಲಂಘನೆಯಲ್ಲಿ ಶತಕ ಬಾರಿಸಿದ್ದ ಬುಲೆಟ್‌ ರಾಜನಿಗೆ ಪೊಲೀಸರು 58 ಸಾವಿರ ದಂಡ ವಿಧಿಸಿದ್ದಾರೆ...!

ಖಾಸಗಿ ಕಂಪನಿ ಉದ್ಯೋಗಿ ರಾಜೇಶ್‌ ಎಂಬಾತನೆ ದಂಡ ಕಟ್ಟಿದ್ದು, 103 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ. ಹೊಸೂರು ರಸ್ತೆಯಲ್ಲಿ ತೆರಳುವಾಗ ಆತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಸಿಗ್ನಲ್‌ ಜಂಪ್‌, ಹೆಲ್ಮಟ್‌ ಇಲ್ಲದೆ ಸವಾರಿ, ಏಕ ಸಂಚಾರ ರಸ್ತೆಯಲ್ಲಿ ಬೈಕ್‌ ಚಾಲನೆ ಹೀಗೆ 103ಕ್ಕೂ ಹೆಚ್ಚು ಬಾರಿ ರಾಜೇಶ್‌ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ. 

ಕೊರೋನಾ ನಡುವೆ ನಿಯಮ ಉಲ್ಲಂಘನೆ: 5 ಲಕ್ಷ ಸಂಚಾರಿ ಕೇಸ್‌, 96 ಕೋಟಿ ದಂಡ!

ಈ ಸಂಬಂಧ ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಕೊನೆಗೆ ಆಡುಗೋಡಿ ಸಂಚಾರ ಪೊಲೀಸರಿಗೆ ಸಿಕ್ಕಿದ್ದಾನೆ. ಹಳೇ ಪ್ರಕರಣಗಳಿಗೆ ದಂಡ ಪಾವತಿಸಿ ಬೈಕ್‌ ಪಡೆಯುವಂತೆ ತಿಳಿಸಿದ ಪೊಲೀಸರು, ಆತನ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಅನ್ನು ಜಪ್ತಿ ಮಾಡಿದ್ದಾರೆ.