ಬೆಂಗಳೂರು (ಡಿ. 18): ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಗಡುವು ವಿಸ್ತರಣೆ ನಡುವೆಯೂ ಫಾಸ್ಟ್ ಟ್ಯಾಗ್ ಸಮಸ್ಯೆ ಮುಂದುವರಿದಿದೆ. ಏಕೆಂದರೆ, ಆನ್‌ಲೈನ್‌ನಲ್ಲಿ ಖರೀದಿಸುತ್ತಿರುವ ಫಾಸ್ಟ್ ಟ್ಯಾಗ್‌ಗಳು ಗ್ರಾಹಕರ ಕೈ ಸೇರುವುದು ವಿಳಂಬವಾಗುತ್ತಿದೆ.

ಫಾಸ್ಟ್ಯಾಗ್‌ ಮುಂದೂಡಿಕೆ ಬಗ್ಗೆ ಟೋಲ್‌ ಸಿಬ್ಬಂದಿಗೇ ಮಾಹಿತಿ ಇಲ್ಲ, ದುಪ್ಪಟ್ಟು ವಸೂಲಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೌಂಟರ್‌ಗಳು, ಆಯ್ದ ೨೨ ಬ್ಯಾಂಕ್‌ಗಳು ಹಾಗೂ ಪೇಟಿಎಂ, ಅಮೆಜಾನ್, ಫ್ಲಿಪ್ ಕಾರ್ಟ್‌ನಂಥಹ ಆನ್‌ಲೈನ್ ಮಾರಾಟ ತಾಣಗಳಲ್ಲೂ ಫಾಸ್ಟ್ ಟ್ಯಾಗ್ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಹೀಗಾಗಿ ಹಲವರು ವಾರದ ಹಿಂದೆ ಆನ್‌ಲೈನ್‌ನಲ್ಲಿ ಫಾಸ್ಟ್ ಟ್ಯಾಗ್ ಖರೀದಿಸಿದ್ದು, ಕೈಸೇರುವುದು ವಿಳಂಬವಾಗುತ್ತಿರುವುದರಿಂದ ಆಕ್ರೋಶಗೊಂಡಿದ್ದಾರೆ.

ಮೈಸೂರು: ರೀಡಿಂಗ್ ಮೆಷಿನ್ ಇಲ್ಲ, ಫಾಸ್ಟ್‌ ಟ್ಯಾಗ್ ಅಳವಡಿಸಿದ ವಾಹನಗಳಿಗೆ ಫ್ರೀ ಎಂಟ್ರಿ

ಟೋಲ್ ಪ್ಲಾಜಾಗಳಲ್ಲಿ ತೆರೆದಿರುವ ಕೌಂಟರ್‌ಗಳಲ್ಲಿ ಫಾಸ್ಟ್ ಟ್ಯಾಗ್ ಪಡೆ ದುಕೊಳ್ಳಲು ಬರುವವರ ಸಂಖ್ಯೆ ಕಳೆದೆರಡು ದಿನಗಳಿಂದ ಕಡಿಮೆಯಾಗಿದೆ. ಆರಂಭದಲ್ಲಿ ಭಾರೀ ಸಂಖ್ಯೆಯಲ್ಲಿ ಫಾಸ್ಟ್ ಟ್ಯಾಗ್ ಪಡೆಯಲು ವಾಹನ ಮಾಲೀಕರು ಬರುತ್ತಿದ್ದರು. ಈಗ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದು ನೆಲಮಂಗಲ ನವಯುಗ ಟೋಲ್ ಪ್ಲಾಜಾದ ಉಸ್ತುವಾರಿ ಬಸವರಾಜ್ ಹೇಳಿದರು.