ಫಾಸ್ಟ್‌ಟ್ಯಾಗ್ ಅಳವಡಿಕೆ ದಿನಾಂಕ ಮುಂದೂಡಿರುವ ಕಾರಣಕ್ಕೆ ವಾಹನ ಸವಾರರು ದಂಡದಿಂದ ಪಾರಾಗಿದ್ದಾರೆ. ರೀಡಿಂಗ್ ಮೆಷಿನ್‌ಗಳೂ ಇಲ್ಲದ ಕಾರಣ ಫಾಸ್ಟ್‌ಟ್ಯಾಗ್ ಅಳವಡಿಸಿರುವ ವಾಹನಗಳಿಗೂ ಉಚಿತ ಪ್ರವೇಶ ನೀಡಲಾಗಿದೆ. ಫಾಸ್ಟ್‌ಟ್ಯಾಗ್ ಅಳವಡಿಸದ ವಾಹನಗಳಿಂದ ಎಂದಿನಂತೆ ಹಣ ಪಾವತಿ ನಡೆಯುತ್ತಿದೆ.
ಮೈಸೂರು(ಡಿ.15): ಫಾಸ್ಟ್ ಟ್ಯಾಗ್ ಅಳವಡಿಕೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜ.15ರ ವರೆಗೆ ಕಾಲಾವಕಾಶ ನೀಡಿದ್ದು ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳದೆ ತೆರಬೇಕಾಗಿದ್ದ ದಂಡದಿಂದ ಪಾರಾಗಿ ವಾಹನ ಸವಾರರು ಕೊಂಚರಿಲೀಫ್ ಪಡೆದಿದ್ದಾರೆ.
ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೀಲ್ಡ್ ಅಳವಡಿಸದ ಟೋಲ್ ಸಿಬ್ಬಂದಿಗಳು ಫಾಸ್ಟ್ ಟ್ಯಾಗ್ ಅಳವಡಿಕೆ ವಾಹನಗಳಿಗೆ ಫ್ರೀ ಎಂಟ್ರಿ ನೀಡುತ್ತಿದ್ದು. ಇತರೆ ವಾಹನಗಳ ಸವಾರರಿಂದ ಎಂದಿನಂತೆ ಹಣ ಪಾವತಿ ಮಾಡಿಸಿಕೊಳ್ಳುತ್ತಿದ್ದಾರೆ.
JDS ಭದ್ರಕೋಟೆ ಭೇದಿಸಿದ ಕೆಸಿಎನ್‌ಗೆ ಅಬಕಾರಿ ಖಾತೆ ಗಿಫ್ಟ್..?
ಫಾಸ್ಟ್ ಟ್ಯಾಗ್ ಅಳವಡಿಕೆಗೆ ಜ.15ರವರೆಗೆ ಕಾಲಾವಕಾಶ ಹಿನ್ನೆಲೆ ವಾಹನ ಸವಾರರು ಎಂದಿನಂತೆ ಶುಲ್ಕ ಪಾವತಿಸಿ ತೆರಳುತ್ತಿದ್ದಾರೆ. ಫಾಸ್ಟ್ ಟ್ಯಾಗ್ ರೀಡ್ ಮಾಡಲು ವ್ಯವಸ್ಥೆ ಮಾಡಿಕೊಳ್ಳದ ಹಿನ್ನೆಲೆ ಫಾಸ್ಟ್ ಟ್ಯಾಗ್ ಹೊಂದಿರುವ ವಾಹನಗಳಿಗೆ ಉಚಿತ ಪ್ರವೇಶ ನೀಡಲಾಗಿದೆ.
ಟೋಲ್‌ನಲ್ಲಿ ಎಲೆಕ್ಟ್ರೋ ಮ್ಯಾಗ್ನೇಟಿಕ್ ಫೀಲ್ಡ್(ಫಾಸ್ಟ್ ಟ್ಯಾಗ್ ಲೇನ್ ರೀಡರ್) ಅಳವಡಿಸದ ಹಿನ್ನೆಲೆ ಫ್ರಿ ಎಂಟ್ರಿ ನೀಡಿದ್ದು, ಫಾಸ್ಟ್ ಟ್ಯಾಗ್ ಹೊಂದಿರದ ವಾಹನಗಳು ಎಂದಿನಂತೆ ಶುಲ್ಕ ಪಾವತಿ ಮಾಡಿ ತೆರಳುತ್ತಿವೆ. ಮೈಸೂರು-ನಂಜನಗೂಡು ಹೆದ್ದಾರಿಯ ಕೆಎಂ ಹುಂಡಿ ಬಳಿ ಇರುವ ಟೋಲ್‌ನಲ್ಲಿ ಇನ್ನೂ ಫಾಸ್ಟ್ ಟ್ಯಾಗ್ ರೀಡರ್ ಅಳವಡಿಸಿಲ್ಲ. ಇನ್ನೂ 4-5ದಿನಗಳಲ್ಲಿ ಫಾಸ್ಟ್ ಟ್ಯಾಗ್ ರೀಡ್ ಮಾಡಲು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳುವುದಾಗಿ ಟೋಲ್ ಮ್ಯಾನೇಜ್ಮೆಂಟ್ ಮಾಹಿತಿ ನೀಡಿದೆ.
