ಉಡುಪಿ(ಡಿ.16): ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಹಾಗೂ ಗುಂಡ್ಮಿ- ಸಾಸ್ತಾನ ಟೋಲ್‌ಗೇಟ್‌ನಲ್ಲಿ ಭಾನುವಾರ ಫಾಸ್ಟ್ಯಾಗ್‌ ವ್ಯವಸ್ಥೆ ಆರಂಭಗೊಂಡ ಮೊದಲ ದಿನವೇ ತಾಂತ್ರಿಕ ದೋಷ, ಮಾಹಿತಿಯ ಕೊರತೆ, ವಾಹನ ಚಾಲಕರ ನಿರ್ಲಕ್ಷ್ಯಗಳಿಂದ ಸಾಕಷ್ಟುಗೊಂದಲಕ್ಕೆ ಕಾರಣವಾಯಿತು.

ಭಾನುವಾರ ಬೆಳಗ್ಗೆ ಇಲ್ಲಿನ ಟೋಲ್‌ ಸಿಬ್ಬಂದಿ ಫಾಸ್ಟ್ಯಾಗ್‌ ಇಲ್ಲದ ವಾಹನಗಳಿಂದ ನಿಯಮದಂತೆ ದಪ್ಪಟ್ಟು ಶುಲ್ಕ ವಸೂಲಿಗೆ ಮುಂದಾದರು. ಆದರೆ ಸರ್ಕಾರವೇ ದುಪ್ಪಟ್ಟು ಶುಲ್ಕ ವಸೂಲಿಯನ್ನು ಇನ್ನೂ ಒಂದು ತಿಂಗಳು ಮುಂದಕ್ಕೆ ಹಾಕಿದೆ. ಆದರೆ ಈ ವಿಷಯ ತಮಗೆ ಗೊತ್ತಿಲ್ಲ, ಆದ್ದರಿಂದ ದುಪ್ಪಟ್ಟು ಶುಲ್ಕ ಪಾವತಿಸಬೇಕು ಎಂದು ಟೋಲ್‌ ಸಿಬ್ಬಂದಿ ವಾಹನ ಚಾಲಕರಲ್ಲಿ ವರಾತ ತೆಗೆದಾಗ, ಸಹಜವಾಗಿಯೇ ವಾಹನ ಚಾಲಕರು ಸಿಬ್ಬಂದಿಯ ಮೇಲೆ ಕೂಗಾಡಿದ್ದಾರೆ. ಇದರಿಂದ ಸ್ವಲ್ಪ ಹೊತ್ತು ಮಾತಿಗೆ ಮಾತು ಬೆಳೆದು ಗೊಂದಲ ಉಂಟಾಯಿತು. ನಂತರ ಪೊಲೀಸರ ಮಧ್ಯಪ್ರವೇಶದಿಂದ ಎಂದಿನಂತೆ ಮಾಮೂಲಿ ಶುಲ್ಕವನ್ನಷ್ಟೇ ವಸೂಲಿ ಮಾಡಲಾಗಿದೆ.

ಇಲ್ಲಿ ಸ್ಕ್ಯಾ‌ನಿಂಗೇ ಆಗುವುದಿಲ್ಲ:

ಹೆಜಮಾಡಿಯಲ್ಲಿ ಫಾಸ್ಟ್ಯಾಗ್‌ ವಾಹನಗಳಿಗೆ ಪ್ರತ್ಯೇಕ ಗೇಟ್‌ ಇದ್ದರೂ, ಅಲ್ಲಿ ಅಟೋಮೆಟಿಕ್‌ ಸ್ಕಾ್ಯನಿಂಗ್‌ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಹ್ಯಾಂಡ್‌ ಮೇಶಿನ್‌ನಿಂದ ಸ್ಕಾ್ಯನ್‌ ಮಾಡಲಾಗುತ್ತಿತ್ತು. ಇದಕ್ಕೆ ಸಾಕಷ್ಟುಹೊತ್ತು ಬೇಕಾಗುತಿತ್ತು. ಫಾಸ್ಟ್ಯಾಗ್‌ ಗೇಟ್‌ ಫಾಸ್ಟಾಗಿ ಕೆಲಸ ಮಾಡದೆ, ಲೇಟ್‌ ಆಗಿ ಸಾಕಷ್ಟುವಾಹನಗಳು ಕ್ಯೂ ನಿಲ್ಲಬೇಕಾಯಿತು.

ಮಂಗಳೂರು: ಮೈ ನವಿರೇಳಿಸಿದ ಮಕ್ಕಳ ಸಾಹಸ ಕ್ರೀಡೆ ಪ್ರದರ್ಶನ..!

ಅಲ್ಲದೆ, ಅನೇಕ ವಾಹನಗಳ ಟ್ಯಾಗ್‌ ಬಾರ್‌ ಕೋಡ್‌ ಹ್ಯಾಂಡ್‌ ಮೆಶೀನ್‌ನಿಂದಲೂ ಸ್ಕಾ್ಯನ್‌ ಆಗುತ್ತಿರಲಿಲ್ಲ. ಆಗ ಶುಲ್ಕ ಪಾವತಿ ಮಾಡುವಂತೆ ಹೇಳಿದಾಗ ಟೋಲ್‌ ಸಿಬ್ಬಂದಿ ಮತ್ತು ವಾಹನ ಚಾಲಕ ನಡುವೆ ಜಗಳಕ್ಕೂ ಕಾರಣವಾಯಿತು. ಕೊನೆಗೆ ಎಂದಿನಂತೆ ಸಾಮಾನ್ಯ ಶುಲ್ಕ ಪಡೆದು ಮುಂದಕ್ಕೆ ಹೋಗುವುದಕ್ಕೆ ಅವಕಾಶ ನೀಡಲಾಯಿತು. ಅಷ್ಟರಾಗಲೇ ಅನೇಕ ಮಂದಿ ವಾಹನ ಚಾಲಕರು ಬೈಯ್ಯುತ್ತಲೇ ದುಪ್ಪಟ್ಟು ಶುಲ್ಕ ನೀಡಿ ಮುಂದಕ್ಕೆ ಹೋಗಿದ್ದರು.

ಇನ್ನೂ ಶೇ.80 ಟ್ಯಾಗ್‌ ಆಗಿಲ್ಲ:

ಜಿಲ್ಲೆಯಲ್ಲಿ ಇನ್ನೂ ಶೇ.75- 80 ರಷ್ಟುಚಾಲಕರು ತಮ್ಮ ವಾಹನಗಳಿಗೆ ಫಾಸ್ಟ್ಯಾಗ್‌ ಹಾಕಿಕೊಂಡಿಲ್ಲ. ಟೋಲ್‌ ಗೇಟ್‌ಗಳಲ್ಲಿ ಸಾಕಷ್ಟುಫಾಸ್ಟ್ಯಾಗ್‌ಗಳು ಕೂಡ ಲಭ್ಯ ಇಲ್ಲ. ಕೇಳಿದರೆ ಪೂರೈಕೆ ಇಲ್ಲ ಎಂಬ ಉತ್ತರ ಟೋಲ್‌ ಸಿಬ್ಬಂದಿಗಳಿಂದ ಸಿಗುತ್ತಿದೆ. ಒಂದೆಡೆ ಟೋಲ್‌ಗಳಲ್ಲಿ ಫಾಸ್ಟ್ಯಾಗ್‌ ಲಭ್ಯ ಇಲ್ಲ, ಇನ್ನೊಂದೆಡೆ ಫಾಸ್ಟ್ಯಾಗ್‌ ಇಲ್ಲದ ವಾಹನಗಳಿಗೆ ಟೋಲ್‌ಗಳಲ್ಲಿ ದುಪ್ಪಟ್ಟು ಶುಲ್ಕ ವಸೂಲಿಯ ಬಗ್ಗೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಸಾಕಷ್ಟುಚಾಲಕರು ನಿರ್ಲಕ್ಷದಿಂದ ಇನ್ನೂ ಫಾಸ್ಟ್ಯಾಗ್‌ಅಳವಡಿಸಿಲ್ಲ. ಇನ್ನೊಂದೆಡೆ ಟೋಲ್‌ ಸಿಬ್ಬಂದಿಯೂ ಸರಿಯಾದ ಮಾಹಿತಿ ಇಲ್ಲದೇ ದುಂಡಾವರ್ತನೆ ಮಾಡುತ್ತಿದ್ದಾರೆ. ಇದರಿಂದ ಈ ಸಮಸ್ಯೆ ಇನ್ನೂ ಒಂದಷ್ಟುದಿನ ಮುಂದುವರಿಯಲಿದೆ.

ಗುಂಡ್ಮಿ- ಸಾಸ್ತಾನ ಟೋಲ್‌ನಲ್ಲೂ ಟ್ರಾಫಿಕ್‌ ಜಾಮ್‌

ಫಾಸ್ಟ್ಯಾಗ್‌ ವ್ಯವಸ್ಥೆ ಆರಂಭವಾದ ಮೊದಲ ದಿನವೇ ಗೊಂದಲ ನಿರ್ಮಾಣವಾಗಿ ಸಾಸ್ತಾನ- ಗುಂಡ್ಮಿ ಟೋಲ್‌ ಗೇಟ್‌ನಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಸಾಲು ಸಾಲು ವಾಹನಗಳು ನಿಂತಿದ್ದವು. ಟ್ರಾಫಿಕ್‌ ಜಾಮ್‌ ಆಗಿದ್ದರಿಂದ ವಾಹನಗಳು ಇದ್ದಲ್ಲಿಗೇ ಹೋಗಿ ಟೋಲ್‌ ಸಿಬ್ಬಂದಿ ಶುಲ್ಕ ಸಂಗ್ರಹಿಸುತ್ತಿದ್ದದ್ದು ಕಂಡುಬಂತು. ಈ ವೇಳೆ ವಾಹನ ಚಾಲಕರು- ಟೋಲ್‌ ಸಿಬ್ಬಂದಿ ನಡುವೆ ಮಾತಿನ ಚಕಮಕಿಯೂ ನಡೆಯಿತು. ಸ್ಥಳೀಯ ನೋಂದಣಿಯ ವಾಹನಗಳಿಗೆ ಲೇನ್‌1ರಲ್ಲಿ ಉಚಿತ ಸಂಚಾರ ವ್ಯವಸ್ಥೆಯ ಮಾಹಿತಿ ಕೊರತೆಯಿಂದಾಗಿ ಒಂದೇ ಲೇನ್‌ ಮೂಲಕ ಎಲ್ಲ ವಾಹನಗಳು ಆಗಮಿಸುತ್ತಿದ್ದರಿಂದ ಮತ್ತಷ್ಟುಗೊಂದಲ ಉಂಟಾಯಿತು. ಟೋಲ್‌ಪ್ಲಾಝಾದಲ್ಲಿ ಗಲಾಟೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸ್‌ ಬಂದೋಬಸ್‌್ತ ಮಾಡಲಾಗಿತ್ತು.

105 ಕಿ.ಮಿ.ನಲ್ಲಿ 3 ಕಡೆ ಟೋಲ್‌

ಕಳೆದ ಹತ್ತು ವರ್ಷಗಳಿಂದ ಉಡುಪಿ ಜಿಲ್ಲೆಯನ್ನು ಹಾದು ಹೋಗುವ 105 ಕಿ.ಮೀ. ಉದ್ದದ ರಾ.ಹೆ. 66ನ್ನು ಚತುಷ್ಪಥಗೊಳಿಸುವ ಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಂಡಿರುವ ನವಯುಗ ಕಂಪನಿಗೆ ಅದನ್ನು ಪೂರ್ಣಗೊಳಿಸುವುದು ಇನ್ನೂ ಸಾಧ್ಯವಾಗಿಲ್ಲ. ಕಾಮಗಾರಿ ಪೂರ್ಣಗೊಳ್ಳದಿದ್ದರೂ ನವಯುಗ ಕಂಪನಿ ಈಗಾಗಲೇ ಜಿಲ್ಲೆಯಲ್ಲಿ 41.5 ಕಿ.ಮೀ. ಅಂತರದ ಹೆಜಮಾಡಿ ಮತ್ತು ಸಾಸ್ತಾನಗಳಲ್ಲಿ 2 ಟೋಲ್‌ ಗೇಟ್‌ಗಳನ್ನು ಹಾಕಿ ಸುಂಕ ವಸೂಲಿ ಮಾಡುತ್ತಿದೆ. ಸಾಸ್ತಾನ ಟೋಲ್‌ನಿಂದ 62 ಕಿ.ಮೀ. ದೂರದ ಶಿರೂರುನಲ್ಲಿ ಇನ್ನೊಂದು ಟೋಲ್‌ ಗೇಟ್‌ ಸಿದ್ಧವಾಗುತ್ತಿದೆ. ಅಲ್ಲಿಗೆ ವಾಹನಗಳು ಉಡುಪಿ ಜಿಲ್ಲೆಯ ರಾಹೆ 66ರಲ್ಲಿ 105 ಕಿ.ಮೀ. ಕ್ರಮಿಸಬೇಕಾದರೇ 3 ಕಡೆಗಳಲ್ಲಿ ಟೋಲ್‌ ಸುಂಕವನ್ನು ಪಾವತಿಬೇಕಾಗುತ್ತದೆ.

ಟೋಲ್‌ನಲ್ಲಿ ವ್ಯವಸ್ಥೆಯೇ ಸರಿಯಿಲ್ಲ

ಭಾನುವಾರ ಹೆಜಮಾಡಿ ಟೋಲ್‌ನಲ್ಲಿ ನನ್ನ ವಾಹನದ ಟ್ಯಾಗ್‌ ಸ್ಕ್ಯಾ‌ನ್‌ ಆಗಲಿಲ್ಲ. ಅವರದ್ದೇ ತಾಂತ್ರಿಕ ದೋಷವಾದರೂ, ನಾನು ಹಣ ಪಾವತಿಸುವಂತೆ ಪಟ್ಟುಹಿಡಿದರು. ನಾನು ಕ್ಯಾಶ್‌ ಗೇಟ್‌ನಲ್ಲಿ ದ್ವಿಮುಖ ಸಂಚಾರಕ್ಕೆ 55 ರು. ಕೊಟ್ಟರೆ ಅದಕ್ಕವರು ಒಪ್ಪಲಿಲ್ಲ. ಇವತ್ತಿನಿಂದ ದ್ವಿಮುಖ ಸಂಚಾರ ಇಲ್ಲ, ಏಕಮುಖ ಸಂಚಾರಕ್ಕೆ ದುಪ್ಪಟ್ಟು 70 ರು. ಪಾವತಿಸಬೇಕು ಎಂದರು. ಅದಕ್ಕೆ ನಾನು ದಿನಪತ್ರಿಕೆಯಲ್ಲಿ ಜ.15ರವರೆಗೆ ದುಪ್ಪಟ್ಟು ಶುಲ್ಕ ಇಲ್ಲ ಎಂಬ ಸರ್ಕಾರ ಆದೇಶ ತೋರಿಸಿದರೂ, ಪೇಪರ್‌ ವರದಿಗೂ ನಮಗೂ ಸಂಬಂಧವಿಲ್ಲ. ನೀವು ದುಪ್ಪಟ್ಟು ಶುಲ್ಕ ಕೊಡಿ ಎಂದು ನನ್ನನ್ನು ತಡೆಹಿಡಿದರು. ಅಷ್ಟರಲ್ಲಿ ಇತರ ಚಾಲಕರು ಸೇರಿ ಗಲಾಟೆ ಆಯಿತು. ಕೊನೆಗೆ ಪೊಲೀಸರು ಬಂದು ನನಗೆ ಮುಂದೆ ಸಾಗಲು ಸಹಾಯ ಮಾಡಿದರು ಎಂದು ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಹೇಳಿದ್ದಾರೆ.