Asianet Suvarna News Asianet Suvarna News

ಲಾಕ್‌ಡೌನ್: ಒಂದು ಕಡೆಯಿಂದ ಮತ್ತೊಂದೆಡೆಗೆ ಸಂಚರಿಸಬಹುದು, ಕಂಡಿಷನ್ ಅಪ್ಲೈ

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ  ಜನರು ಅಲ್ಲಲ್ಲಿಯೇ ಲಾಕ್ ಆಗ್ಬಿಟ್ಟಿದ್ದಾರೆ. ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ತಮ್ಮ ಊರಿಗೆ ತಲುಪಲಾಗದೇ ಎಲ್ಲಿ ಹೋಗಿದ್ದಾರೋ ಅಲ್ಲಿಯೇ ಫಿಕ್ಸ್ ಆಗಿದ್ದಾರೆ. ಆದ್ರೆ, ಇದೀಗ ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಆದ್ರೆ ಷರತ್ತುಗಳು ಅನ್ವಯ.
people allowed to travel under two circumstances During Lock Down Says praveen sood
Author
Bengaluru, First Published Apr 13, 2020, 7:55 PM IST
ಬೆಂಗಳೂರು, (ಏ.13): ಕೊರೋನಾ ವೈರಸ್ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್​ ಡೌನ್ ಜಾರಿಗೊಳಿಸಲಾಗಿದೆ.  ಇದರ ಮಧ್ಯೆ,  ಎರಡು ಸಂದರ್ಭಗಳಲ್ಲಿ ಮಾತ್ರ ಜನರು ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣಿಸಲು ಅನುಮತಿ ನೀಡಲಾಗುತ್ತೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್​ ತಿಳಿಸಿದ್ದಾರೆ.

ನಾಳೆ ಪ್ರಧಾನಿ ಮೋದಿ ಮಾತು, ಭಾರತೀಯ ಸೇನೆಯಿಂದ ಪಾಕ್‌ಗೆ ತಿರುಗೇಟು; ಏ.13ರ ಟಾಪ್ 10 ಸುದ್ದಿ! 

ಜನರಿಗೆ ಪ್ರಯಾಣಿಸಲು ಅನುಮತಿ ನೀಡಿರುವ ಬಗ್ಗೆ ಟ್ವೀಟ್ ಮಾಡಿರುವ ಅವರು, ಲಾಕ್​ ಡೌನ್​ ವೇಳೆ ಕುಟುಂಬದಲ್ಲಿ ಸಂಬಂಧಿಸಿದ ವ್ಯಕ್ತಿ ಯಾರಾದ್ರೂ ಸಾವನ್ನಪ್ಪಿದ್ರೆ ಅಥವಾ ಮಗು ಜನಿಸಿದರೆ ಸಂಚರಿಸಬಹುದು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅಥವಾ ಬೇರೆ ನಗರಳಿಗೆ  ಆದರೆ ಸಂಚರಿಸಲು ಆಯಾ ಜಿಲ್ಲೆಯ ಎಸ್​ಪಿ ಅನುಮತಿ ಪಡೆಯಬೇಕಾಗಿರುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದ್ದಾರೆ.
  ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ  ಜನರು ಅಲ್ಲಲ್ಲಿಯೇ ಲಾಕ್ ಆಗ್ಬಿಟ್ಟಿದ್ದಾರೆ. ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ತಮ್ಮ ಊರಿಗೆ ತಲುಪಲಾಗದೇ ಎಲ್ಲಿ ಹೋಗಿದ್ದಾರೋ ಅಲ್ಲಿಯೇ ಫಿಕ್ಸ್ ಆಗಿದ್ದಾರೆ. 
"
ಸದ್ಯಕ್ಕೆ ಏಪ್ರಿಲ್ 30ರ ವರೆಗೆ ಮನೆ ಬಿಟ್ಟು ಅಲುಗಾಡುವಂತಿಲ್ಲ. ಒಂದು ವೇಳೆ ವಾಹನ ತೆಗೆದುಕೊಂಡು ಏನಾದರೂ ರಸ್ತೆಗೆ ಇಳಿದರೆ, ಅಂತಃ ವಾಹನ ಸೀಜ್ ಜತೆಗೆ ಕೇಸ್ ಬುಕ್ ಆಗುವುದು ನಿಶ್ಚಿತ.

ಹಾಗಾಗಿ ಯಾವುದೇ ಕಾರಣಕ್ಕೆ ಏನಾಗುತ್ತೋ ನೋಡಿಯೇ ಬಿಡೋಳ ಅಂತ ಮಧ್ಯೆ ರಾತ್ರಿಯಲ್ಲಿ ಹೋಗುವ ದುಸ್ಸಾಹಸ ಬೇಡ. ಮನೆಯಲ್ಲಿಯೇ ಆರಾಮಗಿ ಇರಿ. ಸರ್ಕಾರ ಮಾಡುತ್ತಿರುವುದು ನಮ್ಮ ಒಳ್ಳೆಯದಕ್ಕಾಗಿಯೇ ಎನ್ನುವುದನ್ನು ಒಮ್ಮೆ ಯೋಚಿಸಿ.
Follow Us:
Download App:
  • android
  • ios