ಎಚ್ಡಿಕೆ ಇನ್ನೂ ಪೆನ್‌ಡ್ರೈವ್ ಸೀಕ್ರೆಟ್ ಬಹಿರಂಗಪಡಿಸಿಲ್ಲ, ವಶಕ್ಕೆ ಪಡೆಯಲು ವಕೀಲ ದೂರು!
ಕಾಂಗ್ರೆಸ್ ಸರ್ಕಾರ ವಿವಿಧ ಇಲಾಖೆಗಳಲ್ಲಿ ಕಮಿಷನ್ ಪಡೆಯುತ್ತಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ಪೆನ್ ಡ್ರೈವ್ ತೋರಿಸಿ ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇದುವರೆಗೂ ಪೆನ್ ಡ್ರೈವ್ ಬಗ್ಗೆ ದಾಖಲೆ ನೀಡದ್ದಕ್ಕೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು (ಅ.28) ಕಾಂಗ್ರೆಸ್ ಸರ್ಕಾರ ವಿವಿಧ ಇಲಾಖೆಗಳಲ್ಲಿ ಕಮಿಷನ್ ಪಡೆಯುತ್ತಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ಪೆನ್ ಡ್ರೈವ್ ತೋರಿಸಿ ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇದುವರೆಗೂ ಪೆನ್ ಡ್ರೈವ್ ಬಗ್ಗೆ ದಾಖಲೆ ನೀಡದ್ದಕ್ಕೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಕೀಲ ಅಮೃತೇಶ್ ಎಂಬುವವರಿಂದ ವಿಧಾನಸೌಧ ಠಾಣೆಗೆ ದೂರು. ಪೆನ್ ಡ್ರೈವ್‌ನಲ್ಲಿ ಎಲ್ಲ ಇದೆ ಎಂದು ಹೇಳಿದ್ದ ಎಚ್ಡಿ ಕುಮಾರಸ್ವಾಮಿ. ಆದರೆ ಇದುವರೆಗೆ ಪೆನ್‌ಡ್ರೈವನ್ನ ಸ್ಫೀಕರ್‌ಗೆ ಆಗಲಿ, ಪೊಲೀಸರಿಗೆ ಆಗಲಿ ಇನ್ನೂ ನೀಡಿಲ್ಲ. ಈ ಬಗ್ಗೆ ಕುಮಾರ ಸ್ವಾಮಿ ಅವರಿಗೆ ಲೀಗಲ್ ನೋಟಿಸ್ ನೀಡಿದ್ರೂ ಇದುವರೆಗೂ ಉತ್ತರ ನೀಡಿಲ್ಲ. ಎಚ್‌ಡಿ ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಹೀಗೆ ಆಧಾರರಹಿತವಾಗಿ ಆರೋಪಿಸುವುದು ಸರಿಯಲ್ಲ. ಕುಮಾರಸ್ವಾಮಿ ತಮ್ಮ ಬಳಿ ಇದೆ ಎನ್ನಲಾದ ಪೆನ್ ಡ್ರೈವ್ ಪೊಲೀಸರು ವಶಕ್ಕೆ ಪಡೆದುಕೊಳ್ಳುವಂತೆ ದೂರು ನೀಡಿರುವ ವಕೀಲ.
ಹೆಚ್‌ಡಿಕೆ ಪೆನ್‌ಡ್ರೈವ್ ಸತ್ಯಾಸತ್ಯತೆ ತನಿಖೆ ಮಾಡ್ತೇವೆ: ಸಚಿವ ಎಂ ಬಿ ಪಾಟೀಲ್
ಹೆಚ್ಡಿಕೆ ಬಳಿ ಇರುವ ಪೆನ್ ಡ್ರೈವ್ ಸೀಜ್ ಮಾಡಬೇಕು ಮತ್ತು ಅವರ ವಿರುದ್ಧ ಬ್ಲಾಕ್ ಮೇಲ್, ಬೆದರಿಕೆ, ಅಪರಾಧಿಕ ಸಂಚು ಹಾಗೂ ಎಕ್ಸಾರ್ಷನ್ ಆರೋಪದಡಿ ಕ್ರಮ ತೆಗೆದುಕೊಳ್ಳುವಂತೆ ವಕೀಲ ಅಮೃತೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರಿಂದ ವಿವಿಧ ಇಲಾಖೆಗಳಲ್ಲಿ ಕಮಿಷನ್ ಪಡೆಯುತ್ತಿದೆ ಆ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಸಮಯ ಬಂದಾಗ ಬಹಿರಂಗ ಪಡಿಸುತ್ತೇನೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು. ಇಡೀ ಸರ್ಕಾರ ಈ ಪ್ರಕರಣದಲ್ಲಿ ಬಿದ್ದು ಹೋಗುತ್ತೆಂಬ ಆತಂಕ ಎದುರಾಗಿತ್ತು. ಆದರೆ ಎಚ್‌ಡಿ ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಪೆನ್ ಡ್ರೈವ್ ತೋರಿಸುತ್ತಿದ್ದಾರಾದರೂ ಕೊನೆಗೂ ಪೆನ್‌ಡ್ರೈವ್‌ನಲ್ಲಿ ಏನು ದಾಖಲೆಗಳಿವೆ ಎಂಬುದು ಬಹಿರಂಗಪಡಿಸಲೇ ಇಲ್ಲ. ಹೀಗಾಗಿ ಇದೊಂದು ಬೆದರಿಕೆ, ಬ್ಲ್ಯಾಕ್ ಮೇಲ್ ತಂತ್ರ ಎಂದು ಟೀಕಿಸಿದರು.
ತೋರಿಸಿದ್ದು ಪೆನ್ ಡ್ರೈವ್ ನೀಡಿದ್ದು ಎಕ್ಸೆಲ್ ಶೀಟ್: ಏನಿದು ಹಳೆ ದೋಸ್ತಿಗಳ ಹೊಸ ಕುಸ್ತಿ..?
ಕಳೆದ ತಿಂಗಳ ಎಂಬಿ ಪಾಟೀಲ್ ವಿಚಾರದಲ್ಲೂ ಪೆನ್ ಡ್ರೈವ್ ವಿಚಾರ ಮತ್ತೆ ಮುನ್ನಲೆಗೆ ಬಂದಾಗ, ಪೆನ್‌ಡ್ರೈವ್ ಬಗ್ಗೆ ತನಿಖೆ ನಡೆಸುತ್ತೆವೆ ಎಂದು ಹೇಳಿದ್ದರು. ಇದೀಗ ವಕೀಲ ಅಮೃತೇಶ್ ಪೆನ್ ಡ್ರೈವ್ ವಶಕ್ಕೆ ಪಡೆಯುವಂತೆ ಎಚ್‌ಡಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಕುಮಾರಸ್ವಾಮಿ ಬಳಿ ಇರುವ ಪೆನ್‌ಡ್ರೈವ್ ವಶಕ್ಕೆ ಪಡೆದುಕೊಳ್ಳುತ್ತಾರಾ? ಎಂಬ ಕುತೂಹಲ ಮೂಡಿಸಿದೆ