ಬೆಂಗಳೂರು(ಅ.29): ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯಿಂದ ಅ.30ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರ ವರೆಗೆ ಕೋರಮಂಗಲದ ಎಂಟನೇ ಬ್ಲಾಕ್‌ನ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯಲ್ಲಿ ‘ಪಾಸ್‌ಪೋರ್ಟ್‌ ಅದಾಲತ್‌’ ಹಮ್ಮಿಕೊಳ್ಳಲಾಗಿದೆ.

ಕಳೆದ ಮೂರು ತಿಂಗಳಿಂದ ಬಾಕಿ ಇರುವ ಅರ್ಜಿದಾರರು ಮಾತ್ರ ಈ ಅದಾಲತ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇ-ಮೇಲ್‌, ಫ್ಯಾಕ್ಸ್‌ ಅಥವಾ ಪತ್ರದ ಮೂಲಕವೂ ಅರ್ಜಿದಾರರು ತಮ್ಮ ಉದ್ದೇಶವನ್ನು ತಿಳಿಸುವ ಅವಕಾಶವಿದೆ.

ಕಾಶ್ಮೀರದ ಪಿಎಫ್‌ ಅಧಿಕಾರಿಯಾಗಿ ಬೆಂಗಳೂರಿನ ಪ್ರಶಾಂತ್‌ ನೇಮಕ

ಅದಾಲತ್‌ನಲ್ಲಿ ಭಾವಹಿಸಲು ಇಚ್ಛಿಸುವ ಅರ್ಜಿದಾರರು ಅದಾಲತ್‌ಗೆ ಕನಿಷ್ಠ ಐದು ದಿನ ಮುಂಚಿತವಾಗಿ ಇ-ಮೇಲ್‌, ಫ್ಯಾಕ್ಸ್‌ ಅಥವಾ ಪತ್ರದ ಮೂಲಕ ತಮ್ಮ ಉದ್ದೇಶವನ್ನು ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಗೆ ತಿಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 25706100 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಯಾದಗಿರಿ ರಹಸ್ಯ: ಜೆಡಿಎಸ್ ಶಾಸಕನ ಮಗ ಬಾಯಿ ಬಿಟ್ಟರೆ ಎಚ್‌ಡಿಕೆಗೆ ಸಂಕಟ