ನವದೆಹಲಿ(ಅ.29): ಬೆಂಗಳೂರಿನ ಕೋರಮಂಗಲದಲ್ಲಿರುವ ಪ್ರದೇಶ ಭವಿಷ್ಯ ನಿಧಿ ಕಚೇರಿಯಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಪಿ ಪ್ರಶಾಂತ್‌ ಅವರನ್ನು ನೂತನವಾಗಿ ರಚನೆಯಾದ ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಆಯುಕ್ತರಾಗಿ ನೇಮಕಗೊಳಿಸಿ ಕೇಂದ್ರ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ಎರಡೂ ಪ್ರದೇಶದಲ್ಲಿಯೂ ಆರ್ಟಿಕಲ್ 370 ಜಾರಿಯಾದ ನಂತರದಲ್ಲಿ ಪಿಎಫ್ ಅಧಿಕಾರಿಯಾಗಿ ಕೆ.ಪಿ ಪ್ರಶಾಂತ್‌ ಅವರನ್ನು ನೇಮಿಸಲಾಗಿದೆ. ಕೋರಮಂಗಲದಲ್ಲಿ ಪಿಎಫ್ ಅಧಿಕಾರಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದರು.

ಮಾನವ ಕಳ್ಳ ಸಾಗಣೆಗೆ ಸಹಕಾರ: ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿ ಸೆರೆ

ಕಲ್ಲಿಕೋಟೆ ಮೂಲದವರಾಗಿರುವ ಪ್ರಶಾಂತ್‌ ಕೋಝಿಕ್ಕೋಡ್‌ನ ದೇವಗಿರಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಶಿಕ್ಷಣ ಪಡೆದು, ಮಧ್ಯಪ್ರದೇಶದ ವಿದಿಶಾದಲ್ಲಿಯೂ ವ್ಯಾಸಂಗ ಮುಗಿಸಿದ್ದಾರೆ. ಕೇರಳ ಲಾ ಅಕಾಡೆಮಿಯಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. 1999ರಲ್ಲಿ ಸಹಾಯಕ ಆಯುಕ್ತರಾಗಿ ಸೇವೆಗೆ ಸೇರಿದ್ದರು. ಬಳಿಕ ಕಲ್ಲಿಕೋಟೆ, ಮಂಗಳೂರು, ತಿರುವನಂತಪುರಂ ಹಾಗೂ ತಿರುನೆಲ್ವೇಲಿಯಲ್ಲಿ ಕಾರ್ಯ ನಿರ್ವಹಿಸಿದ್ದರು.

ಬಳ್ಳಾರಿ: ಶ್ರೀರಾಮುಲು ವಿರುದ್ಧ ಸಿಡಿದೆದ್ದ ಬಿಜೆಪಿ ಪದಾಧಿಕಾರಿಗಳು