Namma Bengaluru: ಮಹಿಳೆಯರಿಗೆ BMTC ಉಚಿತ ಪಾಸ್‌ ನೀಡುವಂತೆ ಪ್ರಯಾಣಿಕರ ವೇದಿಕೆ ಆಗ್ರಹ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಬಿಎಂಟಿಸಿಗೆ ಹೆಚ್ಚು ಅನುದಾನ ನೀಡಬೇಕು. ದೆಹಲಿ, ಪಂಜಾಬ್‌, ತಮಿಳುನಾಡು ಮಾದರಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ ಒತ್ತಾಯಿಸಿದೆ.

Passengers forum demands BMTC free pass for women in city at bengaluru rav

ಬೆಂಗಳೂರು (ಫೆ.15) : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಬಿಎಂಟಿಸಿಗೆ ಹೆಚ್ಚು ಅನುದಾನ ನೀಡಬೇಕು. ದೆಹಲಿ, ಪಂಜಾಬ್‌, ತಮಿಳುನಾಡು ಮಾದರಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸದಸ್ಯ ಶಹೀನ್‌ ಶಾಸ, ದೆಹಲಿ, ಪಂಜಾಬ್‌, ತಮಿಳುನಾಡು ಮಾದರಿಯಲ್ಲಿ ಮಹಿಳೆಯರಿಗೆ(Women)ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಜೊತೆಗೆ ಲೈಂಗಿಕ ಅಲ್ಪಸಂಖ್ಯಾತರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ನಗರದಲ್ಲಿರುವ ಹಿಂದುಳಿದ ಸಮುದಾಯಗಳಿಗೂ ಉಚಿತ ಪ್ರಯಾಣ(BMTC Free BUS Pass)ಕ್ಕೆ ಅವಕಾಶ ನೀಡಬೇಕು. ಇದಕ್ಕೆ ಅಂದಾಜು 100 ಕೋಟಿ ರು. ಅನುದಾನ ಬೇಕಾಗಬಹುದು ಎಂದು ಅಭಿಪ್ರಾಯಪಟ್ಟರು.

Karnataka Budget 2023 LIVE updates

Bengaluru: ಬಿಎಂಟಿಸಿ ಉಚಿತ ಪಾಸ್ ಸೇವೆ ದಿಢೀರ್ ರದ್ದು!

ಬಿಎಂಟಿಸಿ(BMTC)ಗೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳದೇ ಸಂಸ್ಥೆಯಿಂದಲೇ ಸಿಬ್ಬಂದಿ ನೇಮಿಸಿಕೊಳ್ಳಬೇಕು. ನಗರದ ಅನೇಕ ಭಾಗಗಳಲ್ಲಿ ಸಂಪರ್ಕದ ಕೊರತೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಮುಂದಿನ ಎರಡ್ಮೂರು ವರ್ಷದಲ್ಲಿ ಬಿಎಂಟಿಸಿ ಸೇವೆಗೆ ಕನಿಷ್ಟ3 ಸಾವಿರ ಬಸ್‌ಗಳನ್ನು ಸೇರ್ಪಡೆಗೊಳಿಸಲು ಬಜೆಟ್‌ನಲ್ಲಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಬಸವರಾಜ ಬೊಮ್ಮಾಯಿ(CM Bassavaraj Bommai) ಅವರು ಫೆ.17 ರಂದು ಬಜೆಟ್‌(Budget) ಮಂಡಿಸಲಿದ್ದು ಅಂದು ವಿಧಾನಸೌಧ(Vidhanasoudha)ಕ್ಕೆ ಬಸ್‌ ಮೂಲಕ ಆಗಮಿಸಬೇಕು. ಬಿಎಂಟಿಸಿ ಬೆಂಗಳೂರಿನ ಜೀನನಾಡಿಯಾಗಿದ್ದು ಬಸ್‌ ಹತ್ತುವ ಮೂಲಕ ಮುಖ್ಯಮಂತ್ರಿಗಳು ಸಕಾರಾತ್ಮಕ ಸಂದೇಶ ರವಾನಿಸಬೇಕು. ನಗರ ವ್ಯಾಪ್ತಿಯ 28 ಶಾಸಕರು ಬಿಎಂಟಿಸಿಗೆ ಅಗತ್ಯವಿರುವ ಬೆಂಬಲ ನೀಡುವಂತೆ ಮುಖ್ಯಮಮಂತ್ರಿಗಳಿಗೆ ಮನವಿ ಮಾಡಬೇಕು ಎಂದು ಒತ್ತಾಯಿಸಿದರು.

ಬಿಎಂಟಿಸಿ ನಿಗಮದಲ್ಲಿ ಆಡಿದ್ದೇ ಆಟ: ನ್ಯಾಯ ಕೇಳಿದ ಡ್ರೈವರ್ ಸಸ್ಪೆಂಡ್

ವಿದೇಶಗಳ ಲಂಡನ್‌, ಬೀಜಿಂಗ್‌, ಹಾಂಕಾಂಗ್‌ ನಗರಗಳು, ಅಷ್ಟೇ ಏಕೆ ದೇಶದ ದೆಹಲಿ, ಚೆನ್ನೈ, ಮುಂಬೈಗಳಲ್ಲಿರುವಂತೆ ಬೆಂಗಳೂರಿನಲ್ಲೂ ಸಾರ್ವಜನಿಕ ಸಾರಿಗೆ ಬಸ್‌ಗಳ ಅವಶ್ಯಕತೆ ಹೆಚ್ಚಿದೆ. ಇದರಿಂದಾಗಿ ಸಂಚಾರ ದಟ್ಟಣೆ, ವಾಯು ಮಾಲಿನ್ಯ, ಅಪಘಾತಗಳು ಕಡಿಮೆಯಾಗಲಿವೆ.

-ವಿನೋದ್‌ ಜಾಕೋಬ್‌, ನಮ್ಮ ಬೆಂಗಳೂರು ಪ್ರತಿಷ್ಠಾನ

Latest Videos
Follow Us:
Download App:
  • android
  • ios