02:49 PM (IST) Feb 17

ಕಾಂಗ್ರೆಸ್ಸಿಗರ ಕಿವಿಯಲ್ಲಿ ಹೂವು: ಕೀಳು ಮಟ್ಟದ ರಾಜಕೀಯ

ಉಡುಪಿ: ಬಜೆಟ್ ಮಂಡನೆ ಸಂದರ್ಭದಲ್ಲಿ ಕಿವಿಗೆ ಹೂವು ಇಟ್ಟು ಹೋದ ಸಿದ್ದರಾಮಯ್ಯ ಡಿಕೆಶಿ. ಸಿದ್ದರಾಮಯ್ಯ ಡಿಕೆಶಿ ಬಾಲಿಶವಾದ ಕೀಳು ಮಟ್ಟದ ರಾಜಕೀಯ ಮಾಡಿದ್ದಾರೆ. ವಿರೋಧ ಪಕ್ಷವಾಗಿ ತಮ್ಮ ಜವಾಬ್ದಾರಿ ಮರೆತಿದ್ದಾರೆ. ಇಂದು ನಡೆದಿರೋದು ಕಾಂಗ್ರೆಸ್ ನ ಸಣ್ಣತನದ ಪ್ರದರ್ಶನ. ಮುಂದಿನ ಚುನಾವಣೆಯಲ್ಲಿ ಜನ ಇವರ ಎರಡು ಕಿವಿಗೆ ಹೂ ಇಡುತ್ತಾರೆ. ಎರಡು ಕಿವಿಗೆ ಹೂ ಇಟ್ಟು ಮಂಡೆ ಬೋಳಿಸಿ ನಾಮ ಹಾಕುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ ಸದನಕ್ಕೆ ಗೌರವ ಹೇಗೆ ಕೊಡಬೇಕು ಎಂದು ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲ. ಬಾಲಿಶವಾದ ನಡತೆಯಿಂದ ಕಾಂಗ್ರೆಸ್ ಸದನದಲ್ಲಿ ಬೆತ್ತಲಾಗಿದೆ. ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಹೇಳಿಕೆ

02:28 PM (IST) Feb 17

ಬೊಮ್ಮಾಯಿ.

2023_24 ರ ಬಜೆಟ್ ಮಂಡನೆ ಮಾಡಿದ್ದೇನೆ ಕೋವಿಡ್ ಕಾಲದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿತ್ತು. ಆರ್ಥಿಕ ತಜ್ಞರು ಕರ್ನಾಟಕ ಬಜೆಟ್ ಹಳಿಗೆ ಬರಲು ಐದಾರು ವರ್ಷ ಬೇಕು ಅಂತಾ ಹೇಳಿದ್ರು. ಆದ್ರೆ ಕೇವಲ ಎರಡೇ ವರ್ಷ ದಲ್ಲಿ ಸುಧಾರಣೆ ಆಗಿದೆ. ರೆವಿನ್ಯೂ ಎಕ್ಸಪೆಂಡಿಚರ್ ಅನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಯಾವ ಸರ್ಕಾರ ಕೂಡಾ ಮಾಡಿರಲಿಲ್ಲ. ಕಳೆದ ಬಾರಿ ಘೋಷಣೆ ಮಾಡಿದ್ದರಲ್ಲಿ ಶೇ 90 ರಷ್ಟು ಸರ್ಕಾರಿ ಆದೇಶಗಳಾಗಿವೆ. ಇನ್ನೂ ಕೆಲವು ಅನುಷ್ಟಾನ ಆಗೋದರಲ್ಲಿ ಇವೆ.

02:03 PM (IST) Feb 17

3,22,000 ಕೋಟಿ ಸಾಲ ಹೆಚ್ಚಾಗಿದೆ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಿಯಾಕ್ಷನ್!

ಒಟ್ಟು ಸಾಲ 5,64,896 ಕೋಟಿ ಆಗತ್ತೆ ಅಂತ ಅವರೇ ಹೇಳಿದ್ದಾರೆ. ಈ ವರ್ಷದ ಅಂತ್ಯಕ್ಕೆ. ನಾನು ಬಿಟ್ಟಾಗ 2,47000 ಕೋಟಿ ಇತ್ತು. 3,22,000 ಕೋಟಿ ಸಾಲ ಹೆಚ್ಚಾಗಿದೆ. ಸಮ್ಮಿಶ್ರ ಸರ್ಕಾರ ಇದ್ದಾಗ 41914 ಕೋಟಿ ಸಾಲ ಮಾಡಲಾಗಿತ್ತು. ನಾಲ್ಕು ವರ್ಷದಲ್ಲಿ 2,54,760 ಕೋಟಿ ಬಿಜೆಪಿ ಸರ್ಕಾರ ಸಾಲ ಮಾಡಿದೆ. 1,16,512 ಕೋಟಿ ಸಾಲ ನಾವು ಐದು ವರ್ಷದಲ್ಲಿ ಸಾಲ ಮಾಡಿದ್ವಿ. ಇವ್ರು 2,54,760 ಕೋಟಿ ಸಾಲ ಮಾಡಿದ್ದಾರೆ ನಾಲ್ಕು ವರ್ಷಕ್ಕೆ. ಇವ್ರು ರಾಜ್ಯವನ್ನ ಸಾಲದ ಸುಳಿಗೆ ಸಿಲುಕಿಸಿದ್ದಾರೆ. 34 ಸಾವಿರ ಕೋಟಿ ಬಡ್ಡಿ ಕಟ್ಟಬೇಕಾಗುತ್ತದೆ. ಇವ್ರು ಯದ್ವಾ ತದ್ವಾ ಸಾಲ ಮಾಡಿ.ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿದ್ದಾರೆ. ಕೊಟ್ಟ ಭರವಸೆ ಈಡೇರಿಸಿಲ್ಲ. ಸಾಲ ಹೆಚ್ಚು ಮಾಡಿದ್ದಾರೆ. ಹೆಚ್ಚು ಬಡ್ಡಿ ಕಟ್ಡಿದ್ದರೆ ಅಭಿವೃದ್ಧಿ ಆಗುವುದಿಲ್ಲ. 77,750 ಕೋಟಿ ಮುಂದಿನ ವರ್ಷ ಸಾಲ ಮಾಡುತ್ತೇವೆ ಅಂತ ಹೇಳಿದ್ದಾರೆ. ಸಾಲದ ಪ್ರಮಾಣ 95% ಹೆಚ್ಚಳ ಆಗತ್ತೆ. ಹೀಗಿರುವಾಗ ರಾಜ್ಯದ ಅಭಿವೃದ್ಧಿ ಹೇಗಾಗುತ್ತದೆ? ಮಕ್ಕಳನ್ನ ಸಾಕುವ ಜವಾಬ್ದಾರಿ ಇಲ್ಲದೇ ಇದ್ದರೂ, ಎಷ್ಟು ಮಕ್ಕಳಾದ್ರೂ ಆಗಲೀ ಎಂಬಂತಿದೆ ಈ ಬಜೆಟ್. ಅನುಷ್ಠಾನಗೊಳಿಸುವ ಇಚ್ಚಾಶಕ್ತಿ ಇಲ್ಲದೇ ಇದ್ದರೆ, ಎಷ್ಟು ಬೇಕಾದ್ರೂ ಭರವಸೆ ಕೊಡಬಹುದು. ಈ ಸರ್ಕಾರದಲ್ಲಿ ಇದೇ ಆಗುತ್ತಿದೆ. ಯಾವಾಗಲೂ ಚುನಾಯಿತ ಸರ್ಕಾರ ಪಾರದರ್ಶಕ ಹಾಗೂ ಜನರಿಗೆ ಉತ್ತರದಾಯಿತ್ವ ಆಗಿರಬೇಕು. ಮತದಾರರಿಂದ ಯಾವುದನ್ನೂ ಮುಚ್ಚಿಡಲು ಹೋಗಬಾರದು

01:55 PM (IST) Feb 17

ಚಿಕ್ಕಮಗಳೂರು ಜಿಲ್ಲೆಗೆ ಹೊಸ ವಿವಿ

ಚಿಕ್ಕಮಗಳೂರು ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಬಂಪರ್‌ ಘೋಷಣೆ ಮಾಡಿದ್ದಾರೆ. ಹೊಸ ವಿಶ್ವವಿದ್ಯಾಲಯವನ್ನು ಜಿಲ್ಲೆಯಲ್ಲಿ ಸ್ಥಾಪನೆ ಮಾಡುವುದಾಗಿ ಪ್ರಕಟಿಸಿದ್ದರೆ, ತುಮಕೂರಿನಲ್ಲಿ ಹೊಸ ಪಾಲಿಟೆಕ್ನಿಕ್‌ ಕಾಲೇಜು ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಹೊಸ ವಿವಿ, ತುಮಕೂರಿನಲ್ಲಿ ಹೊಸ ಪಾಲಿಟೆಕ್ನಿಕ್‌ ಕಾಲೇಜು!

01:39 PM (IST) Feb 17

ನೀರಾವರಿಗೆ 11,236 ಕೋಟಿ ಕೊಡುಗೆ

ನೀರಾವರಿಗೆ ಆದ್ಯತೆ ದೃಷ್ಟಿಯಿಂದ 2022-23ನೇ ಸಾಲಿನಲ್ಲಿ 11,236 ಕೋಟಿ ರೂ. ಮೊತ್ತದ 38 ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜಲಸಂಪನ್ಮೂಲ ಇಲಾಖೆಯ ವತಿಯಿಂದ 1.5 ಲಕ್ಷ ಎಕರೆ ನೀರಾವರಿ ಸಾಮರ್ಥ್ಯ ಸೃಜಿಸಲಾಗುವುದು.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

01:22 PM (IST) Feb 17

ಮೈಕ್ರೋ ಸ್ಮಾಲ್ ಇಂಡಸ್ಟ್ರಿಗೆ ಕೊಡಲಿಲ್ಲ ಒತ್ತು: ಎಫ್ ಕೆಸಿಸಿಐ ಅಧ್ಯಕ್ಷ ಗೋಪಾಲರೆಡ್ಡಿ

ಬೊಮ್ಮಾಯಿ ಬಜೆಟ್ ಮಂಡನೆ ಹಿನ್ನಲೆಯಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ. ಗೋಪಾಲರೆಡ್ಡಿ ಪತ್ರಿಕಾಗೋಷ್ಠಿ

ರಾಜ್ಯ ಬಜೆಟ್‌ಗೆ ಸ್ವಾಗತ. ಅಗ್ರಿಕಲ್ಚರ್, ರೂರಲ್ ಡೆವಲಪ್ಮೆಂಟ್ ಗೆ ಒತ್ತುಕೊಟ್ಟಿದ್ದಾರೆ. ಮಹಿಳಾ ಸಬಲೀಕರಣಕ್ಕೂ ಆದ್ಯತೆ ನೀಡಿದ್ದಾರೆ. ಬೆಂಗಳೂರು ರಿಂಗ್ ರಸ್ತೆ, ಮೆಟ್ರೋಗೆ ಹಣ ನೀಡಿರೋದು ಸ್ವಾಗತಾರ್ಹ. ಪ್ರೊಫೆಷನಲ್ ಟ್ಯಾಕ್ಸ್ 30 ಸಾವಿರದ ಲಿಮಿಟ್ ಕೇಳಿದ್ವಿ. 25 ಸಾವಿರಕ್ಕೆ ಏರಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಮೈಕ್ರೋ ಸ್ಮಾಲ್ ಇಂಡಸ್ಟ್ರೀಸ್ ಗೆ ಒತ್ತುಕೊಡಲು ಕೇಳಿದ್ವಿ. ಎಪಿಎಂಸಿ ಒಳಗೆ ಹೊರಗೆ ಬೇರೆ ಕಾನೂನು ಇದೆ. ಇದನ್ನ ಸರಿಪಡಿಸೋಕೆ ಕೇಳಿಕೊಂಡಿದ್ವಿ. ಈ ಎರಡೂ ವಿಚಾರ ಪ್ರಸ್ತಾಪ ಆಗಿಲ್ಲ ಹೀಗಾಗಿ ಸ್ವಲ್ಪ ಬೇಸರ ಇದೆ. ನಮ್ಮ ಒಟ್ಟು 8 ಬೇಡಿಕೆ ಇಟ್ಟಿದ್ವಿ ಇದರಲ್ಲಿ 4 ಬೇಡಿಕೆ ಈಡೇರಿದೆ. ಇದು ಚುನಾಚಣೆ ಮುಂದಿಟ್ಟುಕೊಂಡ ಬಜೆಟ್ ಅನ್ನೋದು ಗೊತ್ತಾಗ್ತಿದೆ. ಬೆಂಗಳೂರು ಟ್ರಾಫಿಕ್, ವೈಟ್ ಟಾಪಿಂಗ್ ಗೆ ಒತ್ತುಕೊಟ್ಟಿದ್ದಾರೆ ಇದು ಸ್ವಾಗತಾರ್ಹ.

.

01:17 PM (IST) Feb 17

ಕಿವಿ ಮೇಲೆ ಹೂ ಇಡುವ ಬಜೆಟ್: ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್ ಹೇಳಿಕೆ,

ಈ ಬಜೆಟ್ ಬಗ್ಗೆ ಈಗಾಗಲೇ ಹೇಳಿದ್ದಾರೆ. ಕಿವಿ ಮೇಲೆ ಹೂ ಇಡುವ ಬಜೆಟ್. ಇದು ಚುನಾವಣಾ ಬಜೆಟ್. ಕಳೆದ‌ಬಾರಿ ನೋಡಿದ್ರೆ ಯಾವುದೂ ಜಿಓ ಇಂಪ್ಲಿಮೆಂಟ್ ಆಗಿಲ್ಲ. ಕಳೆದ ವರ್ಷ ಘೋಷಿಸಿದ ಬಜೆಟ್ ಇಂಪ್ಲಿಮೆಂಟ್ ಆಗದೆ, ಈ ಬಜೆಟ್ ಹೇಗೆ ಜಾರಿಗೆ ಬರಲಿದೆ.. ಮುಂದೆ ಸರ್ಕಾರ ಯಾವುದು ಬರುತ್ತೋ, ಅವರು ಬಜೆಟ್ ಮಂಡಿಸ್ತಾರೆ. ಇದನ್ನ ನಾವು ಸಂಪೂರ್ಣ ತಿರಸ್ಕರಿಸ್ತೇವೆ. ಇದು ಯಾವುದೂ ಕೂಡ ಅನುಷ್ಠಾನ ಆಗುವುದಿಲ್ಲ. ಬಿಜೆಪಿ ವ್ಯರ್ಥ ಪ್ರಯತ್ನ ಮಾಡಿದೆ.

01:13 PM (IST) Feb 17

ಬೆಂಗಳೂರು ಸಮಗ್ರ ಅಭಿವೃದ್ಧಿ ಭರ್ಜರಿ ಕೊಡುಗೆ..

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು 13,139 ಕೋಟಿ ರೂ. ವೆಚ್ಚದಲ್ಲಿ 288 ಕಿ.ಮೀ ಉದ್ದದ ಸ್ಯಾಟಲೈಟ್ ಟೌನ್ ರಿಂಗ್​ರೋಡ್ ನಿರ್ಮಿಸಲು ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ.ಅದಲ್ಲದೇ 150 ಕೋಟಿ ರೂ. ವೆಚ್ಚದಲ್ಲಿ 75 ಜಂಕ್ಷನ್‌ ಅಭಿವೃದ್ಧಿಪಡಿಸಲಾಗುವುದು.ಬೈಯಪ್ಪನಹಳ್ಳಿ ನಮ್ಮ ಮೆಟ್ರೋ ಸುತ್ತಮುತ್ತ ರಸ್ತೆ ಅಭಿವೃದ್ಧಿ, ಟ್ರಾಫಿಕ್‌ ಕಂಟ್ರೋಲ್‌ಗೆ 300 ಕೋಟಿ ರೂ. ಅನುದಾನವನ್ನು ನೀಡಲಾಗಿದೆ.

01:04 PM (IST) Feb 17

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ಎಚ್ಚರಿಕೆ

ರಾಯಚೂರು: ಬಜೆಟ್ ನಲ್ಲಿ ಜಿಲ್ಲೆಗೆ ಏಮ್ಸ್ ಮಾದರಿ ಆಸ್ಪತ್ರೆ ಘೋಷಣೆಗೆ ಖಂಡನೆ. ಕೇಳಿದ್ದು ಏಮ್ಸ್ ನೀಡಿದ್ದು ಮಾದರಿ ಆಸ್ಪತ್ರೆ. ಮಾತು ತಪ್ಪಿದ ಸಿಎಂ ಬಸವರಾಜ ಬೊಮ್ಮಾಯಿ. ನಗರದಲ್ಲಿ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ ಆಕ್ರೋಶ. ನಮಗೆ ಏಮ್ಸ್ ಮಾದರಿ ಬೇಡ, ಸರ್ಕಾರ ಘೋಷಣೆ ತಿರಸ್ಕಾರ. ನಗರದಲ್ಲಿ 281 (31 ದಿನ ಸರದಿ ಉಪವಾಸ) ದಿನಗಳಿಂದ ನಡೆಯುತಿರುವ ಹೋರಾಟಕ್ಕೆ ಬೆಲೆ ನೀಡದ ಸರ್ಕಾರ. ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ಎಚ್ಚರಿಕೆ ನೀಡಿದ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ.

12:59 PM (IST) Feb 17

ಬಜೆಟ್ ಮಂಡನೆ ಮುಗಿಸಿದ ಸಿಎಂ

2 ಗಂಟೆ 35 ನಿಮಿಷಗಳ ಕಾಲ‌ ಬಜೆಟ್ ಓದಿದ ಸಿಎಂಗೆ ಕಿವಿಯಲ್ಲಿ ಹೂ ಹಿಡಿದುಕೊಂಡು ಸಿಎಂ ಬಳಿಗೆ ಹೋಗಿ ಬೊಮ್ಮಾಯಿಗೆ ಶುಭಾಶಯ ಹೇಳಿದ ಡಿ ಕೆ ಶಿವಕುಮಾರ್. ಭಾರತ್ ಮಾತಾಕೀ ಜೈ ಘೋಷಣೆ ಹಾಕಿದ ಬಿಜೆಪಿ ಶಾಸಕರು. ಸೋಮವಾರ 10-30 ಕ್ಕೆ ಸದನ ಮುಂದೂಡಿಕೆ.ಸಿಎಂ ಗೆ ಅಭಿನಂದನೆ ಸಲ್ಲಿಸಿದ ಸಚಿವರು, ಶಾಸಕರು

12:52 PM (IST) Feb 17

ಆ‍್ಯಸಿಡ್‌ ದಾಳಿ ಸಂತ್ರಸ್ಥರಿಗೆ ಮಾಶಾಸನ 10,000ಕ್ಕೆ ಏರಿಕೆ

ಶೂನ್ಯ ಬಡ್ಡಿದರದಲ್ಲಿ ಮಹಿಳೆಯರಿಗೆ ಸಾಲ ಸೌಲಭ್ಯ ಯೋಜನೆ. ಗೃಹಿಣಿಯರಿಗೆ ತಿಂಗಳಿಗೆ 500 ರೂ. ಗಳ ಸಹಾಯಧನ. ರಾಜ್ಯದಲ್ಲಿ ಗೃಹಿಣಿ ಶಕ್ತಿ ಯೋಜನೆ ಶೀಘ್ರದಲ್ಲೇ ಜಾರಿ. ಆ‍್ಯಸಿಡ್‌ ದಾಳಿ ಸಂತ್ರಸ್ಥರಿಗೆ ಮಾಶಾಸನ 10,000ಕ್ಕೆ ಏರಿಕೆ.

12:43 PM (IST) Feb 17

ಆರೋಗ್ಯ ಕ್ಷೇತ್ರಕ್ಕೆ ಬಜೆಟ್​ನಲ್ಲಿ ಸಿಕ್ಕಿದ್ದೇನು?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ್ದಾರೆ.ಬೆಂಗಳೂರಿನಲ್ಲಿ ಒಟ್ಟು 243 ವಾರ್ಡ್ ಗಳಲ್ಲಿ 27 ಸ್ಮಾರ್ಟ್ ವರ್ಚ್ಯುವಲ್ ಕ್ಲಿನಿಕ್ ಗೆ ಅನುಮೋದನೆ ನೀಡಲಾಗಿದ್ದು ಹೆಲ್ತ್ ಸಿಸ್ಟಮ್ಸ್ ಅನ್ನು ಪುನರಚನೆ ಮಾಡಲು ನಿರ್ಧರಿಸಲಾಗಿದೆ.ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಹೆಚ್ಚಿನ ಖಾಸಗಿ ಆಸ್ಪತ್ರೆಗಳನ್ನು ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು.


12:36 PM (IST) Feb 17

ಉತ್ತರ ಕರ್ನಾಟಕಕ್ಕೆ ಮತ್ಸ್ಯಘಮ, ಮೀನುಗಾರಿಕೆ ದೋಣಿಗೆ ಹಣ!

ರಾಜ್ಯದ ಮೀನುಗಾರರಿಗೆ ನೆರವಾಗುವ ದೃಷ್ಟಿಯಿಂದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಅದರಂತೆ ಹಾವೇರಿಯಲ್ಲಿ ಮೀನು ಪಾಲನಾ ಕೇಂದ್ರ ಹಾಗೂ ಬೈಂದೂರಿನಲ್ಲಿ ಸೀಫುಡ್‌ ಪಾರ್ಕ್‌ ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ.

ಉತ್ತರ ಕರ್ನಾಟಕಕ್ಕೆ ಮತ್ಸ್ಯಘಮ



12:21 PM (IST) Feb 17

ಕಿವಿ ಮೇಲೆ ಹೂವಿಟ್ಟು ಸಿಎಂ ಬಜೆಟ್‌ಗೆ ವಿರೋಧಿಸಿದ ಕಾಂಗ್ರೆಸ್ಸಿಗರು

ಸಿಎಂ ಬೊಮ್ಯಾಯಿ ಕಳೆದ ಬಜೆಟ್‌ನಲ್ಲಿ ನೀಡಿದ ಭರವಸೆಗಳನ್ನೇ ಈಡೇರಿಸಿಲ್ಲ. ಇದೀಗ ಮತ್ತೊಂದು ಸುಳ್ಳು ಯೋಜನೆಗಳ ಬಜೆಟ್ ಮಂಡಿಸುತ್ತಿದ್ದಾರೆಂದು, ಕಾಂಗ್ರೆಸ್ಸಿಗರು ಸದನಕ್ಕೆ ಕಿವಿ ಮೇಲೆ ಹೂವಿಟ್ಟುಕೊಂಡು ಬಂದದ್ದು, ವಿಶೇಷವಾಗಿತ್ತು. 

12:16 PM (IST) Feb 17

ತೆರಿಗೆ ಮತ್ತು ಆಯವ್ಯಯ ಅಂದಾಜು ಹೇಗಿರಲಿದೆ?

12:13 PM (IST) Feb 17

110 ಹಳ್ಳಿಗಳಿಗೆ ಕಾವೇರಿ ನೀರು ಲಭ್ಯ

ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿಗೆ ಬರೋಬ್ಬರಿ 9,698 ಕೋಟಿ ರೂ. ಅನುದಾನ ನೀಡಲಾಗಿದೆ. ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸಲು ಮತ್ತು ಪ್ರವಾಹವನ್ನು ನಿಯಂತ್ರಿಸಲು 3,000 ಕೋಟಿ ರೂ. ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ಈ ವರ್ಷ ಕಾವೇರಿ ಕುಡಿಯುವ ನೀರು ಎಲ್ಲರುಗೂ ಲಭ್ಯವಾಗಲಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

12:12 PM (IST) Feb 17

ಬಜೆಟ್ ಮಂಡನೆ ವೇಳೆ ಹೈ ಡ್ರಾಮಾ: ಕೆಣಕಿದ ಬೊಮ್ಮಾಯಿಗೆ ಕುಟುಕಿದ ಸಿದ್ದು

ಕಾಂಗ್ರೆಸ್'ನವರು ಕಿವಿ ಮೇಲೆ ಹೂವಿಟ್ಟುಕೊಳ್ಳುತ್ತೇನೆ ಎಂದರೆ ಬೇಡ ಎನ್ನುವುದಿಲ್ಲ, ಜನರ ಮೇಲೆ ಕಿವಿ ಮೇಲೆ ಹೂವಿಡುತ್ತಿದ್ದರು. ಈಗ ಜನರೇ ಕಾಂಗ್ರೆಸ್ ಕಿವಿ ಮೇಲೆ ಹೂವಿಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಬಜೆಟ್ ಮಂಡನೆ ವೇಳೆ ಅವರು, ಕಾಂಗ್ರೆಸ್'ಗೆ ಟಾಂಗ್ ನೀಡಿದರು. ಸಿಎಂ ಮಾತಿಗೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ಇದೇನು ಬಜೆಟ್ ಭಾಷಣವೇ ಎಂದು ಅವರು ಕಿಡಿ ಕಾರಿದರು. 600 ಭರವಸೆಗಳಲ್ಲಿ 50 ಭರವಸೆಗಳನ್ನೂ ಈಡೇರಿಸಲು ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಸಿಎಂ ಬಜೆಟ್ ಮಂಡನೆ ವೇಳೆ ಹೈಡ್ರಾಮಾ ನಡೆದಿದ್ದು, ಆಡಳಿತ- ವಿಪಕ್ಷಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. 

12:10 PM (IST) Feb 17

ಈ ಬಾರಿ 70295 ಕೋಟಿ ರೂ ಸಾಲ ಮಾಡಲು ತಿರ್ಮಾನ..

ಈ ಬಾರಿ 70295 ಕೋಟಿ ರೂ ಸಾಲ ಮಾಡಲು ತಿರ್ಮಾನ...
ಇದೇ ವರ್ಷ 17997 ಕೋಟಿ ರೂ ಸಾಲ ಮರುಪಾವತಿಗೆ ನಿಗದಿ....
ಕೋರೋನಾ ಕಾಲದಲ್ಲಿ ರಾಜ್ಯದ ಜನರ ತಲಾ ಆದಾಯ 2.04 ಲಕ್ಷ ರೂ..
ಈ ವರ್ಷ ಜನರ ತಲಾ ಆದಾಯ - 3.32 ಕೋಟಿ ರೂ ಗಳಿಗೆ ಏರಿಕೆ..
ಶಿಶುಮರಣ ಮತ್ತು ತಾಯಿ‌ಮರಣದ ಪ್ರಮಾಣ ರಾಜ್ಯದಲ್ಲಿ ಗಣನೀಯ ಇಳಿಕೆ....

12:07 PM (IST) Feb 17

ರಾಮನಗರದಲ್ಲಿ ಭವ್ಯ ರಾಮಮಂದಿರ

ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ರಾಮನಗರದ ರಾಮದೇವರ ಬೆಟ್ಟದಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಅದರೊಂದಿಗೆ ರಾಜ್ಯದ ವಿವಿಧ ದೇವಸ್ಥಾನ ಹಾಗೂ ಮಠಗಳ ಜೀರ್ಣೋದ್ದಾರಕ್ಕೆ ಮುಂದಿನ 2 ವರ್ಷಗಳಲ್ಲಿ 1 ಸಾವಿರ ಕೋಟಿ ನೀಡುವುದಾಗಿ ಘೋಷಣೆಯಾಗಿದೆ.

ರಾಮನಗರದಲ್ಲಿ ರಾಮಮಂದಿರ

12:04 PM (IST) Feb 17

ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಒತ್ತು

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 2023ನೇ ಆರ್ಥಿಕ ಸಾಲಿನ ರಾಜ್ಯ ಬಜೆಟ್ ನಲ್ಲಿ ಕೃಷಿ ಕ್ಷೇತ್ರದ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ರೈತರಿಗೆ ವಿವಿಧ ಸಹಾಯಧನಗಳ ಘೋಷಣೆ ಜೊತೆಗೆ ಭೂ ಸಿರಿ ಎಂಬ ನೂತನ ಯೋಜನೆಯನ್ನು ಕೂಡ ಘೋಷಿಸಿದ್ದಾರೆ. 

ರೈತರಿಗೆ ದಕ್ಕಿದ್ದೇನು? ಇಲ್ಲಿ ಕ್ಲಿಕ್ಕಿಸಿ