Panchamasali Peetha: ಪಂಚಮಸಾಲಿ 3ನೇ ಪೀಠದ ಸಮಾರಂಭಕ್ಕೆ ಮುಹೂರ್ತ
ಕಳೆದ ಹಲವು ದಿನಗಳಿಂದ ತೆರೆಮರೆಯಲ್ಲಿ ಸಭೆಗಳನ್ನು ನಡೆಸಿ ಸಂಘಟನಾತ್ಮಕ ಚರ್ಚೆಗಳ ಮೂಲಕ ಪಂಚಮಸಾಲಿ ಸಮುದಾಯದ 3ನೇ ಪೀಠದ ಸಿದ್ಧತೆಯಲ್ಲಿದ್ದ ಪಂಚಮಸಾಲಿ ಮಠಾಧೀಶರ ಒಕ್ಕೂಟ ಇದೀಗ ಅಂತಿಮವಾಗಿ ಸಮುದಾಯದ ಶ್ರೀಗಳ 3ನೇ ಪೀಠದ ಅಸ್ತಿತ್ವಕ್ಕಾಗಿ ದಿನಾಂಕ ನಿಗದಿ ಮಾಡುವ ಮೂಲಕ ಬಹಿರಂಗವಾಗಿ ಸಮುದಾಯಕ್ಕೆ ಮತ್ತೊಂದು ಪೀಠದ ಸಂದೇಶ ತಲುಪಿಸಿದೆ.
ಬಾಗಲಕೋಟೆ (ಜ.19): ಕಳೆದ ಹಲವು ದಿನಗಳಿಂದ ತೆರೆಮರೆಯಲ್ಲಿ ಸಭೆಗಳನ್ನು ನಡೆಸಿ ಸಂಘಟನಾತ್ಮಕ ಚರ್ಚೆಗಳ ಮೂಲಕ ಪಂಚಮಸಾಲಿ ಸಮುದಾಯದ 3ನೇ ಪೀಠದ ಸಿದ್ಧತೆಯಲ್ಲಿದ್ದ ಪಂಚಮಸಾಲಿ (Panchamasali) ಮಠಾಧೀಶರ ಒಕ್ಕೂಟ ಇದೀಗ ಅಂತಿಮವಾಗಿ ಸಮುದಾಯದ ಶ್ರೀಗಳ 3ನೇ ಪೀಠದ ಅಸ್ತಿತ್ವಕ್ಕಾಗಿ ದಿನಾಂಕ ನಿಗದಿ ಮಾಡುವ ಮೂಲಕ ಬಹಿರಂಗವಾಗಿ ಸಮುದಾಯಕ್ಕೆ ಮತ್ತೊಂದು ಪೀಠದ ಸಂದೇಶ ತಲುಪಿಸಿದೆ.
ಫೆಬ್ರವರಿ 14ರಂದು ಜಮಖಂಡಿ ಸಮೀಪದ ಅಲಗೂರಿನಲ್ಲಿ 3ನೇ ಪೀಠದ ಜಗದ್ಗುರುಗಳ ಪಟ್ಟಾಧಿಕಾರದ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಪಂಚಮಸಾಲಿ ಮಠಾಧೀಶರ ಒಕ್ಕೂಟದ ಕಾರ್ಯದರ್ಶಿ ಮನಗೂಳಿಯ ಹಿರೇಮಠದ ಸಂಗನಬಸವ ಸ್ವಾಮೀಜಿ (SanganaBasava Swamiji) ತಿಳಿಸಿದ್ದಾರೆ.
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಮಠಾಧೀಶರ ಒಕ್ಕೂಟದ ನಿರ್ಧಾರದಂತೆ ಮೊದಲ ಪೀಠಾಧಿಕಾರಿಯಾಗಿ ಬಬಲೇಶ್ವರದ ಡಾ.ಮಹಾದೇವ ಶಿವಾಚಾರ್ಯರನ್ನಾಗಿ (Dr.Mahadeva Shivacharya) ನೇಮಕ ಮಾಡಲಾಗಿದೆ. ಜಮಖಂಡಿಯಲ್ಲಿ ಮಂಗಳವಾರ ನಡೆದ ಮಠಾಧೀಶರ ಒಕ್ಕೂಟದ ಸಭೆಯಲ್ಲಿ 2 ಗಂಟೆಗಳ ಕಾಲ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.
Davanagere: ರೋಡ್ ರೋಲರ್ ಓಡಿಸಿ ಬಾಲ್ಯದ ಆಸೆ ಈಡೇರಿಸಿಕೊಂಡ ವಚನಾನಂದ ಶ್ರೀ
ಫೆಬ್ರವರಿ 14ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಡುವೆ ನಾಡಿನ ಹರಗುರುಚರ ಮೂರ್ತಿಗಳ ಸಮ್ಮುಖದಲ್ಲಿ ಹಾಗೂ ಪ್ರಮುಖ ರಾಜಕಾರಣಿಗಳ ಉಪಸ್ಥಿತಿಯಲ್ಲಿ ನಡೆಯುವ ಪಟ್ಟಾಧಿಕಾರದ ಕಾರ್ಯಕ್ರಮದಲ್ಲಿ ಈ ಭಾಗದ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಬಬಲೇಶ್ವರ ಶ್ರೀಗಳ ಮಾತು: ಪಂಚಮಸಾಲಿ ಸಮುದಾಯದ ಈಗಿದ್ದ ಎರಡು ಪೀಠಗಳು ಏನನ್ನು ಬಿಟ್ಟಿದ್ದಾವೋ ಅವುಗಳನ್ನು ನಾವು ಸರಿಪಡಿಸುವ ಉದ್ದೇಶದಿಂದ ನೂತನ ಒಕ್ಕೂಟ ಸ್ಥಾಪಿಸಿದ್ದಾಗಿ ಮೊದಲ ಪೀಠಾಪತಿಗಳಾದ ಬಬಲೇಶ್ವರದ ಡಾ.ಮಹದೇವ ಶಿವಾಚಾರ್ಯ ಶ್ರೀಗಳು ತಿಳಿಸಿದರು. ಸಮುದಾಯದಲ್ಲಿ ನಾವು ಹೊಸದೇನು ಮಾಡಲು ಹೊರಟಿಲ್ಲ. ಆದರೂ ಸಮುದಾಯದಲ್ಲಿ ಧಾರ್ಮಿಕ ಸಂಸ್ಕಾರವನ್ನು ನೀಡುವ ಕೆಲಸ ಮಾಡುವುದು ಮೊದಲ ಆದ್ಯತೆಯಾದರೆ ನಾಸ್ತಿಕರಾಗುತ್ತಿರುವ ಯುವಕರಲ್ಲಿ ಧಾರ್ಮಿಕ ಭಾವನೆ ಮೂಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.
ಸದ್ಯ ಪಂಚಮಸಾಲಿ ಸಮುದಾಯದಲ್ಲಿ ಮೊದಲು ಎರಡು ಪೀಠಗಳಿದ್ದವು. ಇದೀಗ 3ನೇ ಪೀಠ ಅಸ್ತಿತ್ವಕ್ಕೆ ಬಂದಿದೆ. ಸಂದರ್ಭ ಬಂದರೆ ಜಂಗಮರು ಐದು ಪೀಠಗಳನ್ನು ಮಾಡಿದ ಹಾಗೆ ಪಂಚಮಸಾಲಿ ಸಮುದಾಯದಲ್ಲಿ ಇನ್ನೂ ಎರಡು ಪೀಠಗಳು ಬರಬಹುದು. ಅದರಲ್ಲಿ ಅಚ್ಚರಿ ಪಡಬೇಕಾಗಿಲ್ಲ.-ಬಬಲೇಶ್ವರದ ಮಹಾದೇವ ಶ್ರೀಗಳು, 3ನೇ ಪೀಠದ ನೂತನ ಪೀಠಾಧಿಪತಿ
ವಚನಾನಂದ ಶ್ರೀಗೆ ಕರೆ ಮಾಡಿದ ಉಪ ರಾಷ್ಟ್ರಪತಿ Venkaiah Naidu
ಮಾಜಿ ಸಿಎಂ ಬಿಎಸ್‌ವೈ ಕೈಕೊಟ್ಟಿದ್ದಾರೆ: ‘2ಎ’ ಮೀಸಲಾತಿ (2 A Reservation) ವಿಚಾರ ಈಗಾಗಲೇ ಒಂದು ಹಂತಕ್ಕೆ ತಲುಪಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ್ದಾರೆ. ವಿಳಂಬವಾದಲ್ಲಿ ಮತ್ತೆ ಹೋರಾಟಕ್ಕೆ ಮುಂದಾಗಲಿದ್ದೇವೆ ಎಂದು ಕೂಡಲಸಂಗಮ ಪೀಠಾಧ್ಯಕ್ಷ ಜಯಮೃತ್ಯುಂಜಯ್ಯ ಸ್ವಾಮೀಜಿ (Jayamrutunjaya Swamiji) ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಕಲ್ಪಿಸುವ ವಿಶ್ವಾಸವಿದೆ. ಒಂದು ವೇಳೆ ಮೀಸಲಾತಿ ಕಲ್ಪಿಸದಿದ್ದರೆ ಮತ್ತೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಮಾರ್ಚ್ ತಿಂಗಳ ಒಳಗೆ ಸಿಎಂ ಮೀಸಲಾತಿ ನೀಡುತ್ತೆನೆಂದು ಸಿಎಂ ಭರವಸೆ ಕೊಟ್ಟಿದ್ದಾರೆ. ನಮಗೆ ಬಸವರಾಜ ಬೊಮ್ಮಾಯಿ ಅವರ ಮೇಲೆ ನಂಬಿಕೆ, ವಿಶ್ವಾಸವಿದೆ. ಹೀಗಾಗಿ ಸಿಎಂ ನಮ್ಮ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳಬೇಕು.