Asianet Suvarna News Asianet Suvarna News

Davanagere: ರೋಡ್‌ ರೋಲರ್‌ ಓಡಿಸಿ ಬಾಲ್ಯದ ಆಸೆ ಈಡೇರಿಸಿಕೊಂಡ ವಚನಾನಂದ ಶ್ರೀ

*  ಹರಿಹರ ಪಂಚಮಸಾಲಿ ಪೀಠದಲ್ಲಿ ನೆಲ ಸಮತಟ್ಟು ಮಾಡುವ ಕಾರ್ಯಕ್ಕೆ ಸಾರ್ಥಿ
*  ಹರ ಜಾತ್ರೆ ಮೂಂದುಸುವಂತೆ ಸಲಹೆ ನೀಡಿದ್ದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು
*  ರೋಡ್‌ ರೋಲರ್‌ ಚಾಲನೆ ಮಾಡಿ ಗಮನ ಸೆಳೆದ ಶ್ರೀಗಳು
 

Vachananand Swamiji Drive Road Roller at Harihara in Davanagere grg
Author
Bengaluru, First Published Jan 12, 2022, 8:44 AM IST

ದಾವಣಗೆರೆ(ಜ.12):  ಯೋಗ(Yoga), ಧ್ಯಾನದಿಂದಲೇ ಪ್ರಸಿದ್ಧರಾದ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ(Vachananand Swamiji) ಇದೀಗ ರೋಡ್‌ ರೋಲರ್‌ಗಳನ್ನು ಚಾಲನೆ ಮಾಡಿ, ನೆಲವನ್ನು ಗಟ್ಟಿಗೊಳಿಸುವ ಮೂಲಕ ಶ್ರೀಪೀಠದ ಕಾಮಗಾರಿಗೆ ತಮ್ಮ ಶ್ರಮವನ್ನೂ ಹಾಕಿದ್ದಾರೆ.

ಹರಿಹರದ ಪಂಚಮಸಾಲಿ ಪೀಠದಲ್ಲಿ(Harihara Panchamasali Peetha) ಜ.14ರಿಂದ ಎರಡು ದಿನಗಳ ಕಾಲ ಆಯೋಜಿಸಿದ್ದ ಹರ ಜಾತ್ರೆಯನ್ನು(Hara Fair) ಕೊರೋನಾ(Coronavirus), ಓಮಿಕ್ರಾನ್‌(Omicron) ನಿಯಂತ್ರಿಸುವ ನಿಟ್ಟಿನಲ್ಲಿ, ಸರ್ಕಾರಗ ಮಾರ್ಗಸೂಚಿ ಬದ್ಧರಾಗಿ ಹಾಗೂ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು(Venkaiah Naidu) ಸಲಹೆ ಮೇರೆಗೆ ತಾತ್ಕಾಲಿಕವಾಗಿ ಮುಂದೂಡಿರುವ ಹಿನ್ನೆಲೆಯಲ್ಲಿ ಶ್ರೀಪೀಠದಲ್ಲಿ ನೆಲ ಸಮತಟ್ಟು ಗೊಳಿಸುವ ಕಾರ್ಯಕ್ಕೆ ತಮ್ಮದೇ ಶ್ರಮದಾನ ಮಾಡಿ, ಗಮನ ಸೆಳೆದರು.

Mekedatu Padayatreಗೆ ಬನ್ನಿ: ವಚನಾನಂದ ಶ್ರೀಗೆ ಡಿಕೆಶಿ ಆಹ್ವಾನ!

ಶ್ರೀಪೀಠದಲ್ಲಿ ನೆಲ ಸಮತಟ್ಟು ಮಾಡುತ್ತಿದ್ದ ರೋಡ್‌ ರೋಲರ್‌(Road Roller) ಚಾಲನೆ ಮಾಡಲು ಆಸೆಪಟ್ಟು,ಅದರಂತೆ ಭಾರದ ರೋಡ್‌ ರೋಲರ್‌ ಅನ್ನು ಅನುಭವಿ ಚಾಲಕನಂತೆ ಮುನ್ನಡೆಸುವ ಮೂಲಕ ದೊಡ್ಡ ಸಮಾಜವನ್ನೂ ಇದೇ ರೀತಿ ಮುನ್ನಡೆಸುವ ಸಂದೇಶವನ್ನೂ ಸಾರಿದರು.

ಪಂಚಮಸಾಲಿ ಪೀಠದಲ್ಲಿ ಕಾಪೌಂಡ್‌ ವಾಲ್‌ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಸುಮಾರು 25 ಅಡಿ ಎತ್ತರದ ಹಾಗೂ 600 ಅಡಿ ಉದ್ದದ ಕಾಂಪೌಂಡ್‌ ನಿರ್ಮಾಣ ಕಾರ್ಯ ಸಾಗಲಿದೆ. ಅದಕ್ಕಾಗಿ ಹಂತ ಹಂತವಾಗಿ ಮಣ್ಣು ತುಂಬಿದ ಜಾಗದಲ್ಲಿ ರೋಡ್‌ ರೋಲರ್‌ ಸಹಾಯದಿಂದ ನೆಲವನ್ನು ಸಮತಟ್ಟು ಮಾಡಿ, ಗಟ್ಟಿಗೊಳಿಸುವ ಕಾರ್ಯಕ್ಕೆ ವಚನಾನಂದ ಸ್ವಾಮೀಜಿ ರೋಡ್‌ ರೋಲರ್‌ ಚಾಲನೆ ಮಾಡುವ ಮೂಲಕ ಗಮನ ಸೆಳೆದರು.

ಮುಗ್ಧ ಮಕ್ಕಳಿಗೆ ದೊಡ್ಡ ದೊಡ್ಡ ಯಂತ್ರ, ದೊಡ್ಡ ವಹನಗಳ ಮೇಲೆ ಏನೋ ವ್ಯಾಮೋಹ ಇರುತ್ತದೆ. ಅದೇ ರೀತಿ ತಮಗೂ ಬಾಲ್ಯದಿಂದಲೂ ರೋಡ್‌ ರೋಲರ್‌ ಮೇಲೆ ಒಂದಿಷ್ಟು ಹೆಚ್ಚಿನ ಪ್ರೀತಿ, ಆಸಕ್ತಿ. ಒಮ್ಮೆಯಾದರೂ ಅದನ್ನು ಚಾಲನೆ ಮಾಡಬೇಕೆಂಬ ಆಸೆ ಇತ್ತು. ಅಂತಹ ಧೈತ್ಯ ರೋಡ್‌ ರೋಲರ್‌ ಚಾಲನೆ ಮಾಡುವ ಮೂಲಕ ನಮ್ಮ ಬಾಲ್ಯದ ಆಸೆಯನ್ನು ಈಗ ಈಡೇರಿಸಿಕೊಂಡೆ ಎನ್ನುತ್ತಾ ತಮ್ಮ ಮಂದಹಾಸದ ನಗುವನ್ನು ಶ್ರೀ ವಚನಾನಂದ ಸ್ವಾಮೀಜಿ ಭಕ್ತರ ಮುಂದೆ ತೋಡಿಕೊಂಡರು. ಅನುಭವಿ ಚಾಲಕನಂತೆ ರೋಡ್‌ ರೋಲರ್‌ ಚಾಲನೆ ಮಾಡಿದ ಶ್ರೀಗಳತ್ತ ರೋಡ್‌ ರೋಲರ್‌ ಚಾಲಕನೂ ಗಲ್ಲದ ಮೇಲೆ ಇಟ್ಟುಕೊಂಡು ನೋಡುತ್ತಾ ನಿಂತಿದ್ದ.

ವಚನಾನಂದ ಶ್ರೀಗೆ ಕರೆ ಮಾಡಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

ಒಮಿಕ್ರೋನ್‌ ಹಿನ್ನೆಲೆಯಲ್ಲಿ ಹರ ಜಾತ್ರೆ ಮುಂದೂಡುವಂತೆ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ಅವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸಲಹೆ ನೀಡಿದ್ದಾರೆ. ಅಲ್ಲದೆ ಭಾರತದ ಆಜಾದಿ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸಂಸತ್‌ ಭವನಕ್ಕೆ(Parliament House) ಆಗಮಿಸುವಂತೆ ಆಹ್ವಾನಿಸಿದ್ದರು.  

Panchamasali Reservation: ಕಾನೂನಾತ್ಮಕವಾಗಿ 2ಎ ಮೀಸಲಾತಿಗೆ ಪ್ರಯತ್ನ: ವಚನಾನಂದ ಶ್ರೀ

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಯೋಗ ಸಾಧನೆ, ಪಂಚಮಸಾಲಿ ಜಗದ್ಗುರು ಪೀಠದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಅವರಿಂದ ಮಾಹಿತಿ ಸಂಗ್ರಹಿಸಿದ್ದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಆಜಾದಿ ಅಮೃತ ಮಹೋತ್ಸವ(Azadi Amrut Mahotaswa) ಹಿನ್ನೆಲೆಯಲ್ಲಿ ಸಂಸತ್‌ ಭವನಕ್ಕೆ ಆಗಮಿಸುವಂತೆ ಆತ್ಮೀಯವಾಗಿ ಮಾತನಾಡಿಸಿ ಆಹ್ವಾನ ನೀಡಿದ್ದರು.

ಸದ್ಯ ದೇಶಾದ್ಯಂತ(India) ಕೊರೋನಾ 3ನೇ ಅಲೆ(Corona 3rd Wave), ಒಮಿಕ್ರೋನ್‌ ಭೀತಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜ.14ರಿಂದ 2 ದಿನಗಳ ಕಾಲ ಹರಿಹರ ಪಂಚಮಸಾಲಿ ಪೀಠದಲ್ಲಿ ಹಮ್ಮಿಕೊಂಡ ಹರ ಜಾತ್ರೆಯನ್ನು ಒಮಿಕ್ರೋನ್‌ ಭೀತಿ ಕಡಿಮೆಯಾಗುವವರೆಗೂ ಹರಜಾತ್ರೆ ಮುಂದೂಡುವಂತೆ ಸಲಹೆ ನೀಡಿದ್ದರು. 
 

Follow Us:
Download App:
  • android
  • ios