Yash: ರಾಮರಾಜ್‌ ಪಂಚೆ ಬ್ರಾಂಡ್‌ಗೆ ರಾಕಿಂಗ್‌ ಸ್ಟಾರ್‌ ರಾಯಭಾರಿ

ಸಾಂಪ್ರದಾಯಿಕ ಧೋತಿ ಬ್ರಾಂಡ್‌ ರಾಮರಾಜ್‌ಗೆ ರಾಕಿಂಗ್‌ ಸ್ಟಾರ್‌ ಯಶ್‌ ರಾಯಭಾರಿಯಾಗಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ರಾಮರಾಜ್‌, ‘ಯಶ್‌ ರಾಷ್ಟ್ರಮಟ್ಟದಲ್ಲಿ ನಮ್ಮ ಬ್ರಾಂಡ್‌ ಅನ್ನು ಪ್ರತಿನಿಧಿಸಲಿದ್ದಾರೆ. 

Pan Indian superstar Yash becomes brand ambassador for Ramraj Cottons gvd

ಬೆಂಗಳೂರು (ಫೆ.12): ಸಾಂಪ್ರದಾಯಿಕ ಧೋತಿ ಬ್ರಾಂಡ್‌ ರಾಮರಾಜ್‌ಗೆ (Ramraj) ರಾಕಿಂಗ್‌ ಸ್ಟಾರ್‌ ಯಶ್‌ (Yash) ರಾಯಭಾರಿಯಾಗಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ರಾಮರಾಜ್‌, ‘ಯಶ್‌ ರಾಷ್ಟ್ರಮಟ್ಟದಲ್ಲಿ ನಮ್ಮ ಬ್ರಾಂಡ್‌ ಅನ್ನು ಪ್ರತಿನಿಧಿಸಲಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದ ಪ್ರಚಾರ ಕಾರ್ಯಗಳಲ್ಲಿ ಅವರು ಭಾಗಿಯಾಗಲಿದ್ದಾರೆ. ಈ ಪ್ರತಿಭಾವಂತ ಸೂಪರ್‌ಸ್ಟಾರ್‌ ದೇಶಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. 

ಅವರೀಗ ನಮ್ಮ ಸಂಸ್ಥೆಯ ಭಾಗವಾಗಿದ್ದಾರೆ ಎನ್ನಲು ಹೆಮ್ಮೆಯಾಗುತ್ತಿದೆ’ ಎಂದು ತಿಳಿಸಿದೆ. ‘ರಾಮರಾಜ್‌ ಸಂಸ್ಥೆ 10,000ಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶ ನೀಡಿದೆ. 50 ಸಾವಿರಕ್ಕೂ ಅಧಿಕ ನೇಕಾರರು ಈ ಕಂಪನಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ಯಶ್‌ ನಮ್ಮ ಕುಟುಂಬದ ಹೊಸ ಸದಸ್ಯರಾಗಿದ್ದಾರೆ. 

'ಕೆಜಿಎಫ್‌' (KGF) ಚಿತ್ರದ ತಮ್ಮ ಪಾತ್ರದ ಮೂಲಕ ಅವರು ದೇಶಾದ್ಯಂತ ಸಂಚಲನ ಮೂಡಿಸಿದ್ದಾರೆ. 'ಯಶೋಮಾರ್ಗ' (Yashomarga) ಎಂಬ ಸಂಸ್ಥೆಯ ಮೂಲಕ ಅನೇಕ ಸಮಾಜಮುಖಿ ಕೆಲಸಗಳಿಂದಲೂ ಗುರುತಿಸಿಕೊಂಡಿದ್ದಾರೆ. ಅವರು ನಮ್ಮ ಸಂಸ್ಥೆಯ ಮುಖವಾಣಿಯಾಗಿರುತ್ತಾರೆ ಎಂದು ಘೋಷಿಸಲು ಹೆಮ್ಮೆ ಪಡುತ್ತೇವೆ’ ಎಂದೂ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

KGF Yash: 'ಕೆಜಿಎಫ್‌ 2' ಚಿತ್ರದ ಡಬ್ಬಿಂಗ್‌ ಮುಗಿಸಿದ ಶ್ರೀನಿಧಿ ಶೆಟ್ಟಿ

ಶ್ರೀಕೃಷ್ಣ ಮಠಕ್ಕೆ ಭೇಟಿ: 'ಕೆಜಿಎಫ್​ 2' (KGF 2) ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾ. ಈಗಾಗಲೇ ಸಿನಿಮಾದ ಶೂಟಿಂಗ್​ ಪೂರ್ಣಗೊಂಡಿದ್ದು ಉಳಿದಿರುವ ಎಡಿಟಿಂಗ್​ ಸಲುವಾಗಿ ಕೆಲವು ದಿನಗಳಿಂದ ಕುಂದಾಪುರದಲ್ಲಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು (Ravi Basruru) ಅವರ ಮನೆಯಲ್ಲಿ ಇಡೀ ಚಿತ್ರತಂಡ ಬೀಡುಬಿಟ್ಟಿದೆ. ಈ ಮಧ್ಯೆ ಯಶ್ (Yash) ದೇಗುಲ ದರ್ಶನ ಮಾಡುತ್ತಿದ್ದು, ಉಡುಪಿಯ ಶ್ರೀಕೃಷ್ಣ ಮಠಕ್ಕೆ (Sri Krishna Mutt) ಭೇಟಿಕೊಟ್ಟು ಕನಕ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿದ್ದಾರೆ. 

ನಟ ಯಶ್ ಜೊತೆಗೆ ನಿರ್ಮಾಪಕ ವಿಜಯ್ ಕಿರಂಗದೂರು (Vijay Kiragandur) ಸಹ ಶ್ರೀಕೃಷ್ಣನ ದರ್ಶನವನ್ನು ಪಡೆದಿದ್ದಾರೆ.  ಬಳಿಕ ಕೊಲ್ಲೂರು ಕುಂಬಾಶಿ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ದೇಗುಲದಲ್ಲಿ ರಾಕಿ ಭಾಯ್​ ಜೊತೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಹಾಗಾಗಿ ಅಭಿಮಾನಿಗಳ (Fans) ಸೆಲ್ಫಿಗೆ (Selfie) ಯಶ್ ಅವಕಾಶ ಮಾಡಿಕೊಟ್ಟರು. 

ಈ ಹಿಂದೆ ಕೊಲ್ಲೂರು, ಅನೆಗುಡ್ಡೆ ದೇವಾಲಯಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಜೊತೆ ಯಶ್ ಭೇಟಿ ನೀಡಿದ್ದರು. ಶುಕ್ರವಾರದಂದು ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸ್ಟುಡಿಯೋ ಮುಂದೆ ಅಭಿಮಾನಿಗಳ ಜನಸಾಗರವೇ ಸೇರಿತ್ತು. ತಮ್ಮ ನೆಚ್ಚಿನ ನಟ ರಾಕಿಂಗ್​ ಸ್ಟಾರ್​ ಯಶ್​ ಅವರನ್ನು ಭೇಟಿ ಮಾಡಬೇಕೆಂದು ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಫ್ಯಾನ್ಸ್​ ಮುಗಿಬಿದ್ದಿದ್ದರು.

KGF Yash: ಪರಿಸ್ಥಿತಿ ಊಹಿಸಿಯೇ ಕೆಜಿಎಫ್‌ 2 ಬಿಡುಗಡೆ ದಿನಾಂಕ ನಿಗದಿ

ಅಭಿಮಾನಿಗಳಿಗೆ ಬೇಸರವಾಗಬಾರದು ಎಂಬ ಕಾರಣಕ್ಕೆ ಸರತಿಸಾಲಿನಲ್ಲಿ ಬಂದವರಿಗೆ ರಾಕಿ ಭಾಯ್​ ಜೊತೆ ಸೆಲ್ಫಿಗೆ ಅವಕಾಶ ಮಾಡಿಕೊಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ (Viral) ಆಗಿತ್ತು. ಯಶ್​ ಅವರ ಹುಟ್ಟುಹಬ್ಬಕ್ಕೆ 'ಕೆಜಿಎಫ್ 2' ಚಿತ್ರದ ಹೊಸ ಪೋಸ್ಟರ್​ವೊಂದು ರಿಲೀಸ್​ ಆಗಿತ್ತು. 'ಡೇಂಜರ್​ ಆಹೆಡ್' ಎಂಬ ಬರಹ ಬರೆದು ಪೋಸ್ಟರ್​ ರಿಲೀಸ್​ ಮಾಡಲಾಗಿತ್ತು. 

Latest Videos
Follow Us:
Download App:
  • android
  • ios