ಪ್ಯಾಲೆಸ್ತೀನ್ ಧ್ವಜ ಹಾರಿಸುವ ದೇಶದ್ರೋಹಿಗಳನ್ನ ಹಿಡಿದು ಮುಸ್ಲಿಮರು ದೇಶಭಕ್ತಿ ಮೆರೆಯಲಿ

ಮಂಡ್ಯ ಜಿಲ್ಲೆ ನಾಗಮಂಗಲದ ಬದರಿ ಕೊಪ್ಪಲುವಿನಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ ನಡೆದ ಗಲಭೆಗೆ ಖಂಡನೆ ವ್ಯಕ್ತಪಡಿಸಿ, ದಾವಣಗೆರೆಯಲ್ಲಿ ಮತೀಯ ಶಕ್ತಿಗಳ ಬಂಧನಕ್ಕೆ ಒತ್ತಾಯಿಸಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟದಿಂದ ನಗರದಲ್ಲಿ ಬುಧವಾರ ಹಳೇ ಪಿ.ಬಿ. ರಸ್ತೆಯಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟಿಸಲಾಯಿತು.

Palestine flag flying during Eid Milad pro hindus spark rav

ದಾವಣಗೆರೆ (ಸೆ.19) ಮಂಡ್ಯ ಜಿಲ್ಲೆ ನಾಗಮಂಗಲದ ಬದರಿ ಕೊಪ್ಪಲುವಿನಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ ನಡೆದ ಗಲಭೆಗೆ ಖಂಡನೆ ವ್ಯಕ್ತಪಡಿಸಿ, ದಾವಣಗೆರೆಯಲ್ಲಿ ಮತೀಯ ಶಕ್ತಿಗಳ ಬಂಧನಕ್ಕೆ ಒತ್ತಾಯಿಸಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟದಿಂದ ನಗರದಲ್ಲಿ ಬುಧವಾರ ಹಳೇ ಪಿ.ಬಿ. ರಸ್ತೆಯಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟಿಸಲಾಯಿತು.

ನಗರದ ಪಾಲಿಕೆ ಮುಂಭಾಗದಲ್ಲಿ ಒಕ್ಕೂಟದ ಮುಖಂಡರು, ಬಿಜೆಪಿ ಹಿರಿಯರು, ಹಿಂದು ಪರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನಡೆದ ರಸ್ತೆ ತಡೆ ಹಾಗೂ ಪ್ರತಿಭಟನೆಯಲ್ಲಿ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಲಾಯಿತು. ಹಿಂದು ಸಮಾಜ, ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಮಾತನಾಡಿ, ನಾಗಮಂಗಲದ ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿ, ಹಿಂದುಗಳಿಗೆ ಹೆದರಿಕೆ ಹುಟ್ಟಿಸುವ ಕೆಲಸ ಮಾಡಿದ್ದಾರೆ. ಮತಾಂಧರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲಿ ಶಾಂತಿ, ಸಾಮರಸ್ಯಕ್ಕೆ ಭಂಗ ತಂದವರ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಮುಲಾಜಿಲ್ಲದೇ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.

ದಾವಣಗೆರೆ ಗಾಂಧಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಿಂದುಗಳಿಗೆ ಸೇರಿದ ಜಾಗದಲ್ಲಿ ಇದ್ದ ಹಿಂದುಗಳ ಧ್ವಜವನ್ನು ಇಳಿಸಿ, ಇಸ್ಲಾಂ ಧ್ವಜ ಕಟ್ಟಿರುವುದು, ಗಾಂಧಿ ವೃತ್ತದಲ್ಲಿ ಈದ್ ಮಿಲಾದ್ ಮೆರವಣಿಗೆಯ ಹಾಗೂ ಅರಳೀಮರ ವೃತ್ತದಲ್ಲಿ ಧ್ವಜ ಹಾರಿಸಿರುವುದು, ಫ್ರೀ ಪ್ಯಾಲೆಸ್ತೀನ್ ಬರಹದ ಟೀ ಶರ್ಟ್‌ಗಳನ್ನು ಧರಿಸಿದ್ದ ವಿಚಾರವನ್ನು ಜಿಲ್ಲಾ ಪೊಲೀಸ್ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದರು.

ಜಗನ್ ಆಡಳಿತದಲ್ಲಿ ತಿರುಮಲ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬಳಸಲಾಗಿತ್ತು: ಸಂಚಲನ ಸೃಷ್ಟಿಸಿದ ಸಿಎಂ ಚಂದ್ರಬಾಬು ನಾಯ್ಡು!

ಮುಸಲ್ಮಾನರು ರಾಷ್ಟ್ರಭಕ್ತಿ ಮೆರೆಯಲಿ:

ಪ್ಯಾಲಿಸ್ತೀನ್ ಪರ ವ್ಯಾಮೋಹ ತೋರಿದ ರಾಷ್ಟ್ರದ್ರೋಹಿಗಳನ್ನು ಇಲ್ಲಿನ ರಾಷ್ಟ್ರಭಕ್ತ ಮುಸಲ್ಮಾನರು ಹಿಡಿದು, ಪೊಲೀಸರಿಗೆ ಒಪ್ಪಿಸಬೇಕು. ನೀವು ಈ ಕೆಲಸವನ್ನು ಮಾಡಿಲ್ಲವಾದರೆ ಹಿಂದು ಸಮಾಜವು 1941ರಲ್ಲಿ ಜಿನ್ನಾ ಕನಸಿನಂತೆ ದೇಶ ತುಂಡರಿಸುವ ವೇಳೆ ಸಂವಿಧಾನಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಮುಸಲ್ಮಾನರಿಗಾಗಿ ಪಾಕಿಸ್ತಾನ ಕೊಡುವುದಾದರೆ, ಭಾರತವನ್ನು ಹಿಂದು ರಾಷ್ಟ್ರವಾಗಿ ಘೋಷಿಸಬೇಕೆಂಬುದಾಗಿ ಹೇಳಿದ್ದರು. ಅಂದು ಭಾರತ ಇಬ್ಭಾಗದ ವೇಳೆ ಬಾಬಾ ಸಾಹೇಬರು ಹೇಳಿದ್ದ ಮಾತುಗಳನ್ನು ನಾವು ಇಂದು ಆಡಬಾರದೇ ಎಂದು ಪ್ರಶ್ನಿಸಿದರು.
ಸ್ವಾಗತಿಸೋದು ಕಲಿಯಿರಿ:

ಗಣೇಶೋತ್ಸವರ ಮೇಲೆ ನೀವು ಕಲ್ಲು ಹೊಡೆದರೆ, ಪೆಟ್ರೋಲ್ ಬಾಂಬ್ ಎಸೆಯುವುದಾದರೆ, ವಾಹನ, ಆಸ್ತಿಗಳನ್ನು ನಾಶ ಮಾಡುವುದಾದರೆ ನಿಮಗೆ ಅಷ್ಟು ಹಿಂದುತ್ವದ ಮೇಲೆ ದ್ವೇಷ ಇರುವುದೇ ಆದರೆ ಹಬ್ಬ ಹರಿದಿನಗಳ ವೇಳೆ ಹಿಂದುಗಳ ದೇವರಿಗೆ ಹೂವು, ಹಣ್ಣು ಮಾರಾಟ ಮೊದಲು ನಿಲ್ಲಿಸಿ. ಆಗ ನೀವು ನಿಜವಾದ ಮುಸ್ಲಿಮರೆಂದು ಒಪ್ಪುತ್ತೇವೆ. ನೀವು ಈ ದೇಶದ ವಾಸಿಗಳೇ ಆಗಿದ್ದರೆ, ದೇಶ ಭಕ್ತರಾಗಿರುವುದು ನಿಜವಾಗಿದ್ದರೆ ನಿಮ್ಮ ಮೆರವಣಿಗೆಗಳಲ್ಲಿ ಬಹುಸಂಖ್ಯಾತ ಹಿಂದುಗಳು ಹೇಗೆ ನಿಮ್ಮ ಮೆರವಣಿಗೆ ಸ್ವಾಗತಿಸುತ್ತಾರೋ, ಹಿಂದುಗಳ ಹಬ್ಬದ ಮೆರವಣಿಗೆ ಬಂದಾಗ ನೀವು ಸ್ವಾಗತಿಸುವುದನ್ನು ಕಲಿಯಿರಿ ಎಂದು ತಿಳಿಸಿದರು.
ಹಿಂದು ಜಾಗರಣಾ ವೇದಿಕೆ ಪ್ರಾಂತ ಸಹ ಸಂಯೋಜಕ ಸತೀಶ ಪೂಜಾರಿ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಎಸ್.ಟಿ. ವೀರೇಶ, ರಾಜನಹಳ್ಳಿ ಶಿವಕುಮಾರ, ಬಿ.ಜಿ. ಅಜಯಕುಮಾರ, ಮಾಡಾಳ ಮಲ್ಲಿಕಾರ್ಜುನ, ಟಿ.ಶ್ರೀನಿವಾಸ ದಾಸಕರಿಯಪ್ಪ, ಲೋಕಿಕೆರೆ ನಾಗರಾಜ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ವಿನಾಯಕ ರಾನಡೆ, ಶಂಭುಲಿಂಗಪ್ಪ, ಅಕ್ಕಿ ಪ್ರಭು ಕಲ್ಬುರ್ಗಿ, ಶಿವಾಜಿ ರಾವ್‌, ಪಿ.ಸಿ. ಶ್ರೀನಿವಾಸ ಭಟ್‌, ಸೋಗಿ ಗುರು, ಆರ್.ಶಿವಾನಂದ, ವಿಶ್ವಾಸ್‌, ಯೋಗೇಶ, ಜೊಳ್ಳಿ ಗುರು, ನಾಗರಾಜ ಸುರ್ವೇ, ಕೊಟ್ರೇಶ, ಅಣ್ಣಪ್ಪ, ಮಲ್ಲಿಕಾರ್ಜುನ, ವೀರೇಶ, ಕೊಟ್ರೇಶ ಗೌಡ, ನವೀನ, ಕಲ್ಲೇಶ, ಅರುಣ, ಗುಡ್ಡದಕೆರೆ ಬಸವರಾಜ, ಸಿದ್ದೇಶ, ಕಿರಣ, ಕಡ್ಲೇಬಾಳು ಧನಂಜಯ, ಭಾಗ್ಯ ಪಿಸಾಳೆ, ಚೇತನಾ ಬಾಯಿ, ಸವಿತಾ ರವಿ, ಸಹನಾ, ಮಂಜುನಾಥ, ಗೌರಿ ಸತೀಶ, ಶ್ಯಾಮ ಪೈಲ್ವಾನ, ಮಂಜುನಾಥ ಪೈಲ್ವಾನ, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ ಇತರರು ಇದ್ದರು.

ಮುಂದಿನ ದಿನಗಳಲ್ಲಿ ಸಮಿತಿ ಹೇಳಿ ಮಾರ್ಗದಲ್ಲೇ ಹೋಗಬೇಕು:

 ಅರಳಿ ಮರದಿಂದಲೇ ದಸರಾ ಮೆರವಣಿಗೆ ಮುಂದಿನ ದಿನಗಳಲ್ಲಿ ಗಣೇಶೋತ್ಸವ ಮೆರವಣಿಗೆಗಳು ಸಮಿತಿಗಳು ಹೇಳಿದ ಮಾರ್ಗದಲ್ಲೇ ಹೋಗಬೇಕೇ ಹೊರತು, ಮೌಲ್ವಿಗಳು, ಹಜರತ್‌ಗಳು, ಪಾದ್ರಿಗಳು ಹೇಳಿದ ಮಾರ್ಗಗಳನ್ನು ಪೊಲೀಸರು ಕೊಡಬಾರದು. ಮುಂದಿನ ದಸರಾ ಮಹೋತ್ಸವದ ಮೆರವಣಿಗೆಯು ದಾವಣಗೆರೆ ಶ್ರೀ ವೆಂಕಟೇಶ್ವರ ವೃತ್ತದ ಬದಲಾಗಿ ಅರಳಿ ಮರದಿಂದ ಆರಂಭವಾಗುತ್ತದೆ. ಇದಕ್ಕೆ ಮುಸ್ಲಿಂ ಸಮಾಜ, ಪೊಲೀಸ್ ಇಲಾಖೆ ಸಹಕಾರ ಕೊಡಬೇಕು. ಇಲ್ಲವಾದರೆ ಹಿಂದು ಸಮಾಜವೇ ರಕ್ಷಣೆ ಮಾಡಿಕೊಂಡು, ಶೋಭಾಯಾತ್ರೆ ನಡೆಸಬೇಕಾಗುತ್ತದೆ ಎಂದು ಪ್ರತಿಭಟನೆಯಲ್ಲಿ ಹಿಂದು ಸಂಘಟನೆಗಳ ಮುಖಂಡರು ಎಚ್ಚರಿಸಿದರು.

ಮೋದಿ ಜೊತೆ ಗಣೇಶ ಪೂಜೆ ಮಾಡೋಕೆ ಸಮಯ ಇದೆ, ಉಮರ್‌ ಖಾಲಿದ್ ವಿಚಾರಣೆ ಮಾಡೋಕೆ ಆಗಲ್ವಾ? ಸಿಜೆಐಗೆ ಸ್ವರಾ ಭಾಸ್ಕರ್‌ ಆವಾಜ್‌!

ಹಿಂದೂಗಳ ಮನೆ ಮೇಲೆ ದಾಳಿ:

ಮನೆಗೆ ನುಗ್ಗಿ ಹಲ್ಲೆ, ಬಂಧನಕ್ಕೆ ಒತ್ತಾಯದಾವಣಗೆರೆ ಕಾರ್ಲ್ ಮಾರ್ಕ್ಸ್‌ ನಗರದ ಹಿಂದು ಯುವಕರಿಗೆ ಹಲ್ಲೆ ಮಾಡಿರುವುದನ್ನು ಸಮಿತಿ ತೀವ್ರವಾಗಿ ಖಂಡಿಸುತ್ತದೆ. ತಕ್ಷಣ‍ವೇ ಪೊಲೀಸ್ ಇಲಾಖೆಯು ಹಿಂದು ಯುವಕರ ಮನೆಗಳಿಗೆ ನುಗ್ಗಿದ, ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಉದಾಸೀನ ಮಾಡಿದರೆ, ಮುಂದಿನ ದಿನಗಳಲ್ಲಿ ನಮ್ಮ ಹೋರಾಟವು ಅದೇ ಭಾಗದಲ್ಲಿ ಆಗಲಿದೆ. ಅದು ಆಗಬಾರದೆಂದರೆ ಪೊಲೀಸ್ ಇಲಾಖೆಯೂ ಎಚ್ಚೆತ್ತು, ಮೊದಲು ದುಷ್ಕರ್ಮಿಗಳನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಲಿ ಎಂದು ಮುಖಂಡರು ಆಗ್ರಹಿಸಿದರು.

Latest Videos
Follow Us:
Download App:
  • android
  • ios