ಮೋದಿ ಜೊತೆ ಗಣೇಶ ಪೂಜೆ ಮಾಡೋಕೆ ಸಮಯ ಇದೆ, ಉಮರ್‌ ಖಾಲಿದ್ ವಿಚಾರಣೆ ಮಾಡೋಕೆ ಆಗಲ್ವಾ? ಸಿಜೆಐಗೆ ಸ್ವರಾ ಭಾಸ್ಕರ್‌ ಆವಾಜ್‌!

ತಮ್ಮ ವಿವಾದಾತ್ಮ ಹೇಳಿಕೆಗಳಿಂದ ದೇಶಾದ್ಯಂತ ಸುದ್ದಿಯಾಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ 2020ರ ದೆಹಲಿ ಗಲಭೆ ಪಿತೂರಿ ನಡೆಸಿದ ಆರೋಪದಲ್ಲಿ ಬಂಧಿತನಾಗಿರುವ ಉಮರ್ ಖಾಲಿದ್ ಪರ ಬಹಿರಂಗವಾಗಿ ದನಿ ಎತ್ತಿರುವುದು, ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಪ್ರಶ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

swara bhaskar says cji dy chandrachud has time for ganesh pooja with pm modi but no time to hear umar khalid case rav

ದೆಹಲಿ (ಸೆ.18): ತಮ್ಮ ವಿವಾದಾತ್ಮ ಹೇಳಿಕೆಗಳಿಂದ ದೇಶಾದ್ಯಂತ ಸುದ್ದಿಯಾಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ(JNU) ಹಳೆಯ ವಿದ್ಯಾರ್ಥಿ ಮತ್ತು2020ರಲ್ಲಿ ನಡೆದ ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಹಲವು ವರ್ಷಗಳಿಂದ ಜೈಲಿನಲ್ಲಿರುವ ಉಮರ್ ಖಾಲಿದ್ ಅವರಂಥ ಮುಸ್ಲಿಂ ಯುವಕರ ಪರವಾಗಿ ಬಹಿರಂಗವಾಗಿ ದನಿಯೆತ್ತುವ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನೆತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ವಿಡಿಯೋ ಮಾತನಾಡಿರುವ ಸ್ವರಾ ಭಾಸ್ಕರ್, 'ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಉಮರ್ ಖಾಲಿದ್ ಪ್ರಕರಣವನ್ನು ಆಲಿಸಲು ನ್ಯಾಯಾಧೀಶರಿಗೆ ಸಮಯವಿಲ್ಲ, ಆದರೆ ಸಿಜೆಐ ಚಂದ್ರಚೂಡ್ ಅವರಿಗೆ ಪ್ರಧಾನಿ ಮೋದಿ ಅವರೊಂದಿಗೆ ಗಣೇಶ ಪೂಜೆ ಮಾಡಲು ಸಮಯವಿದೆಯೇ ಇದರ ಬಗ್ಗೆ ಉತ್ತರ ಕೊಡಿ ಎಂದು ನ್ಯಾಯಾಧೀಶರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

74ರ ಇಳಿವಯಸ್ಸಿನಲ್ಲೂ ಚುರುಕುತನ; ಫಿಟ್‌ನೆಸ್ ರಹಸ್ಯ ಬಿಚ್ಚಿಟ್ಟ ಪ್ರಧಾನಿ ಮೋದಿ!

ಸಿಎಎ-ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಕಳೆದ 4 ವರ್ಷಗಳಿಂದ ಜೈಲಿನಲ್ಲಿರುವ ಮುಸ್ಲಿಂ ಯುವಕರನ್ನು ಕಾಂಗ್ರೆಸ್ ನಾಯಕ ದ್ವಿಗ್ವಿಜಯ ಸಿಂಗ್ ಬೆಂಬಲಿಸಿದ ಬೆನ್ನಲ್ಲೇ ಸ್ವರಾ ಭಾಸ್ಕರ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಉಮರ್ ಖಾಲಿದ್ ಮುಸ್ಲಿಂ ಎಂಬ ಕಾರಣಕ್ಕೆ ಬಂಧಿಸಿದರು ನನ್ನನ್ನು ಯಾಕೆ ಬಂಧಿಸಲಿಲ್ಲ? ಏಕೆಂದರೆ ನಾನು ಹಿಂದೂ. ಉಮರ್ ಖಾಲಿದ್, ಶಾರ್ಜಿಲ್ ಇಮಾಮ್ ಮುಸ್ಲಿಮರು ಹೀಗಾಗಿ ಜೈಲಿನಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.

ನ್ಯಾಯಾಂಗ ವ್ಯವಸ್ಥೆ ಬಗ್ಗೆ ಪ್ರಶ್ನೆ:

ಸ್ವರಾ ಭಾಸ್ಕರ್ ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ನಮ್ಮ ದೇಶದ ನ್ಯಾಯ ವ್ಯವಸ್ಥೆಯ ಮುಂದೆ ಎಲ್ಲರೂ ಸಮಾನರು ಎಂಬ ಹಕ್ಕನ್ನು ನಮ್ಮ ದೇಶದ ಸಂವಿಧಾನ ನೀಡಿದೆ. ನ್ಯಾಯದ ಬಗ್ಗೆ ಎಲ್ಲರನ್ನೂ ಸಮಾನವಾಗಿ ಕಾಣದಿದ್ದರೆ ನ್ಯಾಯದ ಮುಂದೆ ಸಮಾನತೆಗೆ ಯಾವುದೇ ಅರ್ಥವಿಲ್ಲ. ಕಾಕತಾಳೀಯವಾಗಿ ನಾನು ಹಿಂದೂ ಕುಟುಂಬದಲ್ಲಿ ಅದರಲ್ಲೂ ಮೇಲ್ಜಾತಿ ಕುಟುಂಬದಲ್ಲಿ ಜನಿಸಿದೆ. ನಾನು ವಿದ್ಯಾವಂತೆ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಮಾತನಾಡಬಲ್ಲೆ, ನಾನು ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಸಮಾನ ವ್ಯವಸ್ಥೆಯ ಈ ದೇಶದಲ್ಲಿ ಮುಸ್ಲಿಮರನ್ನು ವಿನಾ ಕಾರಣ ಬಂಧಿಸಿ ಜೈಲಿಗೆ ಹಾಕಲಾಗುತ್ತಿದೆ. ಅಸಮಾನತೆಯ ಪರಿಣಾಮ ಕಳೆದ ಲೋಕಸಭಾ ಚುನಾವಣೆಯಲ್ಲಿ 400ರ ಗಡಿ ದಾಟಲು ಹೋದವರು 240ರಲ್ಲಿಯೇ ಮುಗ್ಗರಿಸಿದ್ದಾರೆ.  56 ಇಂಚಿನ ಎದೆಗೆ ಇದೀಗ ನಾರ್ಮಲ್ ಸೈಜ್ ಬಟ್ಟೆಗಳು ಹಿಡಿಸುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ.

ವಿಡಿಯೋ ಇಲ್ಲಿ ನೋಡಿ:
 

Latest Videos
Follow Us:
Download App:
  • android
  • ios