ದಾವಣಗೆರೆ ವ್ಯಕ್ತಿ ಜೊತೆ ಪಾಕ್ ಮಹಿಳೆ ವಿವಾಹ ತನಿಖೆಯಲ್ಲಿ ಬೆಳಕಿಗೆ! ಬೆಂಗಳೂರಿಗೆ ನುಸುಳಿದ್ದಾರಾ ಪಾಕಿಸ್ತಾನಿಗಳು?
ಚೆನ್ನೈನಲ್ಲಿ ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿರುವ ಪಾಕಿಸ್ತಾನಿ ಮಹಿಳೆಯು ದಾವಣಗೆರೆಯ ವ್ಯಕ್ತಿಯನ್ನು ಮದುವೆ ಆಗಿರುವುದು ಬೆಳಕಿಗೆ ಬಂದಿದೆ.
ದಾವಣಗೆರೆ (ಅ.3): ಚೆನ್ನೈನಲ್ಲಿ ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿರುವ ಪಾಕಿಸ್ತಾನಿ ಮಹಿಳೆಯು ದಾವಣಗೆರೆಯ ವ್ಯಕ್ತಿಯನ್ನು ಮದುವೆ ಆಗಿರುವುದು ಬೆಳಕಿಗೆ ಬಂದಿದೆ.
ಪಾಕ್ ಮೂಲದ ಫಾತಿಮಾ ದಾವಣಗೆರೆಯ ಅಲ್ತಾಫ್ ಎಂಬಾತನನ್ನು ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ವಿವಾಹ ಆಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ನಗರದ ಶಿವಕುಮಾರ ಸ್ವಾಮಿ ಬಡಾವಣೆ 1ನೇ ಹಂತದ 2ನೇ ಮುಖ್ಯ ರಸ್ತೆ 8ನೇ ಕ್ರಾಸ್ ನಿವಾಸಿ, ಆರೋಗ್ಯ ಇಲಾಖೆ ನಿವೃತ್ತ ನೌಕರ ಖಲಂದರ್ ಎಂಬವರ ಮೊದಲ ಮಗ ಅಲ್ತಾಫ್‌ನನ್ನು ಫಾತಿಮಾ ಮದುವೆಯಾಗಿದ್ದಾಳೆ.
ಲವ್ ಜಿಹಾದ್ ದೇಶದ ಏಕತೆಗೆ, ಸಮಗ್ರತೆಗೆ ಅಪಾಯ: ಕೋರ್ಟ್
ಖಲಂದರ್ ನಿವೃತ್ತಿ ನಂತರ ಬೆಂಗಳೂರಿಗೆ ಕುಟುಂಬ ಸಮೇತ ಶಿಫ್ಟ್ ಆಗಿದ್ದರು. ಅಲ್ಲಿಯೇ ಅಲ್ತಾಫ್ ಮತ್ತು ಫಾತಿಮಾ ನಿಖಾ (ಮದುವೆ) ನಡೆದಿತ್ತು. ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆಯ ಮನೆಯನ್ನು ಖಲಂದರ್ ಬಾಡಿಗೆ ನೀಡಿದ್ದಾರೆ. ಅಲ್ತಾಫ್‌ನನ್ನು ವಿವಾಹವಾಗಿದ್ದ ಫಾತಿಮಾ ಆಗಾಗ ದಾವಣಗೆರೆಗೆ ಬಂದು, ಹೋಗುತ್ತಿದ್ದಳು. ಕಳೆದ ವರ್ಷ ಖಲಂದರ್ ಪತ್ನಿ ಮೃತಪಟ್ಟಿದ್ದಾಗ ಕೂಡ ಫಾತಿಮಾ ದಾವಣಗೆರೆಗೆ ಬಂದಿದ್ದಳು ಎನ್ನಲಾಗಿದೆ.
ಅಕ್ರಮ ನುಸುಳುವಿಕೆ ಹೆಚ್ಚಳ?
ಇತ್ತೀಚೆಗೆ ಅಸ್ಸಾಂನ ಗುವಾಹಟಿಯಲ್ಲಿ ಐದು ಕಡೆ IED ಬಾಂಬ್ ಇಟ್ಟು ಬೆಂಗಳೂರಿಗೆ ಬಂದು ನೆಲೆಸಿದ್ದ ಶಂಕಿತ ಉಲ್ಫಾ ಉಗ್ರನ ಬಂಧನದ ಬಳಿಕ ಮತ್ತೋರ್ವ ಪಾಕಿಸ್ತಾನಿ ಸೇರಿದಂತೆ ನಾಲ್ವರು ವಿದೇಶಿ ಪ್ರಜೆಗಳನ್ನ ಜಿಗಣಿ ಪೊಲೀಸರು ಬಂಧಿಸಿದ್ದರು.
ಉಲ್ಫಾ ಉಗ್ರ ಬಂಧನ ಬೆನ್ನಲ್ಲೇ ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಪ್ರಜೆ ಬಂಧನ!
ಜಿಗಣಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬ ಸಮೇತ ವಾಸವಿದ್ದ ಕುಟುಂಬ. ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸಿದ್ದರೂ ಯಾರಿಗೂ ಗೊತ್ತೇ ಆಗಿಲ್ಲ ಎಂಬುದು ಅಚ್ಚರಿ ಮೂಡಿಸಿದೆ. ಪಾಕಿಸ್ತಾನಿ, ಬಾಂಗ್ಲಾದೇಶ ಮೂಲದ ಪ್ರಜೆಗಳು ಅಕ್ರಮವಾಗಿ ನುಸುಳಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ರಾತ್ರಿ ಕಾರ್ಯಾಚರಣೆ ನಡೆಸಿದ ಜಿಗಣಿ ಪೊಲೀಸರು. ಈ ವೇಳೆ ಪಾಕಿಸ್ತಾನಿ, ಬಾಂಗ್ಲಾದೇಶ ಮೂಲದ ಪ್ರಜೆಗಳನ್ನ ಬಂಧಿಸಿದ್ದಾರೆ. ಇದೀಗ ದಾವಣಗೆರೆಯಲ್ಲೂ ಪಾಕಿಸ್ತಾನ ಮೂಲದ ಮಹಿಳೆಯನ್ನ ಮದುವೆಯಾಗಿರುವ ಬಗ್ಗೆ ಬೆಳಕಿಗೆ ಬಂದಿರುವುದು ಸ್ಥಳೀಯರನ್ನೇ ಬೆಚ್ಚಿಬಿಳಿಸಿದೆ.