Asianet Suvarna News Asianet Suvarna News

ಹಿಂದೂ ಧಾರ್ಮಿಕ ಸ್ಥಳ ಅಂತರಗಂಗೆ ಬೆಟ್ಟದಲ್ಲಿ ಪಾಕಿಸ್ಥಾನ ಬಾವುಟ ಬಿಡಿಸಿದ ಪಾಪಿಗಳು

ಹಿಂದೂ ಧಾರ್ಮಿಕ ಸ್ಥಳವಾದ ಐತಿಹಾಸಿಕ ಅಂತರಗಂಗೆ ಬೆಟ್ಟದ ಬೃಹತ್‌ ಬಂಡೆಯ ಮೇಲೆ ಯಾರೋ ಕಿಡಿಗೇಡಿಗಳು ಪಾಕಿಸ್ಥಾನ ಧ್ವಜದ ಚಿತ್ರವನ್ನು ಬಿಡಿಸಿದ್ದಾರೆ.

Pakistan flag on Hindu religious site Kolar district Antharagange Hills sat
Author
First Published Sep 19, 2023, 3:07 PM IST

ಕೋಲಾರ (ಸೆ.19): ಕೋಲಾರ ಜಿಲ್ಲೆಯ ಅಂತರಗಂಗೆ ಬೆಟ್ಟದಲ್ಲಿ ವಿವಾದಾತ್ಮಕ ಘಟನೆ ನಡೆದಿದೆ. ಹಿಂದೂ ಧಾರ್ಮಿಕ ಸ್ಥಳವಾದ ಐತಿಹಾಸಿಕ ಅಂತರಗಂಗೆ ಬೆಟ್ಟದ ಬೃಹತ್‌ ಬಂಡೆಯ ಮೇಲೆ ಯಾರೋ ಕಿಡಿಗೇಡಿಗಳು ಪಾಕಿಸ್ಥಾನ ಧ್ವಜದ ಚಿತ್ರವನ್ನು ಬಿಡಿಸಿದ್ದಾರೆ. ಅದರ ಮೇಲೆ 786 ಎಂಬ ಸಂಖ್ಯೆಯ ಜೊತೆಗೆ ಉರ್ದು ಬರಗಳನ್ನು ಬರೆದು ವಿಕೃತಿ ಮೆರೆದಿದ್ದಾರೆ.

ಹೌದು, ಹಿಂದೂಗಳ ಪವಿತ್ರ ಸ್ಥಳವೆಂದೇ ಹೇಳಲಾಗುವ ಕೋಲಾರ ಜಿಲ್ಲೆಯ ಅಂತರಗಂಗೆ ಬೆಟ್ಟದಲ್ಲಿ ಈಗ ಧಾರ್ಮಿಕ ವಿಕೃತಿಯನ್ನು ಮೆರೆಯಲಾಗಿದೆ. ಅಂತರಗಂಗೆ ಬೆಟ್ಟದಲ್ಲಿ ಶ್ರೀ ವಿಶ್ವನಾಥಸ್ವಾಮಿಯ ದೇವಸ್ಥಾನವಿದೆ. ಇಲ್ಲಿರುವ ನಂದಿ ವಿಗ್ರಹದ ಬಾಯಲ್ಲಿ ಬೇಸಿಗೆಯಲ್ಲೂ ನೀರು ಬರುವ ಪುಣ್ಯ ಕ್ಷೇತ್ರವಾಗಿದೆ. ಈ ದೇವಸ್ಥಾನದ ಸ್ಥಳ ಅರಣ್ಯ ಇಲಾಖೆ ವ್ಯಾಪ್ತಿಗೊಳಪಟ್ಟಿದ್ದು, ದೇವಾಲಯವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಆದರೆ, ಇಲ್ಲಿ ಕೆಲವು ಕಿಡಿಗೇಡಿಗಳು ಬಂದು ಬೃಹತ್‌ ಬಂಡೆಯ ಮೇಲೆ ಮುಸ್ಲಿಂಮರ ಹಾಗೂ ಭಾರತದ ವಿರೋಧಿ ದೇಶವಾದ ಪಾಕಿಸ್ತಾನದ ಧ್ವಜವನ್ನು ಹೋಲುವ ಬಾವುಟದ ಚಿತ್ರವನ್ನು ಬಿಡಿಸಿದ್ದಾರೆ.

ಕರ್ನಾಟಕ ಜನತೆಗೆ ಮತ್ತೊಂದು ದರ ಏರಿಕೆ ಶಾಕ್‌: ಆಸ್ತಿ ನೋಂದಣಿ ಮಾರ್ಗಸೂಚಿ ದರ ಶೇ.30 ಹೆಚ್ಚಳ!

ಇನ್ನು ಬೃಹತ್‌ ಬಂಡೆಯ ಮೇಲೆ ಹಸಿರು ಬಣ್ಣ ಹಾಗೂ ಬಿಳಿ ಬಣ್ಣವನ್ನು ಬಳಸಿ ಪಾಕಿಸ್ತಾನ ಧ್ವಜ ಬಿಡಿಸಲಾಗಿದ್ದು, ಅದರ ಮೇಲೆ 786 ಎಂದು ಸಂಖ್ಯೆಯನ್ನು ಬರೆದಿದ್ದಾರೆ. ಜೊತೆಗೆ, ಕೆಲವು ಉರ್ದು ಪದಗಳನ್ನು ಕೂಡ ಬರೆದಿದ್ದಾರೆ. ಇನ್ನು ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಬಂಡೆಯ ಧ್ವಜದ ಚಿತ್ರದಬಳಿ ಬರೆದ ಉರ್ದು ಬರಹದ ಅರ್ಥ ಏನೆಂಬುದನ್ನು ತಿಳಿದುಕೊಳ್ಳಲು ಮುಂದಾಗಿದ್ದಾರೆ. ನಂತರ, ಧಾರ್ಮಿಕ ಕಿಚ್ಚು ಹೊತ್ತಿಸುವಂತಹ ಹಾಗೂ ಪರಿಸರದಲ್ಲಿ ವಿಕೃತಿ ಮೆರೆದ ಕಿಡಿಗೇಡಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

Follow Us:
Download App:
  • android
  • ios