ಕರ್ನಾಟಕ ಜನತೆಗೆ ಮತ್ತೊಂದು ದರ ಏರಿಕೆ ಶಾಕ್: ಆಸ್ತಿ ನೋಂದಣಿ ಮಾರ್ಗಸೂಚಿ ದರ ಶೇ.30 ಹೆಚ್ಚಳ!
ರಾಜ್ಯದಲ್ಲಿ ಕಂದಾಯ ನಿಯಮಾವಳಿ ಪ್ರಕಾರ ಅಕ್ಟೋಬರ್ 1ರಿಂದ ಆಸ್ತಿ ನೊಂದಣಿ ಮಾರ್ಗಸೂಚಿ ದರ ಹೆಚ್ಚಳ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಬೆಂಗಳೂರು (ಸೆ.19): ರಾಜ್ಯದ ಕಂದಾಯ ಇಲಾಖೆಯ ನಿಯಮಾವಳಿ ಪ್ರಕಾರ ಪ್ರತಿವರ್ಷ ಆಸ್ತಿ ನೊಂದಣಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಬೇಕು ಅಂತ ನಿಯಮ ಇದೆ. ಅದಕ್ಕಾಗಿ ನಾವು ಅಕ್ಟೋಬರ್ 1ರಿಂದ ಆಸ್ತಿ ನೊಂದಣಿ ಮಾರ್ಗಸೂಚಿ ದರ ಹೆಚ್ಚಳ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಆಸ್ತಿ ನೊಂದಣಿ ಮಾರ್ಗಸೂಚಿ ದರ ಏರಿಕೆ ಮಾಡುವ ಬಗ್ಗೆ ಈಗಾಗಲೇ ಚರ್ಚೆ ಮಾಡಿ ತೀರ್ಮಾನ ಮಾಡಲಾಗಿದೆ. ಪ್ರತಿವರ್ಷ ಆಸ್ತಿ ನೊಂದಣಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಬೇಕೆಂಬ ನಿಯಮವಿದೆ. ಆದರೆ, ಹಲವು ವರ್ಷಗಳಿಂದ ದರ ಏರಿಕೆ ಮಾಡಿರಲಿಲ್ಲ. ಅದಕ್ಕಾಗಿ ನಾವು ಆಸ್ತಿ ನೊಂದಣಿ ಮಾರ್ಗಸೂಚಿ ದರ ಹೆಚ್ಚಳ ಮಾಡಿದ್ದು, ಅಕ್ಟೋಬರ್ 1ರಿಂದ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದರು.
ಅಭಿನವ ಹಾಲಶ್ರೀ ಸ್ವಾಮೀಜಿ ರೋಚಕ ಟ್ರಾವೆಲ್ ಹಿಸ್ಟರಿ: 4 ಹೊಸ ಮೊಬೈಲ್, 4 ಸಿಮ್ ಕಾರ್ಡ್, 50 ಲಕ್ಷ ರೂ. ಸಮೇತ ಪರಾರಿ
ಇನ್ನು ರಾಜ್ಯದಲ್ಲಿ ಎಲ್ಲಾ ಕಡೆ ಮಾರ್ಗಸೂಚಿ ದರ ಏರಿಕೆ ಆಗಲ್ಲ. ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳ ಇದ್ದರೆ, ಅಂತಹ ಪ್ರದೇಶಗಳಲ್ಲಿ ದರ ಹೆಚ್ಚಳವಾಗುವುದಿಲ್ಲ. ಆದರೆ ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರವಿರುವ ಪ್ರದೇಶಗಳಲ್ಲಿ ಆಸ್ತಿ ನೋಂದಣಿ ದರ ಖಂಡಿತ ಹೆಚ್ಚಳ ಆಗಲಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾದು ಹೋಗಿರುವ ಪ್ರದೇಶಗಳಲ್ಲಿ, ವಿಮಾನನಿಲ್ದಾಣಗಳು ನಿರ್ಮಾಣವಾದ ಪ್ರದೇಶಗಳಲ್ಲಿ ಹಾಗೂ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಐಟಿ ಬಿಟಿ ಕಂಪನಿಗಳು ಸ್ಥಾಪನೆಯಾಗುತ್ತಿರುವ ಪ್ರದೇಶಗಳಲ್ಲಿ ಮಾರ್ಗಸೂಚಿ ದರ ಕಡಿಮೆ ಇದೆ. ಇಂತಹ ಕಡೆ ಮಾರ್ಗಸೂಚಿ ದರ ಹೆಚ್ಚಳ ಆಗಲಿದೆ ಎಂದು ಮಾಹಿತಿ ನೀಡಿದರು.
ವಾರ್ಷಿಕ 2000 ಕೋಟಿ ರೂ. ಆದಾಯ ನಿರೀಕ್ಷೆ: ಪ್ರಸ್ತುತವಾಗಿ ರಾಜ್ಯದಲ್ಲಿ ಸರಾಸರಿ ಶೇಕಡಾ 30 ಪರ್ಸೆಂಟ್ ಮಾರ್ಗಸೂಚಿ ದರ ಏರಿಕೆ ಆಗಲಿದೆ. ಈ ಬಗ್ಗೆ ಆಕ್ಷೇಪ ಇದ್ದರೆ ಸಲ್ಲಿಸಲು ಅವಕಾಶ ಇದೆ. ಆಕ್ಷೇಪ ಗಮನಿಸಿ ಅಧಿಸೂಚನೆ ನಂತರ ಪ್ರಕಟ ಆಗಲಿದೆ. ಇನ್ನು ರಾಜ್ಯದಲ್ಲಿ ಮಾರ್ಗಸೂಚಿ ದರ ಏರಿಕೆಯಾದರೆ ವರ್ಷಕ್ಕೆ 2000 ಕೋಟಿ ರೂ ಆದಾಯ ಬರಲಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲ ಆಗಲಿದೆ. ಹೊಸದನ್ನು ಮಾಡಿದಾಗ ಪರ ವಿರೋಧ ವ್ಯಕ್ತವಾಗಬಹುದು. ಅದನ್ನು ನಾವು ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ಸಚಿವ ಕೃಷ್ಣ ಬೈರೆಗೌಡ ಹೇಳಿದರು.
ಚೈತ್ರಾ ಕುಂದಾಪುರ ಗ್ಯಾಂಗ್‌ನ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಓರಿಸ್ಸಾದಲ್ಲಿ ಬಂಧನ
ಪರ ವಿರೋಧ ಇದ್ದೇ ಇರುತ್ತದೆ, 2 ತಿಂಗಳ ಬಳಿಕ ಸರಿ ಹೋಗುತ್ತದೆ: ರಾಜ್ಯದಲ್ಲಿ ಮಾರ್ಗಸೂಚಿ ದರ ಏರಿಕೆಯಿಂದ ಒಂದಷ್ಟು ವ್ಯತ್ಯಾಸ ಆಗಬಹುದು. ಆದರೆ ಅದು 2 ತಿಂಗಳ ಬಳಿಕ ಸರಿ ಆಗಲಿದೆ. ಆಸ್ತಿ ಮಾರಾಟದ ವೇಳೆ ಬ್ಲ್ಯಾಕ್ ಮನಿ ಬಳಕೆ ಆಗುತ್ತಿದೆ. ಅದಕ್ಕೆ ಅವಕಾಶ ಕೊಡಬಾರದು ಎಂಬುದು ನಮ್ಮ ತೀರ್ಮಾನವಾಗಿದೆ. ಹೊಸದು ಮಾಡಿದಾಗ ಪರ- ವಿರೋಧ ಇರಲಿದೆ. ಆದರೆ ಮಾರ್ಗಸೂಚಿ ದರ ಪ್ರತಿವರ್ಷ ಏರಿಕೆ ಮಾಡಬೇಕು ಅಂತ ಕಾಯಿದೆಯಲ್ಲಿ ಇದೆ. ಕಳೆದ 5 ವರ್ಷದಿಂದ ಮಾರ್ಗಸೂಚಿ ದರ ಏರಿಕೆ ಆಗಿರಲಿಲ್ಲ. ಅದಕ್ಕೆ ನಾವು ಈಗ ಮಾಡ್ತಾ ಇದ್ದೇವೆ ಎಂದು ತಿಳಿಸಿದರು.