ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಯೋಧರ ಬಲಿದಾನದ ವಿಚಾರಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ ನಡೆದ ಜನಾಕ್ರೋಶ ಯಾತ್ರೆಯಲ್ಲಿ ಮಾಜಿ ಸಚಿವ ರಾಜುಗೌಡ ತೀವ್ರವಾಗಿ ಕಿಡಿಕಾರಿದ್ದಾರೆ. ಉಗ್ರರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಒತ್ತಾಯಿಸಿದ ಅವರು, 'ದುಷ್ಟ ಉಗ್ರರನ್ನು ಮನೆಗೆ ನುಗ್ಗಿ ಹೊಡೆಯಬೇಕು' ಎಂದು ಆಗ್ರಹಿಸಿದರು.

ಯಾದಗಿರಿ (ಏ.23): ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಯೋಧರ ಬಲಿದಾನದ ವಿಚಾರಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ ನಡೆದ ಜನಾಕ್ರೋಶ ಯಾತ್ರೆಯಲ್ಲಿ ಮಾಜಿ ಸಚಿವ ರಾಜುಗೌಡ ತೀವ್ರವಾಗಿ ಕಿಡಿಕಾರಿದ್ದಾರೆ. ಉಗ್ರರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಒತ್ತಾಯಿಸಿದ ಅವರು, 'ದುಷ್ಟ ಉಗ್ರರನ್ನು ಮನೆಗೆ ನುಗ್ಗಿ ಹೊಡೆಯಬೇಕು' ಎಂದು ಆಗ್ರಹಿಸಿದರು.

ಇಲ್ಲಿನವರು ಉಗ್ರರಿಗಿಂತ ಡೇಂಜರ್:
ನಮ್ಮ ದೇಶದ ಅನ್ನ ತಿಂದು, ಉಗ್ರರಿಗೆ ಸಪೋರ್ಟ್ ಮಾಡುವವರು ಉಗ್ರರಿಗಿಂತಲೂ ಡೇಂಜರ್. ಇಂತಹವರಿಗೆ ಜನರೇ ಚಪ್ಪಲಿಯಿಂದ ಹೊಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ರಾಜೂಗೌಡ ಅವರು, ಔರಂಗಜೇಬನನ್ನು ಸೋಲಿಸಿದ ಸುರಪುರ ನಮ್ಮ ನಾಡು. ನಾವು ಇತಿಹಾಸದಲ್ಲಿ ದೊಡ್ಡ ಶಕ್ತಿಯಾಗಿದ್ದೇವೆ. ಇಂತಹ ದಾಳಿಗಳಿಗೆ ಭಯಪಡುವವರಲ್ಲ' ಎಂದು ಎಂದರು.

ಇದನ್ನೂ ಓದಿ: 'ಭಯೋತ್ಪಾದನೆಗೆ ಧರ್ಮ ಇಲ್ಲ' ಎಂದವರಿಗೆ ಚಪ್ಪಲಿಯಲ್ಲಿ ಹೊಡಿಬೇಕು: ಮುತಾಲಿಕ್ ಆಕ್ರೋಶ

ಮೋದಿ ಸರ್ಕಾರಕ್ಕೆ ಬಹುಮತ ಬಂದಿದ್ದರೆ..;
ಬಿಜೆಪಿಗೆ 400 ಸೀಟ್‌ಗಳನ್ನು ಗೆಲ್ಲಿಸಿದ್ದರೆ, ಮೋದಿ ಸರ್ಕಾರಕ್ಕೆ ಬಹುಮತ ಬಂದಿದ್ದರೆ, ಪಾಕಿಸ್ತಾನದವರು ಈ ಕಡೆ ತಿರುಗಿ ನೋಡುತ್ತಿರಲಿಲ್ಲ. ಆದರೆ, ಚುನಾವಣೆಯ ಸಂದರ್ಭದಲ್ಲಿ ನಮ್ಮ ಒಳಜಗಳ, ವೈಯಕ್ತಿಕ ಸ್ವಾರ್ಥಗಳಿಂದ ಹಿಂದುತ್ವವನ್ನೇ ಬಲಿಕೊಡುತ್ತೇವೆ. ಇದಕ್ಕೆ ನಾವೂ ಕಾರಣಿಭೂತರಾಗಿದ್ದೇವೆ ಎಂದು ಜನರನ್ನು ಒಗ್ಗಟ್ಟಿನಿಂದ ಇರಲು ಕರೆ ನೀಡಿದರು.

ಇದನ್ನೂ ಓದಿ: 'ಭಾರತಕ್ಕೆ ಈಗ ಒಳ್ಳೇಯ ಟೈಮ್ ಬಂದಿದೆ..' ಪಹಲ್ಗಾಮ್ ಉಗ್ರ ದಾಳಿ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

ಯಾದಗಿರಿಯ ಜನಾಕ್ರೋಶ ಯಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದು, ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ, ಭಾರತ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು. 'ಅಮಿತ್ ಶಾ ಸಾಹೇಬ್, ಉಗ್ರರನ್ನು ಯಾವುದೇ ಕಾರಣಕ್ಕೂ ಬಿಡಬಾರದು' ಎಂದು ರಾಜುಗೌಡರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.