ಬೆಂಗಳೂರು(ಮೇ.30): ಪಾದರಾಯನಪುರದ ವಾರ್ಡ್‌ನ ಜೆಡಿಎಸ್‌ ಪಕ್ಷದ ಬಿಬಿಎಂಪಿ ಸದಸ್ಯ ಇಮ್ರಾನ್‌ ಪಾಷಾಗೆ ಶುಕ್ರವಾರ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಮಾರಕ ರೋಗದ ಸೋಂಕಿಗೆ ತುತ್ತಾದ ರಾಜ್ಯದ ಮೊದಲ ಜನಪ್ರತಿನಿಧಿ ಆಗಿದ್ದಾರೆ. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾಷಾ ಸಂಪರ್ಕದಲ್ಲಿದ್ದ ಅವರ ಪತ್ನಿ, ಇಬ್ಬರು ಮಕ್ಕಳು, ಕಾರು ಚಾಲಕ, ಮನೆ ಕೆಲಸದ ಸಿಬ್ಬಂದಿ, ಬೆಂಬಲಿಗರು ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಪಾದರಾಯನಪುರವನ್ನು ಸೀಲ್‌ಡೌನ್‌ ಮಾಡಿದ ಬಳಿಕವೂ ಪಾಷಾ ವಾರ್ಡ್‌ನ ಸೋಂಕಿತ ಪ್ರದೇಶದಲ್ಲಿ ಓಡಾಟ ನಡೆಸಿದ್ದರು. ಹೀಗಾಗಿ, ಸೋಂಕು ತಗುಲಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಈ ಕೊರೋನಾ ಗಲಾಟೆಯಲ್ಲಿ ಜಮೀರ್‌ಗೆ ಬೇಕಿತ್ತಾ ಪಾದಪೂಜೆ

64 ಪ್ರಕರಣಗಳು ಪತ್ತೆ:

ಪಾದರಾಯನಪುರದಲ್ಲಿ ಈವರೆಗೆ ಒಟ್ಟು 64 ಕೊರೋನಾ ಪ್ರಕರಣ ಕಾಣಿಸಿಕೊಂಡಿದ್ದು, ಇನ್ನು 24 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರು ಕ್ವಾರಂಟೈನ್‌ನಲ್ಲಿದ್ದಾರೆ. ಈ ಪ್ರದೇಶದಲ್ಲಿ ಸಮುದಾಯಕ್ಕೆ ಸೋಂಕು ಹರಡಿರುವ ಭೀತಿ ಹಿನ್ನೆಲೆಯಲ್ಲಿ ರಾರ‍ಯಂಡಮ್‌ ಟೆಸ್ಟ್‌ ನಡೆಸಲಾಗುತ್ತಿದೆ.

ಪಾಲಿಕೆ ಅಧಿಕಾರಿಗಳಿಗೂ ಭೀತಿ

ಪಾದರಾಯನಪುರ ವಾರ್ಡ್‌ನಲ್ಲಿ ಕೊರೋನಾ ಸೋಂಕು ನಿಯಂತ್ರಣ ಮಾಡುವ ಕುರಿತು ಬಿಬಿಎಂಪಿ ಪಶ್ಚಿಮ ವಲಯದ ವಿಶೇಷ ಆಯುಕ್ತರು, ಜಂಟಿ ಆಯುಕ್ತರು, ಆರೋಗ್ಯ ಅಧಿಕಾರಿಗಳು ಪೊಲೀಸ್‌ ಅಧಿಕಾರಿ ಸಿಬ್ಬಂದಿ ಸಭೆ ಮಾಡಿದ್ದರು. ಈ ಸಭೆಗೆ ಇಮ್ರಾನ್‌ ಪಾಷಾ ಸಹ ಭಾಗಿಯಾಗಿದ್ದರು. ಕಳೆದೊಂದು ವಾರದಲ್ಲಿ ಇಮ್ರಾನ್‌ ಪಾಷಾ ಮೂರು ಬಾರಿ ಬಿಬಿಎಂಪಿ ಕೇಂದ್ರ ಕಚೇರಿಗೂ ಭೇಟಿ ನೀಡಿದ್ದು, ಅಧಿಕಾರಿಗಳಿಗೂ ಇದೀಗ ಭೀತಿ ಆರಂಭವಾಗಿದೆ.

ಪಾದರಾಯನ ಪುಂಡರಿಗೆ ರೆಡ್ ಕಾರ್ಪೆಟ್ ಹಾಸಿದ ಜಮೀರ್‌ಗೆ ಉಗಿದ ರೇಣುಕಾಚಾರ್ಯ

ರಾಜ್ಯದ ಮೊದಲ ಜನಪ್ರತಿನಿಧಿ

ಈ ಹಿಂದೆ ನಗರದ ಖಾಸಗಿ ಸುದ್ದಿ ವಾಹಿನಿಯ ಕ್ಯಾಮರಾ ಮ್ಯಾನ್‌ಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಾಗ ಆತನೊಂದಿಗೆ ಸಂಪರ್ಕದಲ್ಲಿದ್ದ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ್‌, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಸಚಿವ ಡಾ. ಸುಧಾಕರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ ಸೇರಿದಂತೆ ಹಲವು ಸಚಿವರು ತಕ್ಷಣ ಕೊರೋನಾ ಸೋಂಕು ಪರೀಕ್ಷೆಗೆ ಒಳಗಾಗಿದ್ದರು. ಅಲ್ಲದೇ 14 ದಿನ ಕ್ವಾರಂಟೈನ್‌ನಲ್ಲಿ ಇದ್ದರು. ಆದರೆ, ಯಾರಿಗೂ ಸೋಂಕು ಕಾಣಿಸಿಕೊಂಡಿರಲ್ಲಿಲ್ಲ.