Asianet Suvarna News Asianet Suvarna News

Dinesh gundu rao: ಆಕ್ಸಿಜನ್‌ ದುರಂತ ಮರುತನಿಖೆ: ರಾಜ್ಯ ಸರ್ಕಾರದಿಂದ ತಯಾರಿ

ಕೋವಿಡ್‌ ಸಂದರ್ಭ ಚಾಮರಾಜನಗರದಲ್ಲಿ ಆಕ್ಸಿಜನ್‌ ಅಭಾವದಿಂದ 36 ಮಂದಿ ಮೃತಪಟ್ಟಿದ್ದ ದುರಂತದ ಬಗ್ಗೆ ತನಿಖೆ ನಡೆಸಲು ನಿರ್ಧರಿಸಿದ್ದು, ಈ ಬಗ್ಗೆ ಅಡ್ವೋಕೇಟ್‌ ಜನರಲ್‌ ಅವರ ಸಲಹೆ ಪಡೆದು ಯಾವ ರೀತಿಯ ತನಿಖೆಗೆ ವಹಿಸಬೇಕು ಎಂದು ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Oxygen Disaster Re-Investigation by state government says health minister dinesh gundu rao at bengaluru rav
Author
First Published Aug 22, 2023, 4:41 AM IST

ಬೆಂಗಳೂರು (ಆ.22) :  ಕೋವಿಡ್‌ ಸಂದರ್ಭ ಚಾಮರಾಜನಗರದಲ್ಲಿ ಆಕ್ಸಿಜನ್‌ ಅಭಾವದಿಂದ 36 ಮಂದಿ ಮೃತಪಟ್ಟಿದ್ದ ದುರಂತದ ಬಗ್ಗೆ ತನಿಖೆ ನಡೆಸಲು ನಿರ್ಧರಿಸಿದ್ದು, ಈ ಬಗ್ಗೆ ಅಡ್ವೋಕೇಟ್‌ ಜನರಲ್‌ ಅವರ ಸಲಹೆ ಪಡೆದು ಯಾವ ರೀತಿಯ ತನಿಖೆಗೆ ವಹಿಸಬೇಕು ಎಂದು ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಆಕ್ಸಿಜನ್‌ ದುರಂತದ ಬಗ್ಗೆ ತನಿಖೆಗೆ ವಹಿಸಲು ಈ ಹಿಂದೆಯೇ ಚರ್ಚೆ ನಡೆಸಲಾಗಿತ್ತು. ಆದರೆ ಯಾವ ರೀತಿಯ ತನಿಖೆಗೆ ವಹಿಸಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಸದ್ಯದಲ್ಲೇ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ಶೆಟ್ಟಿ(Advocate General Sasikiranshetty)ಅವರ ಅಭಿಪ್ರಾಯ ಪಡೆದು ಸೂಕ್ತ ತನಿಖೆಗೆ ವಹಿಸುತ್ತೇವೆ ಎಂದು ತಿಳಿಸಿದರು.

 

ಚಾಮರಾಜನಗರ ಆಕ್ಸಿಜನ್ ದುರಂತ ಮರು ತನಿಖೆಗೆ ಚಾರ್ಚ್ ಫ್ರೇಮ್ ರೆಡಿಯಾಗಿದೆ: ಸಚಿವ ದಿನೇಶ್ ಗುಂಡೂರಾವ್

2021ರ ಮೇ 2 ರಂದು ಚಾಮರಾಜನಗರ(Chamarajanagar) ಜಿಲ್ಲೆಯ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ 36 ಮಂದಿ ಮೃತಪಟ್ಟಿದ್ದರು. ಕೊರೋನಾ(Corona) ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಆಸ್ಪತ್ರೆ ಸೇರಿದ್ದ ಅವರು ಐಸಿಯುನಲ್ಲಿ ಆಕ್ಸಿಜನ್‌ ಪೂರೈಕೆಯಿಲ್ಲದೆ ಮೃತಪಟ್ಟಿದ್ದು ದೇಶಾದ್ಯಂತ ತೀವ್ರ ಆತಂಕ ಸೃಷ್ಟಿಸಿತ್ತು. ಆದರೆ ದುರಂತದಲ್ಲಿ ಮೂವರು ಮಾತ್ರ ಆಕ್ಸಿಜನ್‌ ಕೊರತೆಯಿಂದ ಮೃತಪಟ್ಟಿರುವುದಾಗಿ ಅಂದಿನ ಸರ್ಕಾರ ಸಮರ್ಥಿಸಿಕೊಳ್ಳಲು ಯತ್ನಿಸಿತ್ತು. ಬಳಿಕ 24 ಮಂದಿ ಮೃತಪಟ್ಟಿರುವುದಾಗಿ ಹೇಳಿತ್ತು. ಆದರೆ ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ತನಿಖೆ ನಡೆದಾಗ 36 ಮಂದಿ ಸಾವನ್ನಪ್ಪಿರುವುದು ಸಾಬೀತಾಗಿತ್ತು. ಈ ವೇಳೆ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್‌ ನಾಯಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬಗಳನ್ನು ಭೇಟಿ ಮಾಡಿ ತಲಾ 1 ಲಕ್ಷ ರು. ಪರಿಹಾರ ನೀಡಿದ್ದರು. ಅಲ್ಲದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದರು.

Follow Us:
Download App:
  • android
  • ios