ಚಾಮರಾಜನಗರ ಆಕ್ಸಿಜನ್ ದುರಂತ ಮರು ತನಿಖೆಗೆ ಚಾರ್ಚ್ ಫ್ರೇಮ್ ರೆಡಿಯಾಗಿದೆ: ಸಚಿವ ದಿನೇಶ್ ಗುಂಡೂರಾವ್

ಚಾಮರಾಜನಗರ ಆಕ್ಸಿಜನ್ ದುರಂತ ಮರು ತನಿಖೆಗೆ ಒಪ್ಪಿಗೆ ಕೊಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಯಾವ ಅಂಶಗಳ ಆಧಾರದ ಮೇಲೆ ಮರು ತನಿಖೆಯಾಗಬೇಕು ಎಂಬ ಚಾರ್ಚ್ ಫ್ರೇಮ್ ರೆಡಿಯಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. 

Chamarajanagar Oxygen tragedy Re-Investigation soon Health Minister Dinesh Gundu Rao kannada news gow

ಮೈಸೂರು (ಜೂ.27): ಚಾಮರಾಜನಗರ ಆಕ್ಸಿಜನ್ ದುರಂತ ಮರು ತನಿಖೆಗೆ ಒಪ್ಪಿಗೆ ಕೊಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಯಾವ ಅಂಶಗಳ ಆಧಾರದ ಮೇಲೆ ಮರು ತನಿಖೆಯಾಗಬೇಕು ಎಂಬ ಚಾರ್ಚ್ ಫ್ರೇಮ್ ಮಾಡಿ ಕೊಡಿ ಎಂದು ಸರ್ಕಾರದಿಂದ ಮತ್ತೆ ಪತ್ರ ಬಂದಿದೆ. ಈಗ ನಾವು ತನಿಖೆಯಾಗಬೇಕಿರುವ ಚಾರ್ಚ್ ಫ್ರೇಮ್ ಅನ್ನ ಸಿದ್ಧ ಮಾಡುತ್ತಿದ್ದೇವೆ. ಚಾರ್ಚ್ ಫ್ರೇಮ್ ಪ್ರತಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಕಳುಹಿಸುತ್ತೇವೆ‌. ಸರ್ಕಾರ ನಂತರ ತೀರ್ಮಾನ ಕೈಗೊಳ್ಳುತ್ತದೆ. ಕಾಲ ಮೀತಿಯ ಒಳಗಡೆ ಈ ಬಗ್ಗೆ ಮರು ತನಿಖೆಯಾಗಬೇಕೆಂಬುದು ನಮ್ಮ ಉದ್ದೇಶ ಎಂದು ಮೈಸೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.

ಕೇಸ್ ಬೈ ಕೇಸ್ ಮಾಹಿತಿ ಪಡೆದು ಬಿಜೆಪಿ ವಿರುದ್ಧ ತನಿಖೆಗೆ ಸರ್ಕಾರ ನಿರ್ಧಾರ: ಕೃಷ್ಣ ಬೈರೇಗೌಡ

ಮೈಸೂರಿನ ಕೆಆರ್.ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಆಸ್ಪತ್ರೆಯ ಟೆಲಿ ಐಸಿಯು ಹಬ್ ವಿಭಾಗ ವೀಕ್ಷಣೆ ಮಾಡಿದರು. ಕೆಆರ್.ಆಸ್ಪತ್ರೆಯಿಂದ ತಾಲೂಕು ಆಸ್ಪತ್ರೆಗಳಲ್ಲಿನ ಗಂಭೀರ ಪ್ರಕರಣಗಳನ್ನು ಮಾನಿಟರ್ ಮಾಡುವ ಕೇಂದ್ರವಾಗಿದೆ. ಕೇಂದ್ರದ ಉಪಯೋಗ ಹಾಗೂ ಸಿಬ್ಬಂದಿ ಕಾರ್ಯ ವೈಖರಿ ಬಗ್ಗೆ ವಿಚಾರಿಸಿದರು. ಚಾಮರಾಜ ಕ್ಷೇತ್ರದ ಶಾಸಕ ಹರೀಶ್‌ಗೌಡ, ಹೆಚ್‌ಡಿ.ಕೋಟೆ ಕ್ಷೇತ್ರದ ಶಾಸಕ ಅನೀಲ್ ಚಿಕ್ಕಮಾದು ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ಅವರು,  ಸರ್ಕಾರಿ ವೈದ್ಯರು ಕ್ಲಿನಿಕ್ ನಡೆಸಲು ನೀಡಿರುವ ಅವಕಾಶವನ್ನು ಪುನರ್ ಪರಿಶೀಲನೆ ಮಾಡುತ್ತೇವೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ. ಹಿಂದೆ ವೈದ್ಯರ ಕೊರತೆ ಇತ್ತು. ಆದ್ದರಿಂದ ಸಾರ್ವಜನಿಕರಿಗೆ ಸೇವೆ ಸಿಗಲಿ ಎನ್ನುವ ಕಾರಣಕ್ಕೆ ವೈದ್ಯರು ಕ್ಲಿನಿಕ್ ನಡೆಸಲು ಸರ್ಕಾರವೇ ಅವಕಾಶ ಮಾಡಿಕೊಟ್ಟಿತ್ತು. ಸರ್ಕಾರಿ ವೈದ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಸೇವೆ ಮಾಡಬೇಕು. ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವವರು ಮಾತ್ರ ಕ್ಲಿನಿಕ್ ನಡೆಸಲು ಈಗ ಅವಕಾಶ ಇದೆ. ಅದರಿಂದ ಆಗುತ್ತಿರುವ ಸಮಸ್ಯೆಗಳನ್ನು ಗಮನಿಸಿ ಪುನರ್ ಪರಿಶೀಲನೆಗೆ ಮುಂದಾಗಿದ್ದೇವೆ. ಹೊಸ ಆಸ್ಪತ್ರೆಗಳನ್ನು ನಿರ್ಮಿಸುವುದು ದೊಡ್ಡದಲ್ಲ. ಇರುವ ಆಸ್ಪತ್ರೆಗಳಿಗೆ ಸೌಕರ್ಯ ಕಲ್ಪಿಸಲಾಗಿದೆ. ಮೈಸೂರಿನ ಆಸ್ಪತ್ರೆಗಳಲ್ಲೂ ಅರೆ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಕೆ.ಆರ್. ಆಸ್ಪತ್ರೆ ಟೆಲಿ ಹಬ್, ಜಿಲ್ಲಾಸ್ಪತ್ರೆಗೆ ಭೇಟಿ ನೀಡುತ್ತಿದ್ದೇನೆ. ಕುಂದುಕೊರತೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಮೈಸೂರಿನಲ್ಲಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕುಣಿಗಲ್: ಬಡ ಮಹಿಳೆಗೆ ಸ್ವತಃ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದ ಶಾಸಕ ಡಾ.ರಂಗನಾಥ್

ಕಾಂಗ್ರೆಸ್‌ನಿಂದ ಬಂದವರಿಂದ ಬಿಜೆಪಿ ಶಿಸ್ತು ಕೆಟ್ಟಿತ್ತು ಎಂಬ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಂದ ಬಂದ ಶಾಸಕರಿಂದ ಸರ್ಕಾರ ಮಾಡಿ 40, 50% ಕಮಿಷನ್ ಒಡೆದು ಈಗ ಈ ಮಾತು ಆಡಿದರೆ ಅವರನ್ನು ಯಾರು ನಂಬುತ್ತಾರೆ ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. 

Latest Videos
Follow Us:
Download App:
  • android
  • ios