ಒಬ್ಬರೇ ಒಬ್ಬರು ಶಾಸಕರು ಕೂಡ ಹೋಗಲ್ಲ, ಸರ್ಕಾರ ಕೆಡುವುದು ಹಗಲು ಕನಸು. ಈ ಸರ್ಕಾರ ಸಂಪೂರ್ಣ 5 ವರ್ಷ ಜನರಿಗೆ ಉತ್ತಮ ಆಡಳಿತ ನೀಡುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

ವಿಜಯಪುರ (ಜು.225):  ಒಬ್ಬರೇ ಒಬ್ಬರು ಶಾಸಕರು ಕೂಡ ಹೋಗಲ್ಲ, ಸರ್ಕಾರ ಕೆಡುವುದು ಹಗಲು ಕನಸು. ಈ ಸರ್ಕಾರ ಸಂಪೂರ್ಣ 5 ವರ್ಷ ಜನರಿಗೆ ಉತ್ತಮ ಆಡಳಿತ ನೀಡುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಬೀಳಿಸಲು ಯತ್ನ ನಡೆದಿದೆ ಎನ್ನುವ ವಿಚಾರದ ಕುರಿತು ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯೆ ನೀಡಿದ ಅವರು, ಅದು ಹಾಗೆಲ್ಲ ಆಗುವುದಿಲ್ಲ. ನಾವು 136 ಶಾಸಕರು ಒಗ್ಗಟ್ಟಾಗಿಯೇ ಇದ್ದೇವೆ. ಈ ಸರ್ಕಾರ ಕೆಡವಲು 60 ಶಾಸಕರು ಬೇಕಾಗುತ್ತದೆ. ಒಬ್ಬರೇ ಒಬ್ಬರು ಶಾಸಕರು ಕೂಡ ಕಾಂಗ್ರೆಸ್‌ ಬಿಟ್ಟು ಹೋಗುವುದಿಲ್ಲ. ಸರ್ಕಾರ ಕೆಡುವುದು ಕೇವಲ ಕೆಲವರ ಹಗಲುಗನಸು ಎಂದು ವ್ಯಂಗ್ಯವಾಡಿದರು.

ಬಿಜೆಪಿಗರಿಗೆ ಅಧಿಕಾರದ ಹಪಾಹಪಿ ಜಾಸ್ತಿ; ಅಡ್ಡದಾರಿ ಹಿಡಿದಾದ್ರೂ ಬರ್ತಾರೆ: ಸಚಿವ ತಿಮ್ಮಾಪುರ ಕಿಡಿ

ಮಹಾರಾಷ್ಟ್ರದಂಥ ವಿದ್ಯಮಾನ ನಮ್ಮ ರಾಜ್ಯದಲ್ಲಿ ಸಾಧ್ಯವಿಲ್ಲ. ಈ ಸರ್ಕಾರ ಸಂಪೂರ್ಣ 5 ವಷÜರ್‍ ಇರುತ್ತೆ. ಜನರಿಗೆ ಉತ್ತಮ ಆಡಳಿತ ನೀಡುತ್ತೇವೆ. ಮತ್ತೆ 5 ವಷÜರ್‍ದ ಬಳಿಕ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

ಸಚಿವರ ಮೇಲೆ ಶಾಸಕರ ಅಸಮಾಧಾನ, ಸಿಎಂಗೆ ಪತ್ರ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕರ ದೂರು, ಪತ್ರದ ಬಗ್ಗೆ ನನಗೆ ಗೊತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸಮಾಧಾನ ಇರುವುದು ಸಹಜ. ಹಾಗೇನಾದರೂ ಇದ್ದರೆ, ಆ ಕುರಿತು ಸಿಎಲ್‌ಪಿ ಸಭೆಯಲ್ಲಿ ಚರ್ಚೆ ಆಗುತ್ತದೆ. ಚರ್ಚೆಯಲ್ಲಿ ಅಸಮಾಧಾನ ಪರಿಹರಿಸಲಾಗುತ್ತದೆ. ಶಾಸಕಾಂಗ ಸಭೆಯಲ್ಲಿ ಶಾಸಕರು ತಮ್ಮ ಅಸಮಾಧಾನ ಹೇಳಿಕೊಳ್ಳಬಹುದು, ತಪ್ಪೇನಿಲ್ಲ. ಶಾಸಕರ ದೂರಿನ ಪತ್ರದ ಬಗ್ಗೆ ಗೊತ್ತಿಲ್ಲ, ನಾನೂ ಮಾಧ್ಯಮದಲ್ಲಿ ನೋಡಿದ್ದೇನೆ ಅಷ್ಟೇ. ಅದೇನೆ ಇದ್ದರೂ ಸಹ, ಶಾಸಕರ ಮೇಲೆ ಬಹಳಷÜು್ಟಒತ್ತಡವಿರುದ್ತದೆ. ಮತಕ್ಷೇತ್ರದ ಅಭಿವೃದ್ಧಿ, ಅನುದಾನ ಅಂತ ಶಾಸಕರಿಗೆ ಒತ್ತಡ ಇರುಬೇಕು. ಅದನ್ನ ಸಿಎಂ ಎದುರು ಕೂತು ಬಗೆಹರಿಸಿಕೊಳ್ತೇವೆ ಎಂದು ಹೇಳಿದರು.

ಬಿ.ಕೆ.ಹರಿಪ್ರಸಾದ್ ಹೇಳಿಕೆಯ ಡ್ಯಾಮೇಜ್ ಕಂಟ್ರೊಲ್‌ಗೆ ಸಿಂಗಪುರ ಕಥೆ ಆರಂಭ; ಮಾಜಿ ಸಿಎಂ ಬೊಮ್ಮಾಯಿ ಟೀಕೆ

ಬೆಂಗಳೂರಿನ ಜನ ಸಾಮಾನ್ಯರಿಗೆ ಹಾಗೂ ಕೈಗಾರಿಕೆಗೆ ಬೆಂಗಳೂರು ಸಬ್‌ ಅರ್ಬನ್‌ ರೈಲ್ವೆ ಪ್ರೊಜೆಕ್ಟ್ ಸಹಾಯಕವಾಗಲಿದೆ. ಮುಂಬೈ, ದೆಹಲಿ ಮಾದರಿಯಲ್ಲಿ ಬಿಎಸ್‌ಆರ್‌ಪಿ ಎರಡನೇ ಹಂತದ ಕುರಿತು ಚಿಂತನೆ ನಡೆಸಲಾಗಿದೆ. ಮೊದಲ ಹಂತದ ಬಿಎಸ್‌ಆರ್‌ಪಿ ಯೋಜನೆಗೆ ಹೊರತಾಗಿ ಇದನ್ನು ಚಿಂತಿಸಲಾಗಿದೆ. ಮೊದಲ ಹಂತದ ಕಾಮಗಾರಿ ಮುಗಿದ ಬಳಿಕ ಎರಡನೇ ಹಂತ ಆರಂಭಿಸುವ ಕುರಿತು ಚಿಂತಿಸಲಾಗಿದೆ. ಈ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಮಪಾಲು ಹಣ ಹಾಕಬೇಕಾಗುತ್ತದೆ. ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆಯೂ ಕೂಡ ಅವಶ್ಯಕ. ಈ ಕುರಿತು ಕೇಂದ್ರ ರೈಲ್ವೆ ಸಚಿವರೊಂದಿಗೆ ಶೀಘ್ರವೇ ಚರ್ಚಿಸಲಾಗುತ್ತದೆ ಎಂದು ಹೇಳಿದರು.