ತಿರುಪತಿ ಲಡ್ಡಲ್ಲಿ ಪ್ರಾಣಿ ಕೊಬ್ಬು ಪತ್ತೆ ಹಿನ್ನೆಲೆ: ಕರ್ನಾಟಕದಲ್ಲಿ ಎಲ್ಲ ಖಾಸಗಿ ಬ್ರ್ಯಾಂಡ್‌ನ ತುಪ್ಪ ಪರೀಕ್ಷೆಗೆ ಆದೇಶ

ಎಲ್ಲ ಖಾಸಗಿ ಬ್ರ್ಯಾಂಡ್‌ಗಳ ತುಪ್ಪದ ಮಾದರಿಯನ್ನು ಎರಡು ದಿನಗಳೊಳಗೆ ಕಳುಹಿಸಬೇಕು. ಆಹಾರ ಮಾದರಿಯ ಸಂಗ್ರಹಣೆಯ ವಿವರಗಳನ್ನು ಪ್ರಯೋಗಾಲಯದ ಹೆಸರಿನೊಂದಿಗೆ ‘ಫುಡ್‌ ಸೇಫ್ಟಿ ಕಂಪ್ಲೈನ್ಸ್‌ ಥ್ರೂ ರೆಗ್ಯೂಲರ್‌ ಇನ್ಸ್‌ಪೆಕ್ಷನ್‌ ಆ್ಯಂಡ್‌ ಸ್ಯಾಂಪ್ಲಿಂಗ್‌’ನಲ್ಲಿ ದಾಳಿ ನಡೆಸುವಂತೆ ಸೂಚಿಸಲಾಗಿದೆ. 
 

Order for testing of all private brand ghee in Karnataka grg

ಬೆಂಗಳೂರು(ಸೆ.22):  ತಿರುಮಲ ತಿರುಪತಿ ದೇವಸ್ಥಾನದ ಪ್ರಸಾದ ಲಡ್ಡುವಿನಲ್ಲಿ ಹಂದಿ, ದನ ಸೇರಿದಂತೆ ಇತರೆ ಪ್ರಾಣಿಗಳ ಕೊಬ್ಬು ಪತ್ತೆಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಖಾಸಗಿ ಬ್ರ್ಯಾಂಡ್‌ಗಳ ತುಪ್ಪದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸುವಂತೆ ಆದೇಶಿಸಿದೆ.

ಶನಿವಾರ ಈ ಕುರಿತು ಇಲಾಖೆಯ ಎಲ್ಲಾ ಜಿಲ್ಲಾ ಅಂಕಿತಾಧಿಕಾರಿಗಳು ಪ್ರತಿ ಜಿಲ್ಲೆಗೆ ತಲಾ 5ರಂತೆ ಖಾಸಗಿ ಬ್ರ್ಯಾಂಡ್‌ಗಳ ತುಪ್ಪದ ಕಾನೂನಾತ್ಮಕ ಆಹಾರ ಮಾದರಿಗಳನ್ನು ಸಂಗ್ರಹಿಸಿ ಅವುಗಳನ್ನು ಸರ್ಕಾರಿ ಪ್ರಯೋಗಾಲಯಗಳಿಗೆ ಗುಣಮಟ್ಟದ ಪರೀಕ್ಷೆಗೆ ಕಳುಹಿಸಿಕೊಡುವಂತೆ ಸೂಚನೆ ನೀಡಲಾಗಿದೆ.

ಶೀಘ್ರವೇ ತಿರುಪತಿ ದೇಗುಲ ಶುದ್ಧೀಕರಣ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

ಎಲ್ಲ ಖಾಸಗಿ ಬ್ರ್ಯಾಂಡ್‌ಗಳ ತುಪ್ಪದ ಮಾದರಿಯನ್ನು ಎರಡು ದಿನಗಳೊಳಗೆ ಕಳುಹಿಸಬೇಕು. ಆಹಾರ ಮಾದರಿಯ ಸಂಗ್ರಹಣೆಯ ವಿವರಗಳನ್ನು ಪ್ರಯೋಗಾಲಯದ ಹೆಸರಿನೊಂದಿಗೆ ‘ಫುಡ್‌ ಸೇಫ್ಟಿ ಕಂಪ್ಲೈನ್ಸ್‌ ಥ್ರೂ ರೆಗ್ಯೂಲರ್‌ ಇನ್ಸ್‌ಪೆಕ್ಷನ್‌ ಆ್ಯಂಡ್‌ ಸ್ಯಾಂಪ್ಲಿಂಗ್‌’ನಲ್ಲಿ ದಾಳಿ ನಡೆಸುವಂತೆ ಸೂಚಿಸಲಾಗಿದೆ. ಈ ಕಾರ್ಯದ ಮೇಲ್ವಿಚಾರಣೆಯನ್ನು ಆಯಾ ಜಿಲ್ಲಾ ಅಂಕಿತಾಧಿಕಾರಿಗಳು ನಡೆಸಿ ಕೇಂದ್ರ ಕಚೇರಿಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

Latest Videos
Follow Us:
Download App:
  • android
  • ios