Asianet Suvarna News Asianet Suvarna News

ಪಾಕ್ ಪರ ಘೋಷಣೆ ಗದ್ದಲ, ಪ್ರತಿಪಕ್ಷ ಸಭಾತ್ಯಾಗ: ಸಿಎಂ ಭಾಷಣ ಮೊಟಕು

ಬಿಜೆಪಿ ಸದಸ್ಯರು ಚಪ್ಪಾಳೆ ಹೊಡೆದು ಭಜನೆ ಮಾಡುವ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಿದರು. ಅಲ್ಲದೇ, ಪ್ರತಿಪಕ್ಷಗಳು ಸದನದಲ್ಲಿ ಇಲ್ಲದಿರುವುದರಿಂದ ಉತ್ತರ ನೀಡಲು ಜೋಶ್‌ ಇಲ್ಲ, ಸ್ಫೂರ್ತಿ ಇಲ್ಲ ಎಂದು ಹೇಳಿದ ಸಿದ್ದರಾಮಯ್ಯ ತಮ್ಮ ಉತ್ತರವನ್ನು ಮೊಟಕುಗೊಳಿಸಿದ ಪ್ರಸಂಗವು ನಡೆಯಿತು.

Opposition Party Held Protest in Vidhanasabhe Session grg
Author
First Published Mar 1, 2024, 5:33 AM IST

ವಿಧಾನಸಭೆ(ಮಾ.01):  ಪಾಕಿಸ್ತಾನ ಪರ ಘೋಷಣೆ ವಿರೋಧಿಸಿ ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌ನಿಂದ ಧರಣಿ, ಗದ್ದಲ, ಕಾಗದಪತ್ರಗಳ ಹರಿದು ಸಭಾಧ್ಯಕ್ಷರ ಪೀಠದತ್ತ ಎಸೆತ, ವಾಕ್ಸಮರ, ಸಭಾತ್ಯಾಗದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಿದರು.

ಇದೇ ವೇಳೆ ಬಿಜೆಪಿ ಸದಸ್ಯರು ಚಪ್ಪಾಳೆ ಹೊಡೆದು ಭಜನೆ ಮಾಡುವ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಿದರು. ಅಲ್ಲದೇ, ಪ್ರತಿಪಕ್ಷಗಳು ಸದನದಲ್ಲಿ ಇಲ್ಲದಿರುವುದರಿಂದ ಉತ್ತರ ನೀಡಲು ಜೋಶ್‌ ಇಲ್ಲ, ಸ್ಫೂರ್ತಿ ಇಲ್ಲ ಎಂದು ಹೇಳಿದ ಸಿದ್ದರಾಮಯ್ಯ ತಮ್ಮ ಉತ್ತರವನ್ನು ಮೊಟಕುಗೊಳಿಸಿದ ಪ್ರಸಂಗವು ನಡೆಯಿತು.

ಅಧಿಕಾರ ಸಿಕ್ಕಾಗ ಜನಸೇವೆ ಮಾಡುವ ಬೆರಳೆಣಿಕೆ ನಾಯಕರಲ್ಲಿ ಸಂಸದ ಡಿಕೆ ಸುರೇಶ್ ಒಬ್ಬರು: ಲಕ್ಷ್ಮೀ ಹೆಬ್ಬಾಳ್ಕರ್

ಗುರುವಾರ ಸದನ ಆರಂಭವಾಗುತ್ತಿದ್ದಂತೆ ಬಿಜೆಪಿಯ ಸದಸ್ಯರು ಬುಧವಾರದಿಂದ ಆರಂಭಿಸಿದ ಧರಣಿಯನ್ನು ಮುಂದುವರೆಸಿದರು. ಬಿಜೆಪಿಗೆ ಸದಸ್ಯರ ಧರಣಿಗೆ ಜೆಡಿಎಸ್ ಸದಸ್ಯರು ಜೊತೆಗೂಡಿದ್ದರು. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪ ಸಂಬಂಧ ಘಟನೆ ನಡೆದು ಎರಡು ದಿನ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ. ಗಂಭೀರ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿಲ್ಲ ಎಂದು ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಲಾಯಿತು.

ಗೃಹಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಏಳು ಜನರನ್ನು ಕರೆದು ವಿಚಾರ ಮಾಡಿ ಹೇಳಿಕೆ ಪಡೆಯಲಾಗಿದೆ. ತನಿಖೆ ಮುಂದುವರೆದಿದೆ. ಸತ್ಯಾಂಶವನ್ನು ತಾಂತ್ರಿಕವಾಗಿ ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಕೇಳಲಾಗಿದೆ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಒಂದು ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅಶ್ವಾಸನೆ ನೀಡಿದರು.

ಆದರೂ ಪ್ರತಿಪಕ್ಷದವರು ತೃಪ್ತರಾಗದೆ ಸರ್ಕಾರ ವಿರುದ್ಧ ಘೋಷಣೆ ಕೂಗಿ ಕಾಗದಪತ್ರಗಳನ್ನು ಹರಿದು ಸಭಾಧ್ಯಕ್ಷರ ಪೀಠದತ್ತ ತೂರಿ ಗದ್ದಲವನ್ನುಂಟು ಮಾಡಿದರು. ಇದು ಹಲವು ಬಾರಿ ಪುನರವರ್ತನೆಯೂ ಆಯಿತು. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಚಲಿತರಾಗದೆ ಉತ್ತರವನ್ನು ಮುಂದುವರೆಸಿದರು. ಧರಣಿ ಕೈಬಿಟ್ಟು ಸುಗಮ ಕಲಾಪಕ್ಕೆ ಸಹಕಾರ ಕೊಡಬೇಕು ಎಂಬ ಸ್ಪೀಕರ್‌ ಯು.ಟಿ.ಖಾದರ್ ಮನವಿ ಫಲ ನೀಡಲಿಲ್ಲ.

ಜಾತಿ ಗಣತಿ ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ; 2 ಮೂಟೆಗಳಲ್ಲಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗಡೆ

ಸ್ವಲ್ಪ ಹೊತ್ತಿನ ನಂತರ ಬಿಜೆಪಿ ಸದಸ್ಯರು ಸದನದ ಬಾವಿಯಲ್ಲಿ ಸುತ್ತುವರೆಯುತ್ತಾ, ಚಪ್ಪಾಳೆ ಹೊಡೆಯುತ್ತಾ ಧರಣಿ ಮುಂದುವರಿಸಿದರು. ಭಜನೆ ರೀತಿ ಚಪ್ಪಾಳೆ ತಟ್ಟುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಸಭೆ ಚುನಾವಣೆಯಲ್ಲಿ ಅಡ್ಡ ಮತ ಹಾಕಿದ್ದನ್ನು ಮರೆಮಾಚಲು ನಾಟಕವಾಡುತ್ತಿದ್ದಾರೆ. ಇಲ್ಲಿ ಭಜನೆ ಮಾಡುತ್ತಿರುವುದು ಸರಿಯಲ್ಲ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ಮುಖ್ಯಮಂತ್ರಿಗಳು ಉತ್ತರವನ್ನು ಮುಂದುವರಿಸಿದ್ದರಿಂದ ಬಿಜೆಪಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಘೋಷಣೆ ಕೂಗಿದ ಪ್ರಕರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ದೇಶದ್ರೋಹಿಗಳ ಜೊತೆ ಶಾಮೀಲಾಗಿರುವ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ರಾಜ್ಯಪಾಲರಿಗೆ ದೂರು ನೀಡುತ್ತೇವೆ ಎಂದು ಹೇಳಿ ಸಭಾತ್ಯಾಗ ಮಾಡಿದರು. ಜೆಡಿಎಸ್ ಸದಸ್ಯರು ಸಹ ಬಿಜೆಪಿ ಸದಸ್ಯರನ್ನು ಹಿಂಬಾಲಿಸಿ ಸಭಾತ್ಯಾಗ ಮಾಡಿದರು. ಈ ವೇಳೆ ಸಿದ್ದರಾಮಯ್ಯನವರು ನಿಮ್ಮ ಕೈಲಿ ಬೇರೇನೂ ಆಗುವುದಿಲ್ಲ, ನಡೆಯಿರಿ ಎಂದು ಲೇವಡಿ ಮಾಡಿದರು.

Follow Us:
Download App:
  • android
  • ios