ಅಧಿಕಾರ ಸಿಕ್ಕಾಗ ಜನಸೇವೆ ಮಾಡುವ ಬೆರಳೆಣಿಕೆ ನಾಯಕರಲ್ಲಿ ಸಂಸದ ಡಿಕೆ ಸುರೇಶ್ ಒಬ್ಬರು: ಲಕ್ಷ್ಮೀ ಹೆಬ್ಬಾಳ್ಕರ್
ಕಳೆದ ಐದು ವರ್ಷಗಳಿಂದ ಸಂಸದ ಡಿಕೆ ಸುರೇಶ್ ನಿಮ್ಮ ಸೇವೆ ಮಾಡಿದ್ದಾರೆ. ರಾಜಕಾರಣದಲ್ಲಿ ಅಧಿಕಾರ ಸಿಕ್ಕಾಗ ಜನಸೇವೆ ಮಾಡುವವರು ಬೆರಳೆಣಿಕೆ ಮಂದಿ ಅದರಲ್ಲಿ ಡಿಕೆ ಸುರೇಶ್ ಸಹ ಒಬ್ಬರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮಾಗಡಿ (ಫೆ.29): ಕಳೆದ ಐದು ವರ್ಷಗಳಿಂದ ಸಂಸದ ಡಿಕೆ ಸುರೇಶ್ ನಿಮ್ಮ ಸೇವೆ ಮಾಡಿದ್ದಾರೆ. ರಾಜಕಾರಣದಲ್ಲಿ ಅಧಿಕಾರ ಸಿಕ್ಕಾಗ ಜನಸೇವೆ ಮಾಡುವವರು ಬೆರಳೆಣಿಕೆ ಮಂದಿ ಅದರಲ್ಲಿ ಡಿಕೆ ಸುರೇಶ್ ಸಹ ಒಬ್ಬರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮಾಗಡಿಯಲ್ಲಿ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಂದ್ರೆ ಕಮಿಟ್ಮೆಂಟ್, ಬದ್ಧತೆ. ವಿಧಾನಸಭಾ ಚುನಾವಣೆಗೆ ಮೊದಲು ಐದು ಗ್ಯಾರಂಟಿಗಳ ಜಾರಿ ಮಾಡುತ್ತೇವೆ ಎಂದು ಹೇಳಿದ್ದೆವು. ಅದರಂತೆ ಅಧಿಕಾರಕ್ಕೆ ಬರುತ್ತಿದ್ದಂತೆ ನಮ್ಮ ಸರ್ಕಾರ ಮೊದಲು ಮಾಡಿದ ಕೆಲಸ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು. ಆ ಮೂಲಕ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ನುಡಿದಂತೆ ನಡೆದಿದ್ದೇವೆ ಎಂದರು.
ಬಳ್ಳಾರಿಯಲ್ಲಿಂದು ರಾಕಿಂಗ್ ಸ್ಟಾರ್ ಅಬ್ಬರ; ಯಶ್ ನೋಡಲು ಮುಗಿಬಿದ್ದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳು ಜಾರಿಯಾದಾಗ ವಿರೋಧ ಪಕ್ಷಗಳು ನಮ್ಮನ್ನು ಟೀಕೆ ಮಾಡಿದ್ರು. ಆದರೆ ನಾವು ಕಿವಿಗೊಡಲಿಲ್ಲ. ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿ ಮಾಡಿದೆವು. ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದೆವು. ಗೃಹ ಲಕ್ಷ್ಮೀ ಯೋಜನೆಯಿಮದ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು.
ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ್ದಾರೆ, ತುಂಬಾ ಸಂತೋಷ. ಆದರೆ ಅದಕ್ಕಾಗಿ ಐದು ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಆದ್ರೆ ನಮ್ಮ ಸರ್ಕಾರ ಒಂದು ತಿಂಗಳಿಗೆ ಮಹಿಳೆಯರಿಗೆ 4ಸಾವಿರ ಕೋಟಿ ನೀಡಿ ರಾಮರಾಜ್ಯ ಸ್ಥಾಪನೆಗೆ ಮುಂದಾಗಿದೆ. ನಾನು ಕೂಡ ರಾಮಭಕ್ತೆ. ನಮ್ಮ ಸರ್ಕಾರ ರಾಮರಾಜ್ಯದ ಪರಿಕಲ್ಪನೆ ಇಟ್ಟುಕೊಂಡು ಆಡಳಿತ ಮಾಡ್ತಿದೆ ಎಂದರು.
ಜನರಿಗೆ ನೀರು ಹಾಲು ಮಜ್ಜಿಗೆಯ ವ್ಯತ್ಯಾಸ ಗೊತ್ತಿದೆ. ನಮ್ಮ ಗ್ಯಾರಂಟಿಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಮಾಗಡಿಯಲ್ಲಿ 51 ಸಾವಿರ ಕುಟುಂಬಗಳು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ನಾವು ಅದಾನಿ ಅಂಬಾನಿಗೆ ಸಹಾಯ ಮಾಡುತ್ತಿಲ್ಲ. ಬದಲಾಗಿ ನಾವು ಬಡವರಿಗೆ, ಬಡಹೆಣ್ಣುಮಕ್ಕಳಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಸಹಾಯ ಮಾಡುತ್ತಿದ್ದೇವೆ. ಶಕ್ತಿ ಯೋಜನೆಯಿಂದ ರಾಜ್ಯದ ಉದ್ದಗಲಕ್ಕೂ ಮಹಿಳೆಯರು ಸ್ವಾಭಿಮಾನದಿಂದ ಓಡಾಡುತ್ತಿದ್ದಾರೆ ಎಂದರು.
ಐದು ಬೆರಳು ಸೇರಿ ಕೈ ಮುಷ್ಠಿಯಾಯ್ತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯ್ತು..: ಪ್ರತಿಪಕ್ಷಗಳಿಗೆ ಡಿಕೆಶಿ ಟಾಂಗ್
ಕೆಲವರು ಅಧಿಕಾರದಲ್ಲಿ ಇದ್ದಾಗ ಒಂದು ಬಣ್ಣ, ಇಲ್ಲದಿದ್ದಾಗ ಇನ್ನೊಂದು ಬಣ್ಣ ಎಂಬಂತೆ ನಡೆದುಕೊಳ್ತಾರೆ. ಆದರೆ ಸಂಸದ ಡಿಕೆ ಸುರೇಶ್ ಯಾವಾಗಲೂ ಕೆಲಸ ಮಾಡೋ ರಾಜಕಾರಣಿ. ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ಅವಕಾಶ ಸಿಗಬೇಕು. ಅವರು ಗೆದ್ದರೆ ಮುಂದಿನ ಲೋಕಸಭಾ ಚುನಾವಣೆ ಗೆದ್ದಹಾಗೆ ಎಂದು ಶಾಸಕ ಬಾಲಣ್ಣ ಹೇಳಿದ್ರು. ಅವರ ಮಾತು ಅಕ್ಷರಶಃ ನಿಜ. ಹೀಗಾಗಿ ಡಿಕೆ ಸುರೇಶ್ ಅವರು ಗೆದ್ದರೆ ಎಲ್ಲ ಕೆಲಸಗಳನ್ನು ಮಾಡ್ತಾರೆ. ಅಲ್ಲದೇ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಅಡಿ ಕಾರ್ಯಕರ್ತೆಯರಿಗೆ ಆರನೇ ಗ್ಯಾರಂಟಿ ಕೇಳಿದ್ದಾರೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡ್ತೇವೆ.
ಶೀಘ್ರದಲ್ಲೇ 6ನೇ ಗ್ಯಾರಂಟಿ ಘೋಷಣೆ ಆಗಲಿದೆ ಎಂದರು.