ಕಾಂಗ್ರೆಸ್ ಸೇರಲ್ಲ, ನನ್ನ ಯಾರೂ ಕರೆದೂ ಇಲ್ಲ: ರೇಣುಕಾಚಾರ್ಯ
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಕಾರಣಕ್ಕೂ ನಾನು ಸೇರುವುದಿಲ್ಲ. ಹಾಗೆ ಹೋಗುತ್ತೇನೆಂದು ನಾನು ಎಲ್ಲಿಯೂ ಹೇಳಿಲ್ಲ. ನನ್ನನ್ನು ಯಾರೂ ಸಹ ಆ ಪಕ್ಷಕ್ಕೆ ಕರೆದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆ (ಆ.26) : ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಕಾರಣಕ್ಕೂ ನಾನು ಸೇರುವುದಿಲ್ಲ. ಹಾಗೆ ಹೋಗುತ್ತೇನೆಂದು ನಾನು ಎಲ್ಲಿಯೂ ಹೇಳಿಲ್ಲ. ನನ್ನನ್ನು ಯಾರೂ ಸಹ ಆ ಪಕ್ಷಕ್ಕೆ ಕರೆದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೃಷ್ಣ ಭೈರೇ ಗೌಡ, ಎಸ್.ಎಸ್.ಮಲ್ಲಿಕಾರ್ಜುನ್‌ರನ್ನು ನಾನು ಭೇಟಿ ಮಾಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಹೊನ್ನಾಳಿ ಕ್ಷೇತ್ರದ ಅವಳಿ ತಾಲೂಕಿನ ಮಾಜಿ ಶಾಸಕನಾಗಿ ನಮ್ಮ ತಾಲೂ ಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸಲು ಮನವಿ ಮಾಡಲು ಹೋಗಿದ್ದೆನಷ್ಟೆಎಂದರು.
ನೌಕರರ ಬೇಡಿಕೆಗಳಿಗೆ ಐಎಎಸ್ ಅಧಿಕಾರಿಗಳು ಅಡ್ಡಗಾಲು ಹಾಕ್ತಾರೆ: ರೇಣುಕಾಚಾರ್ಯ
ಎಂಪಿ ಟಿಕೆಟ್ ಆಕಾಂಕ್ಷಿ: ನಾನು ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ನನಗೇ ಟಿಕೆಟ್ ಸಿಗುವ ಸಂಪೂರ್ಣ ವಿಶ್ವಾಸವಿದೆ. ಹೀಗಿರುವಾಗ ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು, ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದರು.
ಬಿಎಸ್‌ವೈ ಕಡೆಗಣನೆ ಸಲ್ಲ: ಕರ್ನಾಟಕದ ರಾಜಕಾರಣವನ್ನು ಯಾರೋ ಎಲ್ಲೋ ಕುಳಿತು ನಿಯಂತ್ರಿಸುತ್ತಿದ್ದಾರೆ. ಇದೇ ರೀತಿ ಕಾಣದ ಕೈಗಳು ಆಟವಾಡುತ್ತಿದ್ದರೆ ನಾಳೆ ಇದ ರಿಂದ ಬಿಜೆಪಿಗೆ ಹಿನ್ನಡೆಯಾಗುತ್ತದೆ. ಇನ್ನು, ಎರಡು ವರ್ಷಗಳÜ ಹಿಂದೆಯೇ ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕಿತ್ತು. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಸ್ಥಾನಗಳ ಬW್ಗæ ಜನ ನಾನು ಹೋದಲ್ಲೆಲ್ಲಾ ಕೇಳುತ್ತಿದ್ದಾರೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿಯವರಿಗೆ ಇರುವಷ್ಟೇ ಗೌರವ ರಾಜ್ಯದಲ್ಲಿ ಬಿಎಸ್‌ವೈಗೆ ಇದೆ. ಯಡಿಯೂರಪ್ಪ ನೇತೃತ್ವದಲ್ಲಿ ಹೋದರಷ್ಟೇ ಬಿಜೆಪಿಗೆ ಭವಿಷ್ಯ ಎಂದರು.
ಸಿದ್ದು, ಡಿಕೆಶಿ ಭೇಟಿಯಾದ ಬಿಜೆಪಿ ಮುಖಂಡ ರೇಣುಕಾಚಾರ್ಯ: ರಾಜಕೀಯ ವಲಯದಲ್ಲಿ ಚರ್ಚೆ