Asianet Suvarna News Asianet Suvarna News

ಶುಲ್ಕ ಪಾವತಿಸದಕ್ಕೆ ಆನ್‌ಲೈನ್‌ ತರಗತಿ ತಡೆ ಹಿಡಿದ ಶಾಲೆ

ಆನ್‌ಲೈನ್‌ ತರಗತಿಗಳಿಗೆ ಶುಲ್ಕ ವಿಧಿಸುವಂತಿಲ್ಲ ಎಂಬ ರಾಜ್ಯ ಸರ್ಕಾರದ ಸೂಚನೆ| ಆನ್‌ಲೈನ್‌ ಶುಲ್ಕದ ಬದಲಾಗಿ ಟ್ಯೂಷನ್‌ ಶುಲ್ಕ ಪಡೆಯುತ್ತಿರುವ ಶಾಲೆ| ಪ್ರತಿ ವರ್ಷದಂತೆ ಟ್ಯೂಷನ್‌ ಶುಲ್ಕ ಪಡೆಯಲಾಗುತ್ತಿದೆ| ಈ ಬಾರಿ ಕೊರೋನಾ ಇರುವುದರಿಂದ ನಾಲ್ಕು ಕಂತುಗಳಲ್ಲಿ ಪಾವತಿಸಲು ಅವಕಾಶ| ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ|

Online Classes Stoped due Non Payment of Fees in Bengaluru
Author
Bengaluru, First Published Aug 2, 2020, 8:27 AM IST

ಬೆಂಗಳೂರು(ಆ.02):ಟ್ಯೂಷನ್‌ ಶುಲ್ಕ ಪಾವತಿಸಲಿಲ್ಲ ಎಂಬ ಕಾರಣಕ್ಕೆ ದೆಹಲಿ ಪಬ್ಲಿಕ್‌ ಶಾಲೆಯು ಆನ್‌ಲೈನ್‌ ತರಗತಿಗಳನ್ನು ಸ್ಥಗಿತಗೊಳಿಸಿದೆ. ಇದರಿಂದ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಿಂದ ವಂಚಿತರಾಗುವಂತೆ ಮಾಡಿದೆ.

"

ರಾಜ್ಯ ಸರ್ಕಾರವು ಆನ್‌ಲೈನ್‌ ತರಗತಿಗಳಿಗೆ ಶುಲ್ಕ ವಿಧಿಸುವಂತಿಲ್ಲ ಎಂಬ ಸೂಚನೆ ನೀಡಿರುವುದರಿಂದ ಆನ್‌ಲೈನ್‌ ಶುಲ್ಕದ ಬದಲಾಗಿ ಟ್ಯೂಷನ್‌ ಶುಲ್ಕ ಪಡೆಯಲಾಗುತ್ತಿದೆ. ಜೂನ್‌ ತಿಂಗಳಿನಿಂದಲೇ ಆನ್‌ಲೈನ್‌ ತರಗತಿಗಳನ್ನು ಆರಂಭಿಸಿದ್ದು, ವಾರ್ಷಿಕ ಶುಲ್ಕವನ್ನು ನಾಲ್ಕು ಕಂತುಗಳಲ್ಲಿ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಇಲ್ಲಿಯವರೆಗೂ ಯಾರು ಶುಲ್ಕ ಪಾವತಿಸಿಲ್ಲ ಅಂತಹ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳನ್ನು ಕಡಿತ ಮಾಡಲಾಗಿದೆ ಎಂದು ಪೋಷಕರೊಬ್ಬರು ಆರೋಪಿಸಿದ್ದಾರೆ.

ಆನ್‌ಲೈನ್ ಕ್ಲಾಸ್‌ಗೆ 150 ಅಡಿ ಎತ್ತರದ ನೀರಿನ ಟ್ಯಾಂಕ್‌ ಏರಿದ ಮಕ್ಕಳು..!

ಸ್ಪಷ್ಟನೆ: 

ಪ್ರತಿ ವರ್ಷದಂತೆ ಟ್ಯೂಷನ್‌ ಶುಲ್ಕ ಪಡೆಯಲಾಗುತ್ತಿದೆ. ಈ ಬಾರಿ ಕೊರೋನಾ ಇರುವುದರಿಂದ ನಾಲ್ಕು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.ಶುಲ್ಕ ಪಾವತಿಸದ ವಿದ್ಯಾರ್ಥಿಗಳ ಆನ್‌ಲೈನ್‌ ತರಗತಿಗಳನ್ನು ಕಡಿತ ಮಾಡಲಾಗಿದೆ ಎಂದು ದೆಹಲಿ ಪಬ್ಲಿಕ್‌ ಶಾಲಾ ಆಡಳಿತ ಮಂಡಳಿ ಮೂಲಗಳು ಸ್ಪಷ್ಟಪಡಿಸಿದೆ.
 

Follow Us:
Download App:
  • android
  • ios