Asianet Suvarna News Asianet Suvarna News

ಕೇಂದ್ರದ ವಿರುದ್ಧ ಆನ್ಲೈನ್‌ ಅಭಿಯಾನ!

 ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ ರಚನೆಯಾಗಿರುವ ಸಮಿತಿಗೆ ವಿರೋಧ| ಕೇಂದ್ರದ ವಿರುದ್ಧ ಆನ್ಲೈನ್‌ ಅಭಿಯಾನ

Online Campaign against central govt
Author
Bangalore, First Published Aug 25, 2020, 11:37 AM IST

ಬೆಂಗಳೂರು(ಆ.25): ಅಪರಾಧ ಕಾನೂನುಗಳ ಸುಧಾರಣೆ ಸಂಬಂಧ ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ ರಚನೆಯಾಗಿರುವ ಸಮಿತಿಯನ್ನು ವಿರೋಧಿಸಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು (ಎನ್‌ಎಲ್‌ಎಸ್‌ಐಯು)ಆನ್‌ಲೈನ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಶುರುವಾಯ್ತು #UninstallPhonePay ಆಂದೋಲನ; ಆತಂಕದಲ್ಲಿ ಬೆಂಗಳೂರು ಕಂಪನಿ!

ಸಮಿತಿಯಲ್ಲಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ ಸುಧಾರಣೆಗಳು ಯಾರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆಯೋ ಆ ಸಮುದಾಯಗಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ಸಮಾಜದ ವಿವಿಧ ವರ್ಗಗಳು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಕುರಿತು ತಜ್ಞರ ಸಮಾಲೋಚನೆಯನ್ನು ಮುಂದೂಡಲು ಸಹ ಸಮಿತಿಯನ್ನು ಒತ್ತಾಯಿಸಲಾಗಿದೆ ಎಂದು ಅಭಿಯಾನದ ಪ್ರಮುಖ ಸಂಘಟಕ ಡಿ.ಮಂಥನ್‌ ತಿಳಿಸಿದ್ದಾರೆ.

ಚುನಾವಣೆ ಗೆಲ್ಲಲು ಮೋದಿ ವಿಡಿಯೋಗೆ ಟ್ರಂಪ್‌ ಮೊರೆ!

ಈ ಸಂಬಂಧ ವಿದ್ಯಾರ್ಥಿಗಳು ಹಾಗೂ ನಾಗರಿಕರು ಆಕ್ಷೇಪಣೆಗಳಿದ್ದರೆ ಲೀಲ್‌ ಸರ್ವಿಸಸ್‌ ಕ್ಲಿನಿಕ್‌ ಸಂಪರ್ಕಿಸಬಹುದಾಗಿದೆ. ಕಾನೂನು ನೆರವು ಮತ್ತು ಸಮಾಲೋಚನೆಗೆ ಲೀಗಲ್‌ ಸೆಲ್‌ ಮಧ್ಯಸ್ಥಿಕೆ ವಹಿಸುತ್ತದೆ. ಈ ಬಗ್ಗೆ ನೆರವಿಗೆ 7019373502 (ಡಿ.ಮಂಥನ್‌) ಅಥವಾ ಐs್ಚಃ್ಞಜಿs.a್ಚ.ಜ್ಞಿ ಸಂಪರ್ಕಿಸಬಹುದಾಗಿದೆ ಎಂದು ವಿನಂತಿಸಿದ್ದಾರೆ.

Follow Us:
Download App:
  • android
  • ios