ಏರ್ ಶೋಗೂ ಮುನ್ನವೇ ನಡೆಯಿತು ದುರಂತ| ಬೆಂಗಳೂರಿನಲ್ಲಿ ಲಘು ವಿಮಾನಗಳ ಪರಸ್ಪರ ಡಿಕ್ಕಿ| ಘಟನೆಯಲ್ಲಿ ಓರ್ವ ಪೈಲೆಟ್ ದುರ್ಮರಣ| ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಪೈಲೆಟ್|

ಬೆಂಗಳೂರು(ಫೆ.19): ಬೆಂಗಳೂರು ಏರ್ ಶೋಗೂ ಮುನ್ನವೇ ಭಾರೀ ಅವಘಢ ಸಂಭವಿಸಿದ್ದು, ಎರಡು ಲಘು ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಓರ್ವ ಪೈಲೆಟ್ ಮೃತಪಟ್ಟಿರುವ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏರ್ ಶೋಗೆ ತಾಲೀಮು ನಡೆಸುತ್ತಿದ್ದ ವಾಯುಸೇನೆಯ ಸೂರ್ಯ ಕಿರಣ್ ಲಘು ವಿಮಾನಗಳು, ಆಗಸದಲ್ಲೇ ಪರಸ್ಪರ ಡಿಕ್ಕಿ ಹೊಡೆದಿವೆ. ಕೂಡಲೇ ಪ್ಯಾರಾಚೂಟ್ ಸಹಾಯದಿಂದ ಎರಡೂ ವಿಮಾನಗಳ ಪೈಲೆಟ್‌ಗಳು ವಿಮಾನದಿಂದ ಜಂಪ್ ಮಾಡಿದ್ದರು.

"

ಆದರೆ ಓರ್ವ ಪೈಲೆಟ್ ಮನೆಯ ಮೇಲೆ ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏರ್ ಶೋಗೆ ತಾಲೀಮು ನಡೆಸುತ್ತಿದ್ದ ಲಘು ವಿಮಾನ ಅಪಘಾತ!