ಒಂದು ರಾಷ್ಟ್ರ-ಒಂದು ಪಡಿತರ ಚೀಟಿ (ಒಎನ್‌ಒಆರ್‌ಸಿ) ಯೋಜನೆಯು ಕೇವಲ ಹಿಂದುಳಿದವರನ್ನು ಬೆಂಬಲಿಸುವ ಮತ್ತು ಪೋಷಿಸುವ ಹೆಚ್ಚಿನ ಪರಿಣಾಮ ಬೀರುವ ಕಲ್ಯಾಣ ಯೋಜನೆ ಅಲ್ಲ. ಇದು ನ್ಯಾಯಬೆಲೆ ಅಂಗಡಿಗಳನ್ನು ತೀವ್ರ ಪೈಪೋಟಿಗೆ ಒಡ್ಡುತ್ತದೆ. ವಲಸೆ ಕಾರ್ಮಿಕರು ಈಗ ನಗರಗಳಲ್ಲಿ ಹೆಚ್ಚು ಸಬ್ಸಿಡಿ ಧಾನ್ಯಗಳನ್ನು ಖರೀದಿಸಲು ಸಮರ್ಥರಾಗಿರುವುದರಿಂದ ಆರ್ಥಿಕತೆ ಚಲನಶೀಲವಾಗಿದೆ. ಅರ್ಹ ಫಲಾನುಭವಿಗಳು ಉಳಿಸಿದ ಸ್ವಲ್ಪ ಹಣದಿಂದ ಸಬ್ಸಿಡಿ ದರದ ಆಹಾರ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.

ಪಿಯೂಷ್‌ ಗೋಯಲ್‌, ಕೇಂದ್ರ ಆಹಾರ ಸಚಿವ

ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಹೆಚ್ಚು ಸಬ್ಸಿಡಿ ದರದ ಧಾನ್ಯಗಳನ್ನು ಖರೀದಿಸುವ ಸ್ವಾತಂತ್ರ್ಯದೊಂದಿಗೆ ಸುಮಾರು 80 ಕೋಟಿ ಭಾರತೀಯರಿಗೆ ಆಹಾರ ಭದ್ರತೆಯ ಅಭೂತಪೂರ್ವ ಸಬಲೀಕರಣ (ಸಶಕ್ತೀಕರಣ) ನೀಡುವ ಮೂಲಕ ದೇಶಾದ್ಯಂತ ಒಂದು ಮೌನ ಕ್ರಾಂತಿ ನಡೆಯುತ್ತಿದೆ. ಇದು ಮೋದಿ ಸರ್ಕಾರದ ಬಡವರ ಪರವಾದ ಯೋಗಕ್ಷೇಮ ವಿಧಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಅಪಾರ ಸಂಖ್ಯೆಯ ಜನರ ಊಹೆಗಿಂತ ಮಿಗಿಲಾಗಿ ದೇಶದ ಮೇಲೆ ದೊಡ್ಡ ಪರಿವರ್ತನೆಯ ಪ್ರಭಾವವನ್ನು ಉಂಟುಮಾಡುವ ಸಾಮರ್ಥ್ಯವನ್ನು ಈ ಪ್ರಯತ್ನವು ಹೊಂದಿದೆ.

ಒಂದು ರಾಷ್ಟ್ರ-ಒಂದು ಪಡಿತರ ಚೀಟಿ (ಒಎನ್‌ಒಆರ್‌ಸಿ) ಯೋಜನೆಯು ಕೇವಲ ಹಿಂದುಳಿದವರನ್ನು ಬೆಂಬಲಿಸುವ ಮತ್ತು ಪೋಷಿಸುವ ಹೆಚ್ಚಿನ ಪರಿಣಾಮ ಬೀರುವ ಕಲ್ಯಾಣ ಯೋಜನೆ ಅಲ್ಲ. ಇದು ನ್ಯಾಯಬೆಲೆ ಅಂಗಡಿಗಳನ್ನು ತೀವ್ರ ಪೈಪೋಟಿಗೆ ಒಡ್ಡುತ್ತದೆ. ವಲಸೆ ಕಾರ್ಮಿಕರು ಈಗ ನಗರಗಳಲ್ಲಿ ಹೆಚ್ಚು ಸಬ್ಸಿಡಿ ಧಾನ್ಯಗಳನ್ನು ಖರೀದಿಸಲು ಸಮರ್ಥರಾಗಿರುವುದರಿಂದ ಆರ್ಥಿಕತೆ ಚಲನಶೀಲವಾಗಿದೆ. ಅರ್ಹ ಫಲಾನುಭವಿಗಳು ಉಳಿಸಿದ ಸ್ವಲ್ಪ ಹಣದಿಂದ ಸಬ್ಸಿಡಿ ದರದ ಆಹಾರ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.

ಭಾರತದಲ್ಲಿ ಸುಮಾರು 6 ಕೋಟಿ ಜನರು ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. 8 ಕೋಟಿ ಜನರು ತಮ್ಮ ರಾಜ್ಯದೊಳಗೆ ಕಾಲೋಚಿತವಾಗಿ ವಲಸೆ ಹೋಗುತ್ತಾರೆ. ಈ ಯೋಜನೆಯು ಒಡಿಶಾ, ಬಿಹಾರ, ಪಶ್ಚಿಮ ಬಂಗಾಳ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳ ವಲಸೆ ಕಾರ್ಮಿಕರಿಗೆ ಪರಿವರ್ತನೀಯ ಪರಿಣಾಮಗಳನ್ನು ಉಂಟುಮಾಡುತ್ತಿದೆ. ಹಿಂದೆ, ಅಂತಹ ಕಾರ್ಮಿಕರು ಕೆಲಸ ಮಾಡಲು ನಗರಗಳಿಗೆ ಹೋದಾಗ, ಅವರು ನ್ಯಾಯಬೆಲೆ ಅಂಗಡಿಗಳಿಂದ ಸಬ್ಸಿಡಿ ದರದ ಆಹಾರ ಧಾನ್ಯಗಳನ್ನು ಪಡೆಯುವುದರಿಂದ ವಂಚಿತರಾಗಿದ್ದರು. ಅವರು ತಮ್ಮ ಊರಿನ ನ್ಯಾಯಬೆಲೆ ಅಂಗಡಿಯಲ್ಲಿ ನೋಂದಾಯಿಸಿದ್ದರೂ ಸಹ, ಅವರ ಕುಟುಂಬಗಳು ಹೆಚ್ಚಿನ ಮಾರುಕಟ್ಟೆದರ ನೀಡಿ ಆಹಾರ ಧಾನ್ಯಗಳನ್ನು ಖರೀದಿಸುತ್ತಿದ್ದವು. ಈಗ ಆ ಸಮಸ್ಯೆಗೆ ಮುಕ್ತಿ ನೀಡಲಾಗಿದೆ.

ಆತ್ಮನಿರ್ಭರ ಬದುಕಿಗೆ ಹಾದಿ:

ಒಎನ್‌ಒಆರ್‌ಸಿ ಯೋಜನೆಯೊಂದಿಗೆ, ಕಾರ್ಮಿಕ ಅಥವಾ ಕೆಲಸಗಾರ ಮತ್ತು ಆತನ ಕುಟುಂಬದ ಸದಸ್ಯರು ಸುಲಭವಾಗಿ ಆಹಾರ ಧಾನ್ಯಗಳನ್ನು ಪಡೆಯುವ ಪ್ರಯೋಜನಗಳನ್ನು ಪಡೆಯಬಹುದು. ಅವರ ಉಳಿತಾಯವು ದೊಡ್ಡದಾಗಿದೆ. ಏಕೆಂದರೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಹೆಚ್ಚಿನ ಸಬ್ಸಿಡಿ ಆಹಾರ ಧಾನ್ಯಗಳನ್ನು ಹೊರತುಪಡಿಸಿ, ಅವರಿಗೆ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ ಅಡಿ ಉಚಿತ ಆಹಾರ ನೀಡಲಾಗುತ್ತಿದೆ.

ಇದು ಭಾರತೀಯ ಕಾರ್ಮಿಕರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿರುವುದರಿಂದ, ಈ ಯೋಜನೆಯು ಈಗ ಆತ್ಮನಿರ್ಭರ ಭಾರತ್‌ ಅಭಿಯಾನದ ಅಡಿ ಪ್ರಧಾನ ಮಂತ್ರಿ ಅವರ ತಂತ್ರಜ್ಞಾನ ಚಾಲಿತ ವ್ಯವಸ್ಥೆಯ ಸುಧಾರಣೆಗಳ ಒಂದು ಭಾಗವಾಗಿದೆ.

ಆಹಾರ ಧಾನ್ಯಗಳ ಗುಣಮಟ್ಟ:

ಈ ಯೋಜನೆಯಿಂದ ಇತರೆ ದೂರಗಾಮಿ ಪರಿಣಾಮಗಳಿವೆ. ದಶಕಗಳಿಂದ ಪಡಿತರ ಅಂಗಡಿಗಳು ತಮ್ಮ ಪ್ರದೇಶದಲ್ಲಿ ಏಕಸ್ವಾಮ್ಯ ಹೊಂದಿದ್ದವು. ಅರ್ಹ ಫಲಾನುಭವಿಗಳಿಗೆ ನಿರ್ದಿಷ್ಟನ್ಯಾಯಬೆಲೆ ಅಂಗಡಿಗೇ ಹೋಗುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ಅಂಗಡಿ ಮಾಲಿಕರು ನಿರ್ಬಂಧಿತ ಮಾರುಕಟ್ಟೆಗೆ ಒಳಪಟ್ಟಿದ್ದರು, ಗುಣಮಟ್ಟಕಾಪಾಡಿಕೊಳ್ಳಲು ಅವರಿಗೆ ಯಾವುದೇ ಪ್ರೋತ್ಸಾಹಧನ ಇರಲಿಲ್ಲ. ಈಗ ಒಎನ್‌ಒಆರ್‌ಸಿ ಯೋಜನೆಯು ವಲಸಿಗರಿಗೆ ಮಾತ್ರವಲ್ಲದೆ, ಪ್ರತಿಯೊಬ್ಬ ಫಲಾನುಭವಿಗೆ ಉತ್ತಮ ಗುಣಮಟ್ಟದ ಧಾನ್ಯಗಳನ್ನು ಮಾರಾಟ ಮಾಡುವ ಜತೆಗೆ, ಉತ್ತಮ ಸೇವೆ ಒದಗಿಸುತ್ತಿದೆ. ಅಲ್ಲದೆ, ಮತ್ತೊಂದು ನ್ಯಾಯಬೆಲೆ ಅಂಗಡಿಯಿಂದ ಖರೀದಿಸುವ ಆಯ್ಕೆ ನೀಡುತ್ತದೆ. ಮಾರಾಟಗಾರರು ದೇಶದ ಪ್ರತಿ ರಾಜ್ಯದ 5 ಲಕ್ಷ ನ್ಯಾಯಬೆಲೆ ಅಂಗಡಿಗಳಿಂದ ಖರೀದಿ ಅವಕಾಶ ಹೊಂದಿದ್ದಾರೆ. ಇದು ಒಂದು ಹೆಗ್ಗುರುತಿನ ಬದಲಾವಣೆ. ಏಕೆಂದರೆ ಇದು ಅಂಗಡಿಯವರಿಗೆ ಹೆಚ್ಚು ಗುಣಮಟ್ಟಕಾಪಾಡಿಕೊಳ್ಳಲು ಮತ್ತು ಸ್ಪರ್ಧಾತ್ಮಕವಾಗಿರಲು ಪ್ರೇರೇಪಿಸುತ್ತಿದೆ.

ರೇಶನ್‌ ಅಂಗಡಿಗಳಿಗೆ ಸ್ಪರ್ಧೆ:

ದೇಶಾದ್ಯಂತ ಇರುವ ಲಕ್ಷಾಂತರ ನ್ಯಾಯಬೆಲೆ ಅಂಗಡಿಗಳಲ್ಲಿ ಸ್ಪರ್ಧಾತ್ಮಕತೆಯ ಉತ್ತೇಜನವು ದೇಶದ ವ್ಯಾಪಾರ ಸಂಸ್ಕೃತಿಯಲ್ಲಿ ಒಟ್ಟಾರೆ ಸುಧಾರಣೆಗೆ ಕೊಡುಗೆ ನೀಡುತ್ತಿದೆ. ಇದು ಭಾರತೀಯರು ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಪಡೆಯಲು ಸಹಾಯ ಮಾಡುತ್ತಿದೆ. ವ್ಯಾಪಾರ ಪದ್ಧತಿಗಳಲ್ಲಿನ ಇಂತಹ ಬದಲಾವಣೆಯು ಗುಣಮಟ್ಟಸುಧಾರಿಸುವ ಮೂಲಕ ಮತ್ತು ರಫ್ತು ಮಾರುಕಟ್ಟೆಪ್ರವೇಶಿಸುವ ಮೂಲಕ ಸಣ್ಣ ಉದ್ಯಮಗಳು ಬಲವಾಗಿ ಬೆಳೆಯಲು ಸಹಾಯ ಮಾಡುತ್ತಿದೆ. ಇದು ಹಲವಾರು ಉದ್ಯೋಗಗಳನ್ನು ಸಹ ಸೃಷ್ಟಿಸುತ್ತಿದೆ.

ಒಎನ್‌ಒಆರ್‌ಸಿ ಈಗಾಗಲೇ ಬಲವಾಗಿ ಶುಭಾರಂಭ ಮಾಡಿದೆ. ಕೋಟಿಗಟ್ಟಲೆ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಸೇರಿದಂತೆ ನಗರದ ಬಡವರಾದ ಚಿಂದಿ ಆಯುವವರು, ಬೀದಿ ನಿವಾಸಿಗಳು, ಸಂಘಟಿತ ಮತ್ತು ಅಸಂಘಟಿತ ವಲಯದ ಹಂಗಾಮಿ ಕಾರ್ಮಿಕರು, ಮನೆಗೆಲಸದವರು ಈ ಮಹತ್ವಾಕಾಂಕ್ಷಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. 2019ರ ಆಗಸ್ವ್‌ನಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ ಸುಮಾರು 80 ಕೋಟಿ ಪೋರ್ಟಿಬಿಲಿಟಿ ವಹಿವಾಟುಗಳನ್ನು ದಾಖಲಿಸಲಾಗಿದೆ. ಇದು ಫಲಾನುಭವಿಗಳಿಗೆ ನಿಯಮಿತವಾಗಿ ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ ಮತ್ತು ಪ್ರಧಾನ ಮಂತ್ರಿಗಳ ಗರೀಬ್‌ ಕಲ್ಯಾಣ ಅನ್ನ ಯೋಜನೆಯ ಆಹಾರ ಧಾನ್ಯಗಳನ್ನು ತಲುಪಿಸುವ ಆಂತರಿಕ ಮತ್ತು ಅಂತಾರಾಜ್ಯ ವಹಿವಾಟುಗಳನ್ನು ಒಳಗೊಂಡಿದೆ. ಈ ವಹಿವಾಟುಗಳಲ್ಲಿ, 2020ರ ಏಪ್ರಿಲ್‌ನಿಂದ ಕೋವಿಡ್‌ ಸೋಂಕು ಕಾಣಿಸಿಕೊಂಡ ಅವಧಿಯಲ್ಲಿ 69 ಕೋಟಿ ವಹಿವಾಟು ವರದಿಯಾಗಿದೆ.

ಶೇ.99 ಪಡಿತರ ಅಂಗಡಿ ಡಿಜಿಟಲೈಸ್‌:

ಡಿಜಿಟಲ್‌ ಇಂಡಿಯಾ ಅಭಿಯಾನಕ್ಕೆ ಪ್ರಧಾನ ಮಂತ್ರಿ ಅವರ ಉತ್ತೇಜನವು ದೇಶಕ್ಕೆ ದೊಡ್ಡ ಚಾಲನಾಶಕ್ತಿಯಾಗಿದೆ. ಇದು ಬಡವರು ಮತ್ತು ನಿರ್ಗತಿಕರಿಗೆ ಆಹಾರ ನೀಡಲು ಕೂಡ ಸಹಾಯ ಮಾಡಿದೆ. ಪ್ರಸ್ತುತ ಶೇ.100ರಷ್ಟುಪಡಿತರ ಚೀಟಿಗಳು ಡಿಜಿಟಲೀಕರಣಗೊಂಡಿವೆ. ಇದಲ್ಲದೆ, 5.3 ಲಕ್ಷಕ್ಕೂ ಹೆಚ್ಚು (99%) ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್‌ ಪಾಯಿಂಟ್‌ ಆಫ್‌ ಸೇಲ್‌ ಸಾಧನಗಳನ್ನು ಸ್ಥಾಪಿಸಲಾಗಿದೆ.

ಎಲ್ಲಾ ಸಂಭಾವ್ಯ ಫಲಾನುಭವಿಗಳು ಯೋಜನೆಯ ಲಾಭ ಪಡೆದುಕೊಳ್ಳುವಂತೆ ಈ ಸರ್ಕಾರವು ಹೆಚ್ಚಿನ ಕ್ರಮ ಕೈಗೊಂಡಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಮತ್ತಷ್ಟುಫಲಾನುಭವಿಗಳನ್ನು ಸೇರಿಸಲು ಅನುಕೂಲವಾಗುವಂತಹ 11 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಾಯೋಗಿಕ ಆಧಾರದ ಮೇಲೆ ಸಾಮಾನ್ಯ ‘ನೋಂದಣಿ ಸೌಲಭ್ಯ’ ಪ್ರಾರಂಭಿಸಿದೆ.

ಯೋಜನೆ ಅರಿವು ಮೂಡಿಸಲು ಪ್ರಚಾರ:

ಈ ಯೋಜನೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಕಾರ್ಯತಂತ್ರದ ಪ್ರಭಾವ ಮತ್ತು ಸಂವಹನಕ್ಕಾಗಿ ಕೈಜೋಡಿಸಿವೆ. 167 ಎಫ್‌ಎಂ ರೇಡಿಯೊ ಮತ್ತು 91 ಸಮುದಾಯ ರೇಡಿಯೊ ಕೇಂದ್ರಗಳನ್ನು ಬಳಸಿಕೊಂಡು ಹಿಂದಿ ಮತ್ತು 10 ಇತರ ಪ್ರಾದೇಶಿಕ ಭಾಷೆಗಳಲ್ಲಿ ರೇಡಿಯೊ ಆಧಾರಿತ ಪ್ರಚಾರವನ್ನು ಸರ್ಕಾರ ಕೈಗೊಂಡಿದೆ. ರೈಲುಗಳಲ್ಲಿ ಪ್ರಯಾಣಿಸುವ ವಲಸೆ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಅವರ ಸಂದೇಶ ನೀಡಲು 2,400 ರೈಲು ನಿಲ್ದಾಣಗಳಲ್ಲಿ ಪ್ರಕಟಣೆಗಳು ಮತ್ತು ಪ್ರದರ್ಶನಗಳನ್ನು ವ್ಯವಸ್ಥೆ ಮಾಡಲಾಗಿದೆ. ಸಂದೇಶಗಳನ್ನು ಪ್ರದರ್ಶಿಸಲು ಸಾರ್ವಜನಿಕ ಬಸ್‌ಗಳನ್ನು ಸಹ ಬಳಸಲಾಗಿದೆ.

ಈ ಯೋಜನೆಯು ನರೇಂದ್ರ ಮೋದಿ ಸರ್ಕಾರದ ಪ್ರಮುಖ ಕಾರ್ಯವಿಧಾನವನ್ನು ಪ್ರತಿಬಿಂಬಿಸುತ್ತಿದೆ. ಸಾರ್ವಜನಿಕ ನೀತಿಯನ್ನು ಕಡು ಬಡವರಿಗೆ ಮತ್ತು ಸಮಾಜದ ನಿರ್ಲಕ್ಷಿತ ಹಾಗೂ ಸೌಲಭ್ಯ ವಂಚಿತ ವರ್ಗಗಳಿಗೆ ಅನುಕೂಲವಾಗುವ ರೀತಿಯಲ್ಲಿ ರೂಪಿಸಲಾಗಿದೆ. ಬಡವರಿಗೆ ಬ್ಯಾಂಕ್‌ ಖಾತೆಗಳು, ನೇರ ನಗದು ವರ್ಗಾವಣೆ, ಆರೋಗ್ಯ ವಿಮೆ, ಪ್ರತಿ ಹಳ್ಳಿಯಲ್ಲಿ ವಿದ್ಯುತ್‌, ದೂರದ ಪ್ರದೇಶಗಳಲ್ಲಿಯೂ ಗುಣಮಟ್ಟದ ಗ್ರಾಮೀಣ ರಸ್ತೆಗಳು ಮತ್ತು ಬಡವರಿಗೆ ಅಡುಗೆ ಅನಿಲ ಪೂರೈಕೆ ಮತ್ತು ಇತರ ಪ್ರಯೋಜನಗಳು ಈ ನೀತಿ, ತತ್ವ ಮತ್ತು ಆಡಳಿತದ ಕಾರ್ಯವಿಧಾನವಾಗಿವೆ. ಸ್ವಾತಂತ್ರ್ಯದ 75ನೇ ವರ್ಣಾಚರಣೆಯ ಈ ಸಂದರ್ಭದಲ್ಲಿ, ಭಾರತವು ಎಲ್ಲರಿಗೂ ಆಯ್ಕೆಯ ಸ್ವಾತಂತ್ರ್ಯ ನೀಡಲು ವೇಗವಾಗಿ ಚಲಿಸುತ್ತಿದೆ. ನಾವು ಸಹ 75ನೇ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸೋಣ ಮತ್ತು ಈ ಆಯ್ಕೆಯನ್ನು ಸಕ್ರಿಯಗೊಳಿಸೋಣ.