ಬೆಂಗಳೂರು, (ನ.30): ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮುಂದಿನ 24 ಗಂಟೆಯೊಳಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದ್ದು,  ಡಿ.2 ಅಥವಾ 3ರಂದು ಕನ್ಯಾಕುಮಾರಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ. ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

 ಶ್ರೀಲಂಕಾದ ಟ್ರಿಂಕಾಮಲೀಯ 680 ಕಿಮೀ ದೂರದಲ್ಲಿ ಹಾಗೂ ಕನ್ಯಾಕುಮಾರಿಯ 1,090 ಕಿಮೀ ಅಂತರದಲ್ಲಿ ಸದ್ಯ ಮಾರುತಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡಿ.4ರಿಂದ 2 ದಿನ ಭಾರಿ ಮಳೆಯಾಗಲಿದೆ.

ವರ್ಷ ಮುಗಿಯುವಾಗ ಆಘಾತದ ವಿಚಾರ ನುಡಿದರು ಕೋಡಿ ಶ್ರೀ : ಅವರ ಭವಿಷ್ಯದಲ್ಲೇನಿದೆ..?

ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮಂಡ್ಯ ಹಾಗೂ ಮೈಸೂರಿನಲ್ಲಿ ಡಿ.4ರಂದು ಭಾರಿ ಮಳೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್​​ ಘೋಷಿಸಲಾಗಿದೆ. ಡಿ.5ರಂದು ಈ ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ.

 ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಸದ್ಯ ಒಣಹವೆ ಮುಂದುವರಿದಿದೆ. ರಾಜ್ಯದಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಡಿ.1ರಿಂದ ಡಿ.3ರವರೆಗೆ ಕೆಲ ಭಾಗಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.