ದಾವಣಗೆರೆ  (ನ.23): ಕರ್ನಾಟಕ ಸೇರಿ ಎಲ್ಲೆಡೆ ರಾಜಕೀಯ ವಿಪ್ಲವವಾಗಲಿದೆ ಎಂದು ಕೋಡಿ ಶ್ರೀ ಭವಿಷ್ಯ ನುಡಿದಿದ್ದಾರೆ. 

ದಾವಣಗೆರೆಯಲ್ಲಿ ಮಾತನಾಡಿದ ಕೋಡಿ ಮಠದ ಸ್ವಾಮೀ  ಮುಂದಿನ ಭವಿಷ್ಯದ ಬಗ್ಗೆ ಮಾತನಾಡಿದ್ದು, ಮುಂದೆ ಬರುವ ಗ್ರಹಣ ಫಲದಲ್ಲಿ ಕೆಟ್ಟದಿದೆ,  ಜಗತ್ತಿನಲ್ಲಿ ರಾಜಕೀಯ ವಿಪ್ಲವ ಆಗಲಿದೆ.  ಕರ್ನಾಟಕ ರಾಜಕೀಯದಲ್ಲೂ ಬದಲಾವಣೆ ಆಗಲಿದೆ  ಎಂದಿದ್ದಾರೆ. 

"

ಸಿಎಂ ಬದಲಾವಣೆ ಬಗ್ಗೆ ಭವಿಷ್ಯ ಹೇಳಿದರೆ ನಾನು ಊರಿಗೆ ಹೋಗೋದೆ ಕಷ್ಟ ಎಂದ ಸ್ವಾಮಿಜಿ ದುಡ್ಡು ಮಾತಾನಾಡ್ತಾ ಇದೆ, ಹಾಗಾಗಿ  ಕಷ್ಟ ಇದೆ ಎಂದರು. 

ಹಸ್ತರೇಖೆಯಿಂದ ತಿಳಿಯಿರಿ ವೈವಾಹಿಕ ಜೀವನದ ರಹಸ್ಯ..! .

ಗ್ರಹಣದ ಫಲಗಳು ಕೆಟ್ಟದಿವೆ. ಬರುವ ದಿನಗಳು ಶುಭಫಲ ಇಲ್ಲ. ಇನ್ನೂ ಮಳೆ ಬರುವ ಲಕ್ಷಣ ಇದೆ. ಈಗಾಗಲೇ ಇರುವ ಕೊರೋನಾ ಮಹಾಮಾರಿ ಇನ್ನೂ ಹೆಚ್ಚಾಗಲಿದೆ ಎಂದರು

ದುಡ್ಡಿನ ಹಾವಳಿ ಜಾಸ್ತಿಯಾಗಿದೆ ನ್ಯಾಯ  ಸತ್ತು ಹೋಗಲಿದೆ ಎಂದ ಸ್ವಾಮೀಜಿ, ವರ್ಷಾಂತ್ಯಕ್ಕೆ ದೊಡ್ಡ  ಘಟನೆಗಳು ನಡೆಯಲಿವೆ.  ಮನುಷ್ಯ ಕುಲಕ್ಕೆ ನೆಮ್ಮದಿ ಇಲ್ಲದ ವಾತಾವರಣ ನಿರ್ಮಾಣವಾಗಲಿದೆ ಎಂದಿದ್ದಾರೆ.