ಮಹಾಮಾರಿ ಕರೋನಾಗೆ ಕರ್ನಾಟಕದಲ್ಲೇ ಮೊದಲ ಬಲಿ..ಎಚ್ಚರ ಎಚ್ಚರ
ರಾಜ್ಯದಲ್ಲಿ ದಾಖಲಾಯ್ತು ಮೊದಲ ಕರೋನಾ ಸಾವು/ ಕಲಬುರಗಿಯ ವೃದ್ಧ ಮೃತಪಟ್ಟಿದ್ದು ಕರೋನಾದಿಂದಲೇ/ ದೃಢಪಡಿಸಿದ ಆರೋಗ್ಯ ಸಚಿವರು
ಕಲಬುರಗಿ[ಮಾ.12]: ಡೆಡ್ಲಿ ಕೊರೋನಾಗೆ ದೇಶದಲ್ಲಿ ಮೊದಲ ಬಲಿಯಾಗಿದೆ. ಕಲಬುರಗಿಯ 75 ವರ್ಷದ ವೃದ್ಧ ಶಂಕಿತ ಕೊರೋನಾದಿಂದ ಬಳಲುತ್ತಿದ್ದು ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಮೊದಲು ಕರೋನಾದಿಂದಲೇ ಸಾವು ಎಂದಿದ್ದ ಆರೋಗ್ಯ ಇಲಾಖೆ ನಂತರ ಬಹು ಅಂಗಾಂಗ ವೈಫಲ್ಯ ಎಂದು ಹೇಳಿತ್ತು. ಆದರೆ ಈಗ ಆರೋಗ್ಯ ಸಚಿವರೇ ಅಧಿಕೃತವಾಗಿ ಇದು ಕರೋನಾದ ಸಾವು ಎಂದು ತಿಳಿಸಿದ್ದಾರೆ.
ದುಬೈನಿಂದ ಬಂದಿದ್ದ ಕಲಬುರಗಿಯ 75 ವರ್ಷದ ವೃದ್ಧ ಶಂಕಿತ ಕೊರೋನಾ ವೈರಸ್‌ನಿಂದ ಬಳಲುತ್ತಿದ್ದ. ವೈದ್ಯಾಧಿಕಾರಿಗಳು ಇವರ ಮೇಲೆ ನಿಗಾ ವಹಿಸಿದ್ದು, ಮಂಗಳವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದರು. ಈಗ ಸಾವಿನ ವರದಿ ಬಂದಿದ್ದು ಕರೋನಾದಿಂದಲೇ ಮೃತಪಟ್ಟಿರುವುದು ಖಚಿತವಾಗಿದೆ
ಕೊರೋನಾ ವೈರಸ್: ಹೆಚ್ಚಿದ ಆತಂಕ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೂ ಕರ್ನಾಟಕದಲ್ಲಿ ಗುರುವಾರ ಮತ್ತೊಂದು ಕರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಈಗ ವೃದ್ಧ ಮೃತಪಟ್ಟಿದ್ದು ದೃಢವಾಗಿರುವುದುದರಿಂದ ಆತ ಸಂಪರ್ಕದಲ್ಲಿದ್ದ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಬೇಕಾದ ಅನಿವಾರ್ತತೆ ಸೃಷ್ಟಿಯಾಗಿದೆ.
ಹಾಸನದಲ್ಲಿ ಕೊರೋನಾ ವೈರಸ್ ಪತ್ತೆ ಕೇಂದ್ರ
ಏನಾಗಿತ್ತು?
ಉಮ್ರಾ ಯಾತ್ರೆಗಾಗಿ ಸೌದಿಗೆ ಹೋಗಿದ್ದ ವೃದ್ಧ, ಫೆಬ್ರವರಿ 29ರಂದು ಕಲಬುರಗಿಗೆ ವಾಪಸ್ಸಾಗಿದ್ದರು. ಸೌದಿಯಿಂದ ವಾಪಸ್ಸಾದ ವೇಳೆ ಕೆಮ್ಮು, ಜ್ವರದಿಂದ ಬಳಲುತ್ತಿದ್ದ ವೃದ್ಧನನ್ನು ಮಾರ್ಚ್ 5ರಂದು ಕಲಬುರಗಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಕರೆದೊಯ್ಯಲಾಗಿತ್ತು. ಆದರೆ ಇಲ್ಲಿ ವರಿಗೆ ಚಿಕಿತ್ಸೆ ನೀಡಲು ನಿರಾಕರಿಸಲಾಗಿದ್ದು, ಅವರನ್ನು ಕಲಬುರಗಿಗೆ ವಾಪಸ್ ತರಲಾಗಿತ್ತು. ಗಂಟಲ ದ್ರವವನ್ನು ಪರೀಕ್ಷೆಗೆಂದು ಬೆಂಗಳೂರಿಗೆ ಕಳುಹಿಸಲಾಗಿತ್ತು.