ಪ್ರಯಾಣಿಕರಿಗೆ ಗುಡ್‌ನ್ಯೂಸ್: ಬಿಎಂಟಿಸಿಯ ರಾತ್ರಿ ಪಾಳಿ ಬಸ್‌ನಲ್ಲಿ ಒನ್ ಆ್ಯಂಡ್ ಹಾಫ್ ಟಿಕೆಟ್ ರದ್ದು
ಬಿಎಂಟಿಸಿಯ ರಾತ್ರಿ ಪಾಳಿ ಬಸ್‌ಗಳಲ್ಲಿ ಹೆಚ್ಚುವರಿ ಟಿಕೆಟ್ ಶುಲ್ಕ ತೆಗೆದುಕೊಳ್ಳುವ ವ್ಯವಸ್ಥೆಯನ್ನು ರದ್ದು ಮಾಡಿ, ಇಡೀ ದಿನ ಆಯಾ ಬಸ್‌ಗಳ ಸೇವೆಗೆ ತಕ್ಕಂತೆ ಏಕರೂಪ ಟಿಕೆಟ್ ಶುಲ್ಕ ಪಡೆಯಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬೆಂಗಳೂರು (ಸೆ.5) : ಬಿಎಂಟಿಸಿಯ ರಾತ್ರಿ ಪಾಳಿ ಬಸ್‌ಗಳಲ್ಲಿ ಹೆಚ್ಚುವರಿ ಟಿಕೆಟ್ ಶುಲ್ಕ ತೆಗೆದುಕೊಳ್ಳುವ ವ್ಯವಸ್ಥೆಯನ್ನು ರದ್ದು ಮಾಡಿ, ಇಡೀ ದಿನ ಆಯಾ ಬಸ್‌ಗಳ ಸೇವೆಗೆ ತಕ್ಕಂತೆ ಏಕರೂಪ ಟಿಕೆಟ್ ಶುಲ್ಕ ಪಡೆಯಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಎಂಟಿಸಿ(BMTC) ರಚನೆಯಾಗಿ 25 ವರ್ಷ ಪೂರೈಸಿದ್ದು, ಅದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಬಿಎಂಟಿಸಿ ಸೇವೆ ಸೇರಿದಂತೆ ಇನ್ನಿತರ ಮಾಹಿತಿ ನೀಡುವ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ. ಅದರ ಜತೆಗೆ ಬಿಎಂಟಿಸಿಯಲ್ಲಿ ಏಕರೂಪ ಟಿಕೆಟ್ ದರ ನಿಗದಿ ಮಾಡಲಾಗುತ್ತಿದೆ. ಈವರೆಗೆ ರಾತ್ರಿ ಪಾಳಿಯಲ್ಲಿ ಸಂಚರಿಸುವ ಬಸ್‌ಗಳಲ್ಲಿ ಮಾಮೂಲಿ ದರದ ಶೇ.50ರಷ್ಟುಹೆಚ್ಚಿನ ಟಿಕೆಟ್ ದರ ವಸೂಲಿ ಮಾಡಲಾಗುತ್ತಿತ್ತು. ಅದನ್ನು ರದ್ದು ಮಾಡಿ, ಎಲ್ಲ ಅವಧಿಯಲ್ಲಿ ಆಯಾ ಬಸ್ ಸೇವೆಗೆ ನಿಗದಿ ಮಾಡಿರುವ ಟಿಕೆಟ್ ದರವನ್ನು ಪಡೆಯಲಾಗುತ್ತದೆ. ಈ ಕುರಿತಂತೆ ಶೀಘ್ರದಲ್ಲಿ ಆದೇಶಿಸಲಾಗುವುದು ಎಂದರು.
ಬೆಂಗಳೂರು: ಫ್ಲೈಓವರ್‌ನಲ್ಲಿ ಬಿಎಂಟಿಸಿ ಬಸ್ ಪಲ್ಟಿ..!
ಕಲ್ಯಾಸಿಪಾಳ್ಯ ಬಸ್ ನಿಲ್ದಾಣವನ್ನು ಸರ್ಕಾರ .60 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಈ ನಿಲ್ದಾಣದಿಂದ ಬಿಎಂಟಿಸಿಯ 4,400 ಟ್ರಿಪ್‌ಗಳು, ಕೆಎಸ್ಸಾರ್ಟಿಸಿಯ 400 ಹಾಗೂ ಖಾಸಗಿಯ 250 ಬಸ್‌ಗಳು ಸೇವೆ ನೀಡುತ್ತಿವೆ. ಬಸ್ ನಿಲ್ದಾಣದ ಮೂಲಸೌಕರ್ಯ ವ್ಯವಸ್ಥೆ ಕುರಿತಂತೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ, ಪರಿಶೀಲನೆ ನಡೆಸಲಾಗಿದೆ. ಸಣ್ಣಪುಟ್ಟಸಮಸ್ಯೆಗಳಿದ್ದು, ಅದನ್ನು ಸರಿಪಡಿಸಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ. ಬಸ್ ನಿಲ್ದಾಣದ ನಿರ್ವಹಣೆಗಾಗಿ ಇಲ್ಲಿಂದ ಸೇವೆ ನೀಡುವ ಖಾಸಗಿ ಬಸ್‌ಗಳಿಂದ ಪ್ರತಿನಿತ್ಯ .50 ಪಡೆಯಲಾಗುವುದು ಎಂದು ಹೇಳಿದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ, ಹಿರಿಯ ಅಧಿಕಾರಿಗಳು ಇದ್ದರು.
ತಾನು ಕೆಲಸ ನಿರ್ವಹಿಸಿದ್ದ ಬಿಎಂಟಿಸಿ ಡಿಪೋಗೆ ಸೂಪರ್‌ಸ್ಟಾರ್ ರಜನೀಕಾಂತ್ ಸದ್ದಿಲ್ಲದೆ ಭೇಟಿ