ಇದೆಂಥ ನಿರ್ಲಕ್ಷ್ಯ; ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಅಧಿಕಾರಿಗಳೇ ಗೈರು !

ಗುಳೇದಗುಡ್ಡ ತಾಲೂಕಿನ ಸುಮಾರು 30ಕ್ಕೂ ಹೆಚ್ಚು ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಶನಿವಾರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ತಾಲೂಕಿನ ಸುಮಾರು 30ಕ್ಕೂ ಹೆಚ್ಚು ಇಲಾಖೆಗಳ ಪೈಕಿ ಕೇವಲ 5-6 ಇಲಾಖೆಗಳ ಪ್ರತಿನಿಧಿಗಳು ಹಾಜರಾಗಿದ್ದಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶಗೊಂಡ ಕನ್ನಡಪರ ಸಂಘಟನೆಗಳವರು ಸಭೆ ಬಹಿಸ್ಕರಿಸಿದ್ದರಿಂದ ಸಭೆ ಮುಂದೂಡಿದ ಘಟನೆ ನಡೆಯಿತು.

Officials absent from Rajyotsava preliminary meeting guledagudda rav

 ಗುಳೇದಗುಡ್ಡ (ಅ.23) :  ಗುಳೇದಗುಡ್ಡ ತಾಲೂಕಿನ ಸುಮಾರು 30ಕ್ಕೂ ಹೆಚ್ಚು ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಶನಿವಾರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ತಾಲೂಕಿನ ಸುಮಾರು 30ಕ್ಕೂ ಹೆಚ್ಚು ಇಲಾಖೆಗಳ ಪೈಕಿ ಕೇವಲ 5-6 ಇಲಾಖೆಗಳ ಪ್ರತಿನಿಧಿಗಳು ಹಾಜರಾಗಿದ್ದಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶಗೊಂಡ ಕನ್ನಡಪರ ಸಂಘಟನೆಗಳವರು ಸಭೆ ಬಹಿಸ್ಕರಿಸಿದ್ದರಿಂದ ಸಭೆ ಮುಂದೂಡಿದ ಘಟನೆ ನಡೆಯಿತು.

ಶನಿವಾರ ಸಂಜೆ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ ಎಸ್.ಎಫ್. ಬೊಮ್ಮಣ್ಣವರ ಅಧ್ಯಕ್ಷತೆಯಲ್ಲಿ ಸಭೆಗೆ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ 5-6 ಇಲಾಖೆ ಪ್ರತಿನಿಧಿಗಳು ಮಾತ್ರ ಹಾಜರಿದ್ದರು. ಕನ್ನಡಾಂಬೆಗೆ ನುಡಿನಮನ ಸಲ್ಲಿಸುವ ಮಹತ್ವದ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಗೈರು ಉಳಿದಿದ್ದು ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಯಿತು.

 

4 ಸಾವಿರಕ್ಕೂ ಅಧಿಕ‌ ಜನರ ಜೀವ ಕಾಪಾಡಿದ ಭೂದೇವಮ್ಮ: ಜೀವರಕ್ಷಕಿಗೆ ಸೀಗಬೇಕಿದೆ ರಾಜ್ಯೋತ್ಸವದ ಗರಿ?

ತಹಸೀಲ್ದಾರ ಎಸ್.ಎಫ್.ಬೊಮ್ಮಣ್ಣವರ್ ಕೆಲ ಇಲಾಖಾ ತಾಲೂಕು ಅಧಿಕಾರಿಗಳಿಗೆ ಸಭೆಗೆ ಯಾಕೆ ಬಂದಿಲ್ಲವೆಂದು ಎಲ್ಲರ ಸಮಕ್ಷಮದಲ್ಲಿ ಫೋನ್ ಮಾಡಿ ಕೇಳಿದರೆ, ನಮ್ಮ ಇಲಾಖಾ ಕಚೇರಿ ಗುಳೇದಗುಡ್ಡದಲ್ಲಿ ಇಲ್ಲ, ಬೇರೆ ಕೆಲಸಗಳಿವೆ. ನಮಗೆ ಸರಿಯಾದ ಮಾಹಿತಿ ಇಲ್ಲ. ಹೀಗೆ ವಿವಿಧ ಕಾರಣಗಳನ್ನು ಹೇಳಿದರು.

ಕನ್ನಡಪರ ಸಂಘಟನೆಗಳ ಬಹಿಷ್ಕಾರ:

ಅಧಿಕಾರಿಗಳ ಈ ನಡೆಗೆ ಕೆರಳಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಭೆ ಮುಂದೂಡುವಂತೆ ಆಗ್ರಹಿಸಿ ಬಹಿಷ್ಕರಿಸಿ ಹೊರನಡೆದರು.

ತಾಲೂಕು ಮಟ್ಟದ ಅಧಿಕಾರಿಗಳೇ ಇಂತಹ ಮಹತ್ವದ ಸಭೆ ಬರದಿದ್ದರೆ ಹೇಗೆ? ಸರ್ಕಾರದ ಆದೇಶಕ್ಕೂ ಬೆಲೆ ಇಲ್ಲವೇ ? ಈ ವಿಷಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಭೆ ಮುಂದೂಡಲು ಒತ್ತಾಯಿಸಿದಾಗ ತಹಸೀಲ್ದಾರರು ಸಭೆಯನ್ನು ಅ.26ಕ್ಕೆ ಮುಂದೂಡಿದರು. ಅಂದಿನ ಸಭೆಗೂ ಇಲಾಖೆಗಳ ಅಧಿಕಾರಿಗಳು ಹಾಜರಾಗದಿದ್ದರೆ, ತಾಲೂಕು ಆಡಳಿತ ಹೊರಗಿಟ್ಟು ಕನ್ನಡಪರ ಸಂಘಟನೆಗಳೇ ನ.1ರಂದು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲು ಕನ್ನಡಪರ ಸಂಘಟನೆಗಳು ನಿರ್ಣಯ ಕೈಗೊಂಡವು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎ.ಎಫ್.ಮುಜಾವರ್, ಪಿಎಸೈ ಲಕ್ಷ್ಮಣ ಆರಿ ವೇದಿಕೆ ಮೇಲಿದ್ದರು. ಕರವೇ ಅಧ್ಯಕ್ಷ ರವಿ ಅಂಗಡಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಾ.ಸಿ.ಎಂ.ಜೋಶಿ, ಕಸಾಪ ಅಧ್ಯಕ್ಷ ಡಾ.ಎಚ್.ಎಸ್.ಘಂಟಿ, ಡಾ.ಚಂದ್ರಶೇಖರ ಕಾಳನ್ನವರ, ಶ್ರೀಕಾಂತ ಹುನಗುಂದ, ಅಕ್ತರ ಅಫಘಾನ್, ನಿಂಗಪ್ಪ ಎಣ್ಣಿ, ಖಜಾನೆ ಅಧಿಕಾರಿ ಪಾಟೀಲ, ನೋಂದಣಿ ಅಧಿಕಾರಿ ಗಾಣಿಗೇರ, ಶಾಲಾ ಮುಖ್ಯ ಶಿಕ್ಷಕ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

Bengaluru Police: ಪರೇಡ್‌ ಸೌಧನ್‌- ವಿಶ್ರಮ್‌ಗೆ ತಿಲಾಂಜಲಿ, ಕನ್ನಡದಲ್ಲಿ ಕಮಾಂಡಿಂಗ್‌ ಕೊಟ್ಟ ಪೊಲೀಸರು

"ಇದೊಂದೆ ಸಭೆ ಅಲ್ಲ. ನಾನು ಕರೆಯುವ ಯಾವ ಮಹತ್ವದ ಸಭೆಗೂ ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಹಾಜರಾಗುವುದಿಲ್ಲ. ಕೆಲವರು ತಮ್ಮ ಪ್ರತಿನಿಧಿಗಳನ್ನು ಕಳಿಸಿ ಕೈ ತೊಳೆದುಕೊಳ್ಳುತ್ತಾರೆ. ಹೀಗಾಗಿ ತಾಲೂಕು ಆಡಳಿತ ನಡೆಸುವುದೇ ಕಷ್ಟವಾಗಿದೆ. ಸಾರ್ವಜನಿಕರ ಕೆಲಸ ಕಾರ್ಯಗಳು ಕುಂಠಿತವಾಗುತ್ತಿವೆ."-

-ಎಸ್.ಎಫ್. ಬೊಮ್ಮಣ್ಣವರ್ ತಹಸೀಲ್ದಾರ್, ಗುಳೇದಗುಡ್ಡ

Latest Videos
Follow Us:
Download App:
  • android
  • ios