Asianet Suvarna News Asianet Suvarna News

4 ಸಾವಿರಕ್ಕೂ ಅಧಿಕ‌ ಜನರ ಜೀವ ಕಾಪಾಡಿದ ಭೂದೇವಮ್ಮ: ಜೀವರಕ್ಷಕಿಗೆ ಸೀಗಬೇಕಿದೆ ರಾಜ್ಯೋತ್ಸವದ ಗರಿ?

ಆಕೆ ವಿಷಜಂತು ಹಾವು ಕಡಿತಕ್ಕೊಳಗಾದವರಿಗೆ ಉಚಿತ ಚಿಕಿತ್ಸೆ ನೀಡುವ ಮಹಾತಾಯಿ. ಕಳೆದ 35 ವರ್ಷದಿಂದ ಜನರಿಂದ ಒಂದು ಪೈಸೆ ಹಣವನ್ನು ಪಡೆಯದೇ ಜನರ ಪಾಲಿಗೆ ಸಂಜೀವಿನಿಯಾಗಿದ್ದಾರೆ. 

Bhudevamma of Yadgir saved the lives of more than 4 thousand people gvd
Author
First Published Oct 16, 2023, 9:43 PM IST

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಅ.16): ಆಕೆ ವಿಷಜಂತು ಹಾವು ಕಡಿತಕ್ಕೊಳಗಾದವರಿಗೆ ಉಚಿತ ಚಿಕಿತ್ಸೆ ನೀಡುವ ಮಹಾತಾಯಿ. ಕಳೆದ 35 ವರ್ಷದಿಂದ ಜನರಿಂದ ಒಂದು ಪೈಸೆ ಹಣವನ್ನು ಪಡೆಯದೇ ಜನರ ಪಾಲಿಗೆ ಸಂಜೀವಿನಿಯಾಗಿದ್ದಾರೆ. ಹಗಲು-ರಾತ್ರಿ ಎನ್ನದೇ ಹಾವು ಕಡಿದವರಿಗೆ ಗೀಡಮೂಲಿಕೆಯ ಮೂಲಕ ಚಿಕಿತ್ಸೆ ನೀಡುವ ಮೂಲಕ ಸಾವಿರಾರು ಜನರು ಪ್ರಾಣ ಉಳಿಸಿದ್ದಾಳೆ. ಇಂತಹ ನಿಸ್ವಾರ್ಥ ಮಹಿಳೆಯ ಕಾರ್ಯಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇದರ ಕುರಿತಾದ ಒಂದು ಸ್ಟೋರಿ ಇಲ್ಲಿದೆ ನೋಡಿ.

ಸಾವಿರಾರು ಜನರ ಜೀವರಕ್ಷಕಿ ಭೂದೇವಿ: ಇದು ದುಡ್ಡಿರುವವರ ದುನಿಯಾ. ವ್ಯಾಪಾರ, ಕಲೆ ಹೀಗೆ ಹಲವು ಕ್ಷೇತ್ರಗಳಲ್ಲಿ ಕಮರ್ಷಿಯಲ್ ಚಿಂತನೆ ಆರಂಭವಾಗಿದೆ. ಆದ್ರೆ ಯಾದಗಿರಿಯಲ್ಲೊಬ್ಬ ನಿಸ್ಚಾರ್ಥ ಮಹಿಳೆಯಿದ್ದಾಳೆ. ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ಭೂದೇವಿ ಜಡಿ ಅವರು ಕಳೆದ 35 ವರ್ಷದಿಂದ ಯಾವುದೇ ಫಲಾಪೇಕ್ಷ ಬಯಸದೇ ತನ್ನ ಕಾಯಕವನ್ನು ಸದ್ದಿಲ್ಲದೇ ಮಾಡ್ತಿದ್ದಾಳೆ. ವಡಗೇರಾ ಪಟ್ಟಣ ಸೇರಿದಂತೆ ಹಲವು ಗ್ರಾಮದ ಜನರಿಗೆ ವಿಷಜಂತು ಹಾವು ಕಡಿದ್ರೆ ನೆನಪಾಗೋದು ಭೂದೇವಿ. ಭೂದೇವಿ ಹಾವು ಕಡಿದವರ ಪಾಲಿನ ಸಂಜೀವಿಯಾಗಿದ್ದಾಳೆ. 

ಲೋಕಸಭೆ ಚುನಾವಣೆ ಜಯಕ್ಕೆ 'ಗ್ಯಾರಂಟಿ' ಅಸ್ತ್ರ ಬಳಸಿ: ಸಚಿವ ಕೃಷ್ಣ ಬೈರೇಗೌಡ

ಯಾಕಂದ್ರೆ ನಾಗರಹಾವು, ಕಾಳಿಂಗ ಸರ್ಪ ಸೇರಿದಂತೆ ಯಾವುದೇ ಹಾವು ಕಡಿದ್ರು ಒಂದು ನಯಾಪೈಸೆ ದುಡ್ಡು ಪಡೆಯದೇ ಗೀಡಮೂಲಿಕೆಯ ಔಷಧ ನೀಡ್ತಾಳೆ. ಈ ಭೂದೇವಿ ಜಡಿ ಅವರ ಕುಟುಂಬವು ಮೂರು ತಲೆಮಾರುಗಳಿಂದ ಸುಮಾರು 100 ವರ್ಷಗಳ ಕಾಲ ಈ ಹಾವು ಕಡಿದವರಿಗೆ ಉಚಿತ ಔಷಧ ನೀಡುವ ಕೆಲಸ ಮಾಡ್ತಿದೆ. ಭೂದೇವಿ ಅವರ ಗಂಡನ ತಾತ ನೂರಿ ವರ್ಷದ ಹಿಂದೆ ಬಯಲು ಶೌಚಾಲಯ ಹೋಗಿದ್ನಂತೆ. ಒಂದು ಜಮನೀನಿಲ್ಲಿ ಹಾವು ಮತ್ತು ಮುಂಗಸಿ ಮಧ್ಯೆ ಭರ್ಜರಿ ಕಾಳಗ ಏರ್ಪಟ್ಟಿತಂತೆ. 

ಅದನ್ನು ಕಂಡು ಆ ತಾತ ಆ ರೋಮಾಂಚನ ಕಾಳಗದ ದೃಶ್ಯವನ್ನು ನೋಡುವಾಗ ಮತ್ತೊಂದು ದೃಶ್ಯ ನೋಡಿದ್ನಂತೆ. ಹಾವು-ಮುಂಗಸಿ ಮಧ್ಯೆದ ಕಾದಾಟದಲ್ಲಿ ಹಾವು ಮುಂಗಸಿಗೆ ಕಡಿದಾಗ ಅದು ಒಂದು ಗೀಡದ ಎಲೆಯನ್ನು ತಿನ್ನುತ್ತಿತ್ತಂತೆ ಅದನ್ನು ಆತ ನೋಡಿ. ಆ ಗೀಡದ ಎಲೆಯನ್ನು ಮನೆಗೆ ತಂದು ಆತನ ಹೆಂಡತಿ ನಾಗಮ್ಮನಿಗೆ ಕೊಡ್ತಾನೆ. ಆಗ ಕೆಲವು ದಿನಗಳ ಬಳಿಕ ಒಬ್ಬ ವ್ಯಕ್ಯಿಗೆ ಹಾವು ಕಡಿದಾಗ, ಆ ಎಲೆಯ ಔಷಧ ನೀಡಿದಾಗ ಆತನ ಪ್ರಾಣ ಉಳಿಯುತಂತೆ. ಹಾಗಾಗಿ ಭೂದೇವಿಯ ಅತ್ತೆ ತಾಯಮ್ಮ, ತಾಯಮ್ಮಳ ಅತ್ತೆ ನಾಗಮ್ಮ ಹೀಗೆ ಮೂರು ತಲೆಮಾರುಗಳಿಂದ ಇವ್ರು ಹಾವು ಕಡಿದವ್ರಿಗೆ ಉಚಿತ ಔಷಧ ನೀಡಿ ಬಡವರ ಪಾಲಿನ‌ ಸಂಜೀವಿನಿಯಾಗಿದ್ದಾರೆ.

ನಯಾಪೈಸೆ ಪಡೆಯದೇ ನಿಸ್ವಾರ್ಥ ಸೇವೆ: ಹಾವು ಕಡಿದವ್ರಿಗೆ ಔಷಧ ನೀಡುವ ಭೂದೇವಿ ಹಲವಾರು ನೀತಿ-ನಿಯಮಗಳನ್ನು ಪಾಲಿಸುತ್ತಾಳೆ. ಭೂದೇವಿ ವರ್ಷಕ್ಕೆ ಒಂದು ಸಲ ಜಮೀನಲ್ಲಿರುವ ಗೀಡದ ಎಲೆ ಔಷಧಿಯನ್ನು ತೆಗೆದುಕೊಂಡು ಬರ್ತಾಳೆ. ಅದು ಕೂಡ ಬಹಳಷ್ಟು ಸಂಪ್ರದಾಯದೊಂದಿಗೆ ಅದನ್ನು ಆ ಔಷಧಿ ಮನೆಗೆ ತರಲಾಗ್ತದೆ. ಭೂದೇವಿ ಔಷಧ ತರುವ ದಿನ ಅಂದ್ರೆ ಬೆಳಗಿನ ಜಾವವೇ ಜಮೀನಿಗೆ ತೆರಳುತ್ತಾಳೆ. ಯಾಕಂದ್ರೆ ಆಕೆಯ ನೆರಳು ಸಹ ಆಕೆಯ ಮೇಲೆ ಬೀಳಬಾರದು. ಅದಕ್ಕಾಗಿ ಅವತ್ತು ರಾತ್ರಿ ತಮ್ಮ ಮನೆಯನ್ನು ಶುಭ್ರವಾಗಿ ಸ್ವಚ್ಚ ಮಾಡಲಾಗ್ತದೆ. ಈ ರೀತಿಯ ಎಲ್ಲಾ ನೀತಿನಿಯಮವನ್ನು ಪಾಲಿಸಿಕೊಂಡು ಜಮೀನಿನಲ್ಲಿರುವ ಗೀಡದ ಸಮೇತವಾಗಿ ಕಿತ್ತಿಕೊಂಡು ಬರ್ತಾಳೆ. 

ಆ ಗೀಡವನ್ನು ನೆರಳಿನಲ್ಲಿ ಚೆನ್ನಾಗಿ ಒಣಗಿಸಲಾಗ್ತದೆ. ನಂತರ ನೆರಳಿನಲ್ಲಿ ಒಣಗಿದ ಗೀಡದ ಎಲೆಯನ್ನು ತೆಗೆಯಲಾಗ್ತದೆ, ಆ ಗೀಡದ ಎಲೆಗಳನ್ನು ಪುಡಿ ಪುಡಿಯಾಗಿ ಮಾಡಿ, ಅದನ್ನು ರೌಂಡ್ ಆಗಿ ಸಣ್ಣ ಬಾಲ್ ರೀತಿಯಲ್ಲಿ ಮಾಡುತ್ತಾಳೆ. ಇದನ್ನು ಹಾವು ಕಡಿದವ್ರಿಗೆ ಔಷಧ ನೀಡಿ, ಒಂದು ರಾತ್ರಿ ಮಲಗದಂತೆ ನೋಡಿಕೊಂಡ್ರೆ ಜೀವಕ್ಕೆ ಯಾವುದೇ ಆಪತ್ತು ಇಲ್ಲದೇ ಜೀವ ಉಳಿಯುತ್ತದೆ. ಈ ರೀತಿಯಾಗಿ ಸುಮಾರು ಜ‌ನರ ಪ್ರಾಣ ಕಾಪಾಡಿದ ಮಾಹತಾಯಿ ಭೂದೇವಿ. ಇಂತಹ ನಿಸ್ವಾರ್ಥ ಜೀವಿಯನ್ನು ಇಲ್ಲಿಯವರೆಗೂ ಯಾವುದೇ ಸರ್ಕಾರಗಳು ಗುರುತಿಸದೇ ಇರುವುದು ದುರ್ಧೈವ. ಜೀವರಕ್ಷಕಿ ಭೂದೇವಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಜನರ ಆಗ್ರಹ.

ಮೋದಿ ಜನಪರ ಯೋಜನೆಗಳು ಭಾರತೀಯರಿಗೆ ಶ್ರೀರಕ್ಷೆ: ಚಕ್ರವರ್ತಿ ಸೂಲಿಬೆಲೆ

ರಾಜ್ಯೋತ್ಸವ ಪ್ರಶಸ್ತಿ ಗರಿಗೆ ಜನರ ಆಗ್ರಹ: ಒಟ್ಟಿನಲ್ಲಿ ಸದ್ದಿಲ್ಲದೇ ಎಲೆಮರಿ ಕಾಯಿಯಂತೆ ನಿಸ್ವಾರ್ಥ ಸೇವೆಯಿಂದ ಸಾವಿರಾರು ಜನರ ಪ್ರಾಣ ಉಳಿದಿದೆ. ಸರ್ಕಾರ ಇಂತಹ ತೆರೆ ಮರೆಯಲ್ಲಿರುವ ಸಾಧಕರನ್ನು ಸರ್ಕಾರ ಗುರುತಿಸಬೇಕು. ಸಾವಿರಾರು ಜನರ ಜೀವ ಉಳಿಸಿದ ಭೂದೇವಿ ಅವ್ರಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಎಂಬುದು ಜನರ ಆಶಯವಾಗಿದೆ.

Follow Us:
Download App:
  • android
  • ios